Friday, September 20, 2024

ಪ್ರಾಯೋಗಿಕ ಆವೃತ್ತಿ

ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ:ಸಚಿವ ಮುನಿರತ್ನ ಹೇಳಿಕೆ

ಸಂಪುಟ ವಿಸ್ತರಣೆಯಾಗಲಿ ಅಥವಾ ಸಂಪುಟ ಪುನರ್ ರಚನೆಯಾಗಲಿ ಸದ್ಯಕ್ಕಿಲ್ಲ ಎಂದು ತೋಟಗಾರಿಕಾ ಸಚಿವ ಮುನಿರತ್ನ ಸ್ಪಷ್ಟ ಪಡಿಸಿದರು.
ಮಂಡ್ಯ ಜಿಲ್ಲೆಗೆ ಭೇಟಿ ನೀಡುವ ಮಾರ್ಗ ಮಧ್ಯೆ ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಧ್ಯಂತರ ಚುನಾವಣೆ ಏನು ಇಲ್ಲ. ಸಂಪುಟ ರಚನೆ ಸದ್ಯಕ್ಕಂತೂ ಇಲ್ಲ.ಈ ಬಗ್ಗೆ ನಮಗೂ ಮಾಹಿತಿ ಇಲ್ಲ ಎಂದರು.

ಕಾಂಗ್ರೆಸ್ ನವರಿಗೆ ಮಧ್ಯಂತರ ಚುನಾವಣೆ ಬೇಕಾಗಿದೆ. ನಮ್ಮ ಪಕ್ಷ ಸುಭದ್ರವಾಗಿದ್ದು, ಯಾವ ಚುನಾವಣೆಯು ನಡೆಯುವುದಿಲ್ಲ.ಸದ್ಯಕ್ಕೆಯಾವ ಸಂಪುಟವು ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರವಾಹ ಬಂದಾಗ ಬಿಜೆಪಿ ಸರ್ಕಾರ ಯಾವ ರೀತಿ ಪರಿಹಾರ ನೀಡಿದೆ. ಯಾವ ರೀತಿ ಸಹಕಾರ ನೀಡಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.ಅದರ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುವುದು ಶೋಭೆ ತರಲ್ಲ.

ಅವರು ಪಕ್ಷದ ಲಾಭಕ್ಕಾಗಿ ಮಾತನಾಡುತ್ತಾರೆ.ಈ ಬಗ್ಗೆ ನಾವು ಮಾತನಾಡುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದರು.

ಬೈರಾಪಟ್ಟಣದ ಹಣ್ಣು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ್ದೇನೆ.ಅಲ್ಲಿ ಎಲ್ಲಾ ಬಗೆಯ ಹಣ್ಣುಗಳನ್ನು ಸಂಸ್ಕರಣೆ ಮಾಡಲು ಕಟ್ಟಡ ನಿರ್ಮಾಣ ಮಾಡಲಾಗಿದೆ.

ಕೆ.ಎಂ.ದೊಡ್ಡಿಯ ಛತ್ರದ ಹೊಸಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿದ್ದು ಅಲ್ಲಿಗೆ ಭೇಟಿ ನೀಡಲು ತೆರಳುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಜರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!