ಕೆ ಆರ್ ಪೇಟೆ ತಾಲೂಕು ಮುರುಕನಹಳ್ಳಿ, ತೊಂಡೆಕೆರೆ, ಐಚನಹಳ್ಳಿ , ಬೂಕನಕೆರೆ , ವಿಠಲಾಪುರ ಹರಿಹರಪುರ ಗ್ರಾಮ ಪಂಚಾಯತಿಗಳಲ್ಲಿ ಸಂಚರಿಸಿ ಸಂವಿಧಾನ ಜಾಗೃತಿ ಜಾಥಾವು ಸಂವಿಧಾನದ ಆಶಯ ಮತ್ತು ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿತು.
ಬೂಕನಕೆರೆ ವೃತ್ತದಲ್ಲಿ ವಿದ್ಯಾರ್ಥಿಗಳು ವೃತ್ತ ನಿರ್ಮಿಸಿ ಸಂವಿಧಾನ ಪೀಠಿಕೆ ಓಡುವುದರೊಂದಿಗೆ ಗಮನ ಸೆಳೆದರು. ಈ ಸಂದರ್ಭದಲ್ಲಿ ಕಲಾತಂಡಗಳು ಹಾಗೂ ವಾದ್ಯ ತಂಡಗಳು ಮತ್ತು ಕುಂಭಮೇಳಗಳು ಮೆರವಣಿಗೆಗೆ ಮೆರಗು ತಂದವು.

ಗ್ರಾಮಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ವಿದೇಶಿ ಪ್ರಜೆಗಳು ಸಹ ಜಾಥಾದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.




