ಶೀಘ್ರದಲ್ಲೇ ಸೂರಿಲ್ಲದ ಬಡವರಿಗೆ ಸೂರು ಕಲ್ಪಿಸಲು ಯೋಜನೆ ರೂಪಿಸುತ್ತೇನೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಪಾಂಡವಪುರ ಪಟ್ಟಣದ 9ನೇ ವಾರ್ಡಿನ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ರಾಜು ಪರವಾಗಿ ಮತ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರು ಮೊದಲ ಬಾರಿಗೆ ಶಾಸಕರಾಗಿದ್ದ ವೇಳೆ ಪಟ್ಟಣದಲ್ಲಿ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದೊಂದಿಗೆ ಪಾಂಡವಪುರದಲ್ಲಿ 1 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ವಿತರಿಸಿದ್ದರು. ಅವರ ಆಶಯದಂತೆಯೇ ನಾನು ಕೂಡ ಪುರಸಭೆ ವ್ಯಾಪ್ತಿಯಲ್ಲಿ 30ಎಕರೆ ಜಮೀನು ಗುರುತಿಸಿ ಸೂರಿಲ್ಲದ ಬಡವರಿಗೆ ಸೂರು ಕಲ್ಪಿಸುತ್ತೇನೆ ಎಂದರು.
ಪುರಸಭೆ 2 ಮತ್ತು 9ನೇ ವಾರ್ಡ್ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಾದ ಆರ್.ರಾಜೇಂದ್ರ ಹಾಗೂ ಎಸ್.ರಾಜು ಅವರ ಗೆಲುವಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ. ಎರಡು ವಾರ್ಡ್ ಗಳ ಮತದಾರರು ಅಭ್ಯರ್ಥಿ ಗೆಲ್ಲಿಸುವ ಭರವಸೆ ಮಾತುಗಳನ್ನಾಡಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ, ಪುರಸಭೆ ಎರಡು ವಾರ್ಡ್ ಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಸರ್ವೋದಯ ಕರ್ನಾಟಕ ಮೈತ್ರಿ ಅಭ್ಯರ್ಥಿಗಳ ಪರವಾಗಿ ಜನಾದೇಶ ಬಂದಿದ್ದು, ಸರ್ಕಾರದ ಜನ ಕಲ್ಯಾಣ ಗ್ಯಾರಂಟಿ ಯೋಜನೆಗಳು ಮತವಾಗಿ ಪರಿವರ್ತನೆಯಾಗಲಿದೆ ಎಂದರು.
ಈ ವೇಳೆ ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ರೈತಸಂಘದ ತಾಲೂಕು ಅಧ್ಯಕ್ಷ ಪಿ.ನಾಗರಾಜು, ಕಾಂಗ್ರೆಸ್ ಮೇಲುಕೋಟೆ ಉಸ್ತುವಾರಿ ಕೊತ್ತತ್ತಿ ರಾಜು, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್, ಕಾಂಗ್ರೆಸ್ ಜಿಲ್ಲಾ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ, ಪುರಸಭೆ ಸದಸ್ಯರಾದ ಜಯಲಕ್ಷ್ಮಮ್ಮ, ಕೆ.ಉಮಾಶಂಕರ್, ಮುಖಂಡರಾದ ಎಚ್.ಎನ್.ವಿಜಯಕುಮಾರ್, ರೈಟರ್ ಸ್ವಾಮಿಗೌಡ, ಹಾರೋಹಳ್ಳಿ ಲಕ್ಷ್ಮೇಗೌಡ, ರಾಮಕೃಷ್ಣ, ಶೆಟ್ಟಪ್ಪರ ಜಯರಾಂ, ವಿ.ಹರೀಶ್, ಟಿ.ಎಸ್.ಹಾಳಯ್ಯ, ಬೇವಿನಕುಪ್ಪೆ ಯೋಗೇಶ್, ಲವ, ಮಿಲ್ ಸಂತೋಷ್, ನಲ್ಲಿ ಯೋಗೇಶ್, ದಿವಾಕರ್, ದೀಪು, ಎನ್.ಶರವಣ, ಕಣಿವೆಕೊಪ್ಪಲು ರಾಜು, ಶ್ರೀಧರ, ಕೋಳಿ ಮಂಜ, ಬ್ಲಾಕಿ ಮಹೇಶ ಇತರರಿದ್ದರು.




