Tuesday, May 14, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ನಾಳೆ ತಾಲ್ಲೂಕಿದಾದ್ಯಂತ ವಿದ್ಯುತ್ ವ್ಯತ್ಯಯ

ವರದಿ : ಪ್ರಭು ವಿ ಎಸ್

ಮದ್ದೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ 11 ಕೆ.ವಿ. ಪರಿವರ್ತಕ-1 ಮತ್ತು ಪರಿವರ್ತಕ-2, 66 ಕೆ.ವಿ. ಲೈನ್ ಜಿ.ಓ.ಎಸ್. ಮತ್ತು ಎಲ್ಲಾ 11 ಕೆ.ವಿ. ಜಿ.ಓ.ಎಸ್. ಮಾರ್ಗಗಳ ಬ್ರೇಕರ್‌ಗಳ ಅರ್ಥಿಂಗ್ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಮದ್ದೂರು ತಾಲ್ಲೂಕಿನಾದ್ಯಂತ ವಿದ್ಯುತ್ ವ್ಯತ್ಯಯವಾಗಲಿದೆ.

ಫೀಡರ್‌ಗಳಾದ ಎಫ್-1 ಮದ್ದೂರು ಮತ್ತು ಸೋಮನಹಳ್ಳಿ, ಎಫ್-2 ಹೆಚ್.ಕೆ.ವಿ.ನಗರ, ಎಫ್-3 ವಿವೇಕಾನಂದನಗರ (ಮದ್ದೂರು ಟೌನ್ ), ಎಫ್-6 ಬೆಸಗರಹಳ್ಳಿ, ಎಫ್-7 ಕೆ.ಐ.ಎ.ಡಿ.ಬಿ., ಎಫ್-8 ಸಿ.ಎ.ಕೆರೆ, ಎಫ್-9 ಕ್ಯಾತಘಟ್ಟ, ಎಫ್-10 ಮಠದದೊಡ್ಡಿ, ಎಫ್-11 ಕ್ಲೀನ್ ಪ್ಯಾಕ್ಸ್, ಎಫ್-12 ಛತ್ರದಹೊಸಹಳ್ಳಿ, ಎಫ್-13 ವಳಗೆರೆಹಳ್ಳಿ, ಎಫ್-14 ಸಾದೊಳಲು ಐಪಿ, ಎಫ್- 15 ಗುರುದೇವಹಳ್ಳಿ ಎನ್.ಜೆ.ವೈ. & ಎಫ್-16 ಬಸವನಪುರಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಫೀಡರ್‌ಗಳ ಗ್ರಾಮ ಪಂಚಾಯಿತಿಗಳಾದ ಸಿ.ಎ.ಕೆರೆ, ಕ್ಯಾತಘಟ್ಟ, ನಗರಕೆರೆ, ಗೊರವನಹಳ್ಳಿ, ಗೆಜ್ಜಲಗೆರೆ, ಸಾದೊಳಲು, ವಳಗೆರೆಹಳ್ಳಿ ಮತ್ತು ಚಾಮನಹಳ್ಳಿ ಗ್ರಾ ಪಂ ವ್ಯಾಪ್ತಿಗಳಲ್ಲಿ ಫೆ. 4ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗುತ್ತಿದ್ದು, ಎಲ್ಲಾ ಗ್ರಾಹಕರು ಸಹಕರಿಸಬೇಕೆಂದು ಸೆಸ್ಕ್ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!