Friday, September 20, 2024

ಪ್ರಾಯೋಗಿಕ ಆವೃತ್ತಿ

ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧೆ ಖಚಿತ; ಸುಮಲತಾ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 5 ವರ್ಷಗಳ ದಿಶಾ ಸಭೆಗಳಲ್ಲಿ ಹಲವು ವಿಷಯ ಚರ್ಚೆಯಾಗಿದೆ. ಚರ್ಚೆಯಾದ ವಿಷಯ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಅನ್ನೋ ಬಗ್ಗೆ ವಿವರ ಕೇಳಬೇಕು, ಎಂದು ದಿಶಾ ಸಭೆಯ ಆರಂಭಕ್ಕೂ ಮುನ್ನ ತಿಳಿಸಿದರು.

ಜೆಡಿಎಸ್‌‌ಗೆ ಮಂಡ್ಯ ಕ್ಷೇತ್ರ ಕೊಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಂತೆ ಕಂತೆ ಮೊದಲಿನಿಂದಲೂ ಇದೆ. ಅಧಿಕೃತ ನಿರ್ಧಾರ ಬರೋವರೆಗೂ ಕಾಯೋಣ. ನನಗೆ ವಿಶ್ವಾಸ ಇದೆ, ಮಂಡ್ಯ ಬಿಜೆಪಿಗೆ ಸಿಗಲಿದೆ.
ನಾನು ನನ್ನ ಟಿಕೆಟ್‌ಗಾಗಿ ಹೋರಾಟ ಮಾಡ್ತಿಲ್ಲ. ನನ್ನ ಹೋರಾಟ ಮಂಡ್ಯಕ್ಕೋಸ್ಕರ. ಮಂಡ್ಯದಲ್ಲಿ ಬಿಜೆಪಿ ಸಂಘಟಿಸಲು ನನ್ನ ಹೋರಾಟ. ನನಗೆ ಟಿಕೆಟ್ ಪಡೆಯುವ ಉದ್ದೇಶ ಇದ್ದಿದ್ದರೆ ಎಲ್ಲಾದರೂ ಅವಕಾಶ ಸಿಗ್ತಿತ್ತು.
ಜೆಡಿಎಸ್‌ ನಾಯಕರು ಏನಾದರೂ ಹೇಳಬಹುದು ಆದರೆ ಅಧಿಕೃತವಾಗಬೇಕು. ಅಂತಿಮ ಘೋಷಣೆ ಆಗುವವರೆಗೂ ಮಾತನಾಡುವುದು ಸೂಕ್ತ ಅಲ್ಲ. ನನ್ನ ಸ್ಪರ್ಧೆ ಖಚಿತ. ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವರಾ ಎಂಬ ಪ್ರಶ್ನೆಗೆ ಉತ್ತರಿಸದೆ ನಗುತ್ತಾ

ಭ್ರೂಣ ಹತ್ಯೆ ಬಗ್ಗೆ ನಾನು 4 ವರ್ಷಗಳ ಹಿಂದೆಯೆ ಪ್ರಸ್ತಾಪ ಮಾಡಿದ್ದೆ. ಆದರೆ ಅದರ ವಿರುದ್ಧ ಸರಿಯಾದ ಕ್ರಮ ಆಗಲಿಲ್ಲ. ಭ್ರೂಣ ಹತ್ಯೆ ತಡೆಯಲು ಜಿಲ್ಲಾಡಳಿತ ವಿಫಲವಾಗಿದ್ದು ಬೇಸರ ತಂದಿದೆ. ಇಂದಿನ ಸಭೆಯಲ್ಲಿ ಕೇಂದ್ರದ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.

ಬೇಬಿಬೆಟ್ಟ ಟ್ರಯಲ್ ಬ್ಲಾಸ್ಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟ್ರಯಲ್ ಬ್ಲಾಸ್ಟ್‌ಗೆ ಕೋರ್ಟ್ ಆದೇಶ ಇದೆ. ಆದರೆ ವಾಸ್ತವ ಮಾಹಿತಿಯನ್ನು ಅಧಿಕಾರಗಳಿಗೆ ತಿಳಿಸಿದ್ದೇನೆ. ಟ್ರಯಲ್ ಬ್ಲಾಸ್ಟ್‌ಗೆ ರೈತರ ವಿರೋಧ ಇದೆ‌.
ರೈತರ ಮನವಿಯಲ್ಲಿ ನ್ಯಾಯ ಇದೆ, ನಾನು ಅವರೊಂದಿಗಿದ್ದೇನೆ. ಟ್ರಯಲ್ ಬ್ಲಾಸ್ಟ್ ನಡೆಸಿದರೆ ಅನುಕೂಲಕಕ್ಕಿಂತ ಅನಾನುಕೂಲ ಜಾಸ್ತಿ. ಟ್ರಯಲ್ ಬ್ಲಾಸ್ಟ್‌ಗೆ ಸ್ಟೇ ಆರ್ಡರ್ ತರಲು ರೈತಸಂಘ ಮುಂದಾಗಿದೆ.
ಜಿಲ್ಲಾಡಳಿತಕ್ಕೆ ಮೇಲ್ಮನವಿ ಸಲ್ಲಿಸುವ ಅವಕಾಶ ಇಲ್ಲವಾಗಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!