Friday, November 20, 2026

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ವೈವಿಧ್ಯತೆಯಲ್ಲಿ ಏಕತೆ ಕಾಣುವ ಗಿಡದ ಜಾತ್ರೆ

ನಾಗಮಂಗಲ ತಾಲೂಕು ದೇವಲಾಪುರ ಹೋಬಳಿಗೆ ಸೇರಿರುವ ಹೆಚ್ಎನ್ ಕಾವಲ್ ಬಳಿ ಪ್ರತಿ ಡಿಸೆಂಬರ್ ಮಾಸದಲ್ಲಿ ಗಿಡದ ಜಾತ್ರೆ ಅದ್ದೂರಿಯಾಗಿ ಸಹಸ್ರಾರು ಭಕ್ತಾದಿಗಳು ಒಂದೆಡೆ ಸೇರಿರುವುದು ವಿಶಿಷ್ಟವಾದ ಭಕ್ತಿಭಾವ ಸಂಗಮವಾಗಲಿದ್ದು, ನಾಳೆ ಡಿ.22ರಂದು ನಡೆಯಲಿದೆ.

ನಾಗನಕೆರೆ ಸಮೀಪ ಕಾಡುಗಳ ಮಧ್ಯೆ ಒಂದೇ ದಿನ ನಡೆಯುವ ಈ ಗಿಡದ ಜಾತ್ರೆ ವೆಂಕಟೇಶ್ವರನ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಜಾತ್ರೆ ದಾಸಪ್ಪನಿಗೆ ಹರಕೆ ಒಪ್ಪಿಸುತ್ತಾರೆ.

ಜಾತ್ರೆ ಆರಂಭ ಆಗುವ ಮುನ್ನ ದಿನವೇ ಈ ಕಾಡಿನಲ್ಲಿ ಭಕ್ತಾದಿಗಳು ವ್ಯಾಪಾರಸ್ಥರು ಸೇರುತ್ತಾರೆ ಹಾಗೂ ಇಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದಿದ್ದರೂ ಭಕ್ತಾದಿಗಳಿಗೆ ಸ್ನಾನ ಮಾಡುವ ಕೆರೆಯಿದ್ದು ಹಾಗೂ ಪ್ರತಿಯೊಂದು ಭಕ್ತಾದಿಗಳ ಕುಟುಂಬಸ್ಥರು ಆಯಾ ದಾಸಯ್ಯನ ಮಂಟಪಗಳು ಇದ್ದು, ಇನ್ಯಾವುದೇ ಮೂಲ ಸೌಕರ್ಯಗಳು ಈ ಕಾಡಿನಲ್ಲಿ ಇರುವುದಿಲ್ಲ.

ವಿಶೇಷತೆಗಳು

ಈ ಜಾತ್ರೆ ತುಂಬಾ ದಾಸಪ್ಪರ ಗುಂಪು ಒಂದೆಡೆ ಸೇರಿ ಗೋವಿಂದನ ಸ್ಮರಣೆ ಮಾಡುವುದು ವಿಶೇಷವಾಗಿದ್ದು ದಾಸಪ್ಪಂದಿರಿಗೆ ಹರಕೆ ಹಾಗೂ ಮಧ್ಯ ಮಾಂಸ ನೀಡುವುದು ಸಂಪ್ರದಾಯವಾಗಿದ್ದು ವಿಶೇಷವಾಗಿದೆ. ಜಾತ್ರೆಯಲ್ಲಿ ವಿಶೇಷವಾಗಿ ಜವನ ಬಾಳೆಹಣ್ಣು, ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತದೆ ಹಾಗೂ ಹೊರ ಜಿಲ್ಲೆಗಳಿಂದ ಭಕ್ತಾದಿಗಳ ಸಂಖ್ಯೆ ಈ ಜಾಗದಲ್ಲಿ ಸೇರುವುದು ವಿಶೇಷವಾಗಿದೆ. ವೆಂಕಟೇಶ್ವರನ ಭಕ್ತಾದಿಗಳು ಈ ಕಾಡಿನ ಮಧ್ಯದಲ್ಲಿ ಭಕ್ತಾದಿಗಳಿಗೆ ಭೋಜನ ವ್ಯವಸ್ಥೆಯು ಅಲ್ಲಲ್ಲಿ ನಡೆಯುತ್ತದೆ.

ಈ ವಿಶಿಷ್ಟ ಜಾತ್ರೆಗೆ ಲಕ್ಷಾಂತರ ಮಂದಿ ಭಕ್ತಾದಿಗಳ ಜೊತೆಗೆ ಈ ಪರಿಸರ ಮಧ್ಯೆ ನಡೆಯುವ ವಿಶಿಷ್ಟ ಜಾತ್ರೆ ಅನುಭವ ವೆಂಕಟೇಶ್ವರ ಸ್ವಾಮಿಯ ಸ್ಮರಣೆಗೆ ಮಂಡ್ಯ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ಭಕ್ತಾದಿಗಳ ಸಂಖ್ಯೆ ಬರುವುದು ವಾಡಿಕೆಯಾಗಿದೆ.

ಈ ಗಿಡದ ಜಾತ್ರೆಯು ಎರಡನೇ ಚಿಕ್ಕ ತಿರುಪತಿ ಎಂದೆ ಪ್ರಸಿದ್ಧವಾಗಿದ್ದು ತಿರುಪತಿಗೆ ಹೋಗದ ಭಕ್ತರು ಈ ಜಾತ್ರೆಯಲ್ಲಿ ಪೂಜೆ ಹರಕೆ ಗಳನ್ನ ನೀಡುವುದು ತಿರುಪತಿಗೆ ಹೋದಷ್ಟೇ ಪುಣ್ಯ ಎಂದು ಸಂಪ್ರದಾಯವಾಗಿದೆ ಆದ್ದರಿಂದ ಈ ಜಾತ್ರೆ ಭಾಗವಹಿಸಿದ ಹ ರಿಭಕ್ತರು ಎರಡನೇ ಚಿಕ್ಕ ತಿರುಪತಿ ಎಂದು ಪ್ರಸಿದ್ಧಿ ಪಡೆದಿದೆ.

ಗಿಡದ ಜಾತ್ರೆಯು ಇತಿಹಾಸ ಹಿನ್ನೆಲೆ ಉಳ್ಳ ಜಾತ್ರೆಯಾಗಿದ್ದು ಈ ಜಾತ್ರೆ ನಡೆಯುವ ಮುನ್ನ ಬೆಟ್ಟದ ಮೇಲೆ ಹಿಂದಿನಿಂದ ದೇವಾಲಯವಿದ್ದು ಅಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಯ ವಿಗ್ರಹವು ಕಳವಾದ ಮೇಲೆ ಬೆಟ್ಟದ ಮೇಲಿರುವ ದೇವಾಲಯ ಪಾಳು ಬಿದ್ದಿದ್ದು ನಂತರ ಬೆಟ್ಟದ ಕೆಳಭಾಗದಲ್ಲಿ ಈ ಜಾತ್ರೆಯು ಅನಾಧಿಕಾಲದಿಂದಲೂ ನಡೆದು ಬಂದಿದ್ದು, ನಂತರ ಇತ್ತೀಚಿನ ದಿನಗಳಲ್ಲಿ ಬೆಟ್ಟದ ಮೇಲಿರುವ ಗುಡಿಯನ್ನು ಪುನರ್ ನಿರ್ಮಾಣ ಮಾಡುವ ಮುಖಾಂತರ ವೆಂಕಟೇಶ್ವರ ಸ್ವಾಮಿಯ ನೂತನ ವಿಗ್ರಹ ಪ್ರತಿಷ್ಠಾಪನೆ ಮಾಡಿಸಿ ಅಲ್ಲಿಯೇ ಜಾತ್ರೆಗಳು ಉತ್ಸವ ಮೂರ್ತಿಗಳು ತಿರುಪತಿಯಂತೆ ಪೂಜಾ ವಿಧಿ ವಿಧಾನಗಳು ನಡೆಸುತ್ತಿರುವುದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಕಂಡು ಬಂದಿದೆ.

ದೇವಲಾಪುರ ಜಗದೀಶ್

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ