ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 2 ಕೋಟಿ ರೂ.ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.
ಯಲಿಯೂರು ಗ್ರಾಮದಿಂದ ಯಲಿಯೂರು ಕೋಡಿವರೆಗೆ ರಸ್ತೆ ಅಭಿವೃದ್ಧಿ, ವೈ.ಯರಹಳ್ಳಿ ಹಾಗೂ ವೈ.ಯರಹಳ್ಳಿ ಹೊಸ ಬಡಾವಣೆಯಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ,ವಿನಾಯಕ ಬಡಾವಣೆ ಹಾಗೂ ಕಾವೇರಿ ನಗರ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಚುನಾವಣೆ ಸಂದರ್ಭದಲ್ಲಿ ರಸ್ತೆಗಳನ್ನು ಅಭಿವೃದ್ಧಿ ಮಾಡಬೇಕೆಂದು ಜನಸಾಮಾನ್ಯರು ಒತ್ತಾಯ ಮಾಡಿದರು.ಜನರ ಭರವಸೆಗಳು ಭರವಸೆಯಾಗಿ ಉಳಿಯಬಾರದು ಎಂದು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಾರಂಭಿಕವಾಗಿ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಹಂತ ಹಂತವಾಗಿ ಕಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಅಭಿವೃದ್ಧಿ,
ಯುಜಿಡಿ ಸಮಸ್ಯೆಗಳನ್ನು ಬಗೆಹರಿಸುವ ಕೆಲಸದ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಜನರು ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಯಲಿಯೂರು ವಿಎಸ್ಎಸ್ಎನ್ ಅಧ್ಯಕ್ಷ ವೈ.ಎಚ್. ಹನುಮಂತು, ಮುಖಂಡರಾದ ವೈ.ಕೆ. ಕುಮಾರ್,ಡೈರಿ ರಾಜು, ದೊಣ್ಣೆ ಹನುಮಂತು,ಕರೀಗೌಡ, ಗ್ರಾಪಂ ಅಧ್ಯಕ್ಷೆ ಸುಧಾ, ಕಾಳಶೇಖರ್, ರಘು, ಶಿವಶಂಕರ್, ಚಂದ್ರಶೇಖರ್, ದೇವೇಗೌಡ, ಅಶೋಕ್ ಕುಮಾರ್, ಶಿವಮಲ್ಲು, ಭಾಗ್ಯಲಕ್ಷ್ಮಿ, ಸುವರ್ಣಾ ವತಿ,ಇಂಜಿನಿಯರ್ ರಾಮಸ್ವಾಮಿ, ಗುತ್ತಿಗೆದಾರರಾದ ಶಶಿಕುಮಾರ್, ಮಂಜೇಶ್ ,ಅರುಣ್ ಇತರರು ಹಾಜರಿದ್ದರು.




