ಮದ್ದೂರು ತಾಲೂಕು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ತಿನ ಕಚೇರಿಯಲ್ಲಿ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2022-23 ನೇ ಸಾಲಿನ ಕೆಯುಡಬ್ಲ್ಯೂಜೆ “ಬಂದರಿನಾಥ್ ಹೊಂಬಾಳೆ ” ಪ್ರಶಸ್ತಿಗೆ ಭಾಜನರಾಗಿರುವ ಕೆ ಎನ್ ಪುಟ್ಟಲಿಂಗಯ್ಯ ಅವರನ್ನು ಅಭಿನಂದಿಸಲಾಯಿತು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಎಂ, ಸಿ, ಬಸವರಾಜು ಅಭಿನಂದಿಸಿ ಮಾತನಾಡಿ, ಪುಟ್ಟಲಿಂಗಯ್ಯ ನವರು ಉದಯಕಾಲ ಪತ್ರಿಕೆ ಸಂಪಾದಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಾಮಾಜಿಕ ಕಳಕಳಿ ಉಳ್ಳವರಾಗಿದ್ದಾರೆ, ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ಅವರು, ಪತ್ರಿಕಾ ಮಾಧ್ಯಮ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಿವಕುಮಾರ್ ಮಾತನಾಡಿ, ಪುಟ್ಟಲಿಂಗಯ್ಯನವರು ಬಂದರಿನಾಥ್ ಹೊಂಬಾಳೆ ಪ್ರಶಸ್ತಿಗೆ ಭಾಜನರಾಗಿರುವುದು ಸಂತೋಷ ತಂದಿದೆ, ಮದ್ದೂರು ತಾಲೂಕಿನವರೇ ಆಗಿರುವುದರಿಂದ ಅವರಿಗೆ ತವರಿನ ಸನ್ಮಾನವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಶಿಕ್ಷಕರಾದ ಬಿ.ವಿ.ಹಳ್ಳಿ ನಾರಾಯಣ್ ಮಾತನಾಡಿದರು ಈ ಸಂದರ್ಭದಲ್ಲಿ ಮದ್ದೂರು ತಾಲೂಕು ಅಹಿಂದ ವೇದಿಕೆಯ ಉಪಾಧ್ಯಕ್ಷ ಇಮ್ತಿಯಾಜ್ ಉಲ್ಲಾ ಖಾನ್, ಸಂಘಟನಾ ಕಾರ್ಯದರ್ಶಿ ಶಶಿ ಕುಮಾರ್, ಮಹಾದೇವಯ್ಯ, ಪ್ರಗತಿಪರ ಸಂಘಟನೆಗಳ ಸಂಚಾಲಕ ಶ್ರೀಕ ಶ್ರೀನಿವಾಸ್, ಗ್ರಾಮ ಸಹಾಯಕರ ಸಂಘದ ಖಜಾಂಚಿ ರಾಜ್ ಕುಮಾರ್ ಮತ್ತಿತರರಿದ್ದರು.




