Thursday, November 19, 2026

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ : ಸಿ.ಡಿ.ಗಂಗಾಧರ್

ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಸರ್ಕಾರಿ ಸ್ವಾಮ್ಯದ ಮೈಷುಗರ್ ಕಾರ್ಖಾನೆಯ ಉನ್ನತಿಗೆ ಶ್ರಮಿಸುವುದಾಗಿ ಕಾರ್ಖಾನೆ ನೂತನ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.

ಮಂಡ್ಯನಗರದ ಮೈಷುಗರ್ ಕಾರ್ಖಾನೆಯ ಆಡಳಿತ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಮೈಸೂರಿನ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ಸ್ಥಾಪಿತವಾದ ಮೈಷುಗರ್ ಕಾರ್ಖಾನೆಗೆ ತನ್ನದೇ ಇತಿಹಾಸ ಇದೆ. ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲರ ಸಹಕಾರದೊಂದಿಗೆ ಮೈಷುಗರ್ ಕಾರ್ಖಾನೆಯ ಗತವೈಭವ ಮರುಕಳುಸುವಂತೆ ಕಾರ್ಖಾನೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಮೈಷುಗರ್ ಕಾರ್ಖಾನೆಯ ಅಭಿವೃದ್ಧಿಗೆ ಕೋಲ್ಮನ್, ಜಿ.ಮಾದೇಗೌಡ, ಕೆ.ಎನ್.ನಾಗೇಗೌಡ, ರಾಜಣ್ಣ, ಎಂ.ಬಿ.ಶ್ರೀಕಾಂತ್, ರಮೇಶ್ ರಾಜು, ಶಿವಾನಂದ ಇತರರು ಶ್ರಮಿಸಿದ್ದಾರೆ. ಇದೀಗ ರಾಜ್ಯ ಸರ್ಕಾರ ಹೊಸದಾಗಿ ಕಾರ್ಖಾನೆ ಸ್ಥಾಪನೆ ಮಾಡಲಿದೆ. ಹಗಲಿರುಳು ಕಾರ್ಖಾನೆ ಉನ್ನತಿಗೆ ದುಡಿಯುವ ಮೂಲಕ ರೈತರಿಗೆ ಅನುಕೂಲವಾಗುವಂತೆ ಮಾಡಲಾಗುವುದು ಎಂದರು.

ಅಧಿಕಾರ ಸ್ವೀಕಾರ ಮಾಡುವ ಮೊದಲು ನಾಲ್ವಡಿ ಕೃಷ್ಣರಾಜ ಒಡೆಯರ್, ಕಾವೇರಿ ಮಾತೆ ಹಾಗೂ ಕೋಲ್ಮನ್ ಅವರ ಪ್ರತಿಮೆಗಳಿಗೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಬಳಿಕ ಆಡಳಿತ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಿ.ಡಿ.ಗಂಗಾಧರ್ ಅಧಿಕಾರ ಸ್ವೀಕಾರ ಮಾಡಿದರು.

ಈ ವೇಳೆ ನೂತನ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರನ್ನು ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಸೆಸ್ಕ್ ಅಧ್ಯಕ್ಷ, ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಕೆಪಿಸಿಸಿ ಸದಸ್ಯರಾದ ವಿಜಯಲಕ್ಷ್ಮಿ, ಎಚ್.ತ್ಯಾಗರಾಜು, ಸಿ.ಜೆ.ನಾಗರಾಜು, ಮುಖಂಡರಾದ ಕೆ.ಆರ್.ಪೇಟೆ ದೇವರಾಜು, ಎಂ.ಪುಟ್ಟೇಗೌಡ, ವಿಜಯ ರಾಮೇಗೌಡ, ಹಾಲಹಳ್ಳಿ ರಾಮಲಿಂಗೇಗೌಡ, ರುದ್ರಪ್ಪ, ನಗರಸಭೆ ಸದಸ್ಯರಾದ ಪೂರ್ಣಿಮಾ, ನಯೀಂ, ಶ್ರೀಧರ್, ಉಸ್ತುವಾರಿಗಳಾದ ದ್ಯಾವಪ್ಪ, ಅಜ್ಜಹಳ್ಳಿ ರಾಮಕೃಷ್ಣ, ಸಿ.ಆರ್.ರಮೇಶ್, ಕೊತ್ತತ್ತಿ ರಾಜು, ಸಾತನೂರು ಕೃಷ್ಣ, ಯಶೋಧ, ಜಿಲ್ಲಾ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ, ಯುವ ಮುಖಂಡರಾದ ಕಿರಣ್, ಗುರುರಾಜು, ಕೆನ್ನಾಳು ವನರಾಜು, ಅಂತನಹಳ್ಳಿ ಬಸವರಾಜು, ಅಜಿತ್, ರೈತ ಪರ್ವ ಅಧ್ಯಕ್ಷ ಅರುಣ್ ಕುಮಾರ್ ಇತರರು ಅಭಿನಂದಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ