Thursday, November 19, 2026

ಪ್ರಾಯೋಗಿಕ ಆವೃತ್ತಿ

ಡಾ.ಬಿ.ಆರ್.ಅಂಬೇಡ್ಕರ್ ಮಾನವ ಹಕ್ಕುಗಳ ಸಂರಕ್ಷಣಾ ಪಿತಾಮಹ – ಡಾ.ಯೋಗೇಂದ್ರಕುಮಾರ್

ಭಾರತ ದೇಶದಲ್ಲಿ ಮಾನವ ಹಕ್ಕುಗಳ ಸಂರಕ್ಷಣಾ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಎಂದು ಮಿಮ್ಸ್ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ಡಾ.ಯೋಗೇಂದ್ರಕುಮಾರ್ ತಿಳಿಸಿದರು.

ಮಂಡ್ಯನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಜಾಗೃತಿ ಕಾರ್ಯಾಗಾರಲ್ಲಿ ”ಮಹಿಳೆಯರ ಹಕ್ಕುಗಳು ರಕ್ಷಣೆ ಮತ್ತು ಕೌಟುಂಬಿಕ ದೌರ್ಜನ್ಯ ಕಾಯ್ದೆ ಮತ್ತು ಪಿಎನ್‌ಡಿ.ಟಿ.ಕಾಯ್ದೆ” ಕುರಿತು ನಡೆದ ಉಪನ್ಯಾಸದಲ್ಲಿ ಅವತು ಮಾತನಾಡಿದರು.

ಸಂವಿಧಾನ ನೀಡಿರುವ ಮಾನವ ಹಕ್ಕುಗಳನ್ನು ಯಾರೂ ಕಸಿದುಕೊಳ್ಳಲಾಗದು, ಹಕ್ಕುಗಳ ಸಂರಕ್ಷಣೆಗಾಗಿಯೇ ನ್ಯಾಯಾಲಯ, ಪೊಲೀಸ್ ಇಲಾಖೆ ಇದೆ, ಉಲ್ಲಂಘಿಸಿದಲ್ಲಿ, ದುರ್ಬಳಕೆ ಮಾಡಿಕೊಂಡಿದ್ದಲ್ಲಿ ಶಿಕ್ಷೆ ವಿಧಿಸುವ ಅಧಿಕಾರ, ಪರಿಹಾರರ ಕೊಡಿಸುವ ಅಧಿಕಾರ ಸಂವಿಧಾನಕ್ಕೆ ಇದೆ ಎಂದು ನುಡಿದರು.

ವೈವಿಧ್ಯತೆಯ ಸಾಂಸ್ಕೃತಿಕತೆಯುಳ್ಳ ಭಾರತೀಯರಿಗೆ ಮಾನವ ಹಕ್ಕುಗಳ ಸಂರಕ್ಷಣಾ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಎಂಬುದು ಎಷ್ಟೋ ಜನರಿಗೆ ತಿಳಿಯದು, ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಟವನ್ನು ನಡೆಸಿದ್ದಾರೆ, ಜಾಗೃತಿ ಮೂಡಿಸಿದ್ದಾರೆ, ಇಂತಹ ವಿಶ್ವ ಕಾನೂನು ತಜ್ಞ ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳುವುದು ಅವಶ್ಯವಿದೆ ಎಂದು ತಿಳಿಸಿದರು.

ಭಾರತದಲ್ಲಿ ಮಹಿಳೆಯರ ಹಕ್ಕುಗಳು ಸಾಕಷ್ಟು ಉಲ್ಲಂಘನೆಯಾಗುತ್ತಿವೆ, ಮಹಿಳೆಯರ ಹಕ್ಕುಗಳಿಗಾಗಿ ಸಮಾನತೆಗಾಗಿ ಯಾರಾದರೂ ಹೋರಾಟ ಮಾಡಿದ್ದರೆ ಅದು ಅಂಬೇಡ್ಕರ್ ಅವರು ಮಾತ್ರ, ಹಿಂದೂ ಕೋಡ್ ಬಿಲ್ ಮಂಡನೆ ಆಗದಿರುವುದಕ್ಕಾಗಿ ತಮ್ಮ ಕೇಂದ್ರ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹಾನ್ ವ್ಯಕ್ತಿತ್ವ ಅಂಬೇಡ್ಕರ್ ಅವರದು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಪಿಇಎಸ್ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಯೋಗೇಶ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಮಹಿಳಾ ಮುನ್ನೆಡೆ ಕಾರ್ಯದರ್ಶಿ ಪೂರ್ಣಿಮಾ, ನೆಲದನಿ ಬಳಗ ಅಧ್ಯಕ್ಷ ಎಂ.ಸಿ.ಲಂಕೇಶ್, ವಿಮೋಚನಾ ಮಹಿಳಾ ಸಂಘಟನೆ ಸಂಯೋಜಕ ಜನಾರ್ಧನ ಹೂತಗೆರೆ, ಪ್ರೊ. ಜಯಕುಮಾರ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ