Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮಹಿಳಾ ವಿವಿ ಸ್ನಾತಕೋತ್ತರ ಕೇಂದ್ರಕ್ಕೆ ನ್ಯಾಕ್ ತಂಡ ಭೇಟಿ

ಮಂಡ್ಯ ತಾಲ್ಲೂಕಿನ ಬಿ.ಹೊಸೂರು ಕಾಲೋನಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಹೊರಾವರಣ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (National Assessment and Accreditation Council)  ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿತು.

ವಿಶ್ವವಿದ್ಯಾಲಯಗಳಲ್ಲಿ ಮೂಲಸೌಕರ್ಯ, ಶೈಕ್ಷಣಿಕ ಗುಣಮಟ್ಟದ ಮಾನದಂಡಗಳನ್ನು ಆಧರಿಸಿ ಶ್ರೇಣಿ ನೀಡುವ ಉದ್ದೇಶ ಹೊಂದಿದ ನ್ಯಾಕ್ ಸಮಿತಿಯ ಸದಸ್ಯರಾದ ಪ್ರೊ.ಸಿ.ತಿಲಕಂ, ಎಂ.ಎಸ್ ವಿಶ್ವವಿದ್ಯಾನಿಲಯ, ತಿರುನಲ್ವೇಲಿ ಹಾಗೂ ಅಸ್ಸಾಂ ನ ಗುವಾಹತಿಯ ಡಾನ್ ಬಾಸ್ಕೋ ವಿವಿ ಪ್ರೊ.ಜಾನಿ ಜೋಸ್ ಅವರು ಕೇಂದ್ರಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ವಿಶ್ವವಿದ್ಯಾನಿಲಯ ಹೊರಾವರಣ ಕಟ್ಟಡ, ಮೂಲಸೌಕರ್ಯ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಎನ್ಎಸ್ಎಸ್ ಘಟಕ, ಕ್ರೀಡಾ ಕೊಠಡಿ, ತರಗತಿಗಳು ಹಾಗೂ ವಿದ್ಯಾರ್ಥಿನಿಯರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ನಂತರ ವಿದ್ಯಾರ್ಥಿನಿಯರು, ಪೋಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರ ಜೊತೆ ಮಾತುಕತೆ ನಡೆಸಿದರು. ನ್ಯಾಕ್ ಸಮಿತಿ ಕೇಂದ್ರಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಕೇಂದ್ರದ ಸಂಯೋಜಕ ಡಾ.ಕಿರಣ್ ಜಿ.ಎನ್ ಮಾರ್ಗದರ್ಶನದಲ್ಲಿ ಸಿಬ್ಬಂದಿ ವರ್ಗದವರು ಕಳೆದ ಕೆಲವು ತಿಂಗಳುಗಳಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ