Thursday, November 19, 2026

ಪ್ರಾಯೋಗಿಕ ಆವೃತ್ತಿ

6,000 ಕೋಟಿಗೂ ಅಧಿಕ ಮೊತ್ತದ ಚುನಾವಣಾ ಬಾಂಡ್ ನಗದೀಕರಣದಲ್ಲಿ ಬಿಜೆಪಿ ಅಗ್ರಸ್ಥಾನ 

ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತೀಯ ಜನತಾ ಪಕ್ಷವು (ಬಿಜೆಪಿ) ಚುನಾವಣಾ ಬಾಂಡ್‌ಗಳ ಅಗ್ರ ಫಲಾನುಭವಿಯಾಗಿ ಹೊರಹೊಮ್ಮಿದೆ, ಏಪ್ರಿಲ್ 12, 2019 ಮತ್ತು ಜನವರಿ 24, 2024 ರ ನಡುವೆ ರೂ 6,060.5 ಕೋಟಿ ಮೌಲ್ಯದ ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಿದೆ. ಈ ಮೊತ್ತವು ಎಲ್ಲಾ ರಾಜಕೀಯ ಪಕ್ಷಗಳ  ಪಡೆದುಕೊಂಡಕ್ಕಿಂತ ಅತ್ಯಧಿಕವಾಗಿದೆ.

ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಚುನಾವಣಾ ಬಾಂಡ್‌ಗಳ ಮೂಲಕ 1,609.50 ಕೋಟಿ ರೂ ಫಲಾನುಭವಿಯಾಗಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ, . ಈ ಮಾರ್ಗದ ಮೂಲಕ 1,421.9 ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ ಕಾಂಗ್ರೆಸ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್), ಬಿಜು ಜನತಾ ದಳ (ಬಿಜೆಡಿ), ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಕೂಡ ನಿಗದಿತ ಅವಧಿಯಲ್ಲಿ ತಲಾ 500 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಿದೆ.

ಇತರ ಪಕ್ಷಗಳು ಅಂಕಿಅಂಶಗಳ ಪ್ರಕಾರ ಎಐಎಡಿಎಂಕೆ, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್, ಜೆಡಿಎಸ್, ಎನ್‌ಸಿಪಿ, ಜೆಡಿಯು, ಆರ್‌ಜೆಡಿ, ಎಎಪಿ ಮತ್ತು ಸಮಾಜವಾದಿ ಪಕ್ಷಗಳು ಚುನಾವಣಾ ಬಾಂಡ್‌ಗಳನ್ನು ಸ್ವೀಕರಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್‌ಬಿಐ) ಸ್ವೀಕರಿಸಿದ ಚುನಾವಣಾ ಬಾಂಡ್ ಅಂಕಿಅಂಶದ ವಿವರಗಳನ್ನು ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಚುನಾವಣಾ ಆಯೋಗದ ಪ್ರಕಾರ,  ಅಂಕಿ ಅಂಶಗಳನ್ನು ಎರಡು ಭಾಗಗಳಲ್ಲಿ ಹಂಚಿಕೊಳ್ಳಲಾಗಿದೆ. ಮೊದಲ ಭಾಗವು ಅಂಕಿಅಂಶಗಳು  ಖರೀದಿದಾರರ ಹೆಸರು ಮತ್ತು ಬಾಂಡ್‌ಗಳ ಮುಖಬೆಲೆಯನ್ನು ತೋರಿಸುತ್ತದೆ. ಆದರೆ ಎರಡನೇ ಭಾಗದ ಅಂಕಿಅಂಶಗಳು ರಾಜಕೀಯ ಪಕ್ಷಗಳು ನಗದು ಸ್ವೀಕರಿಸಿದ ಬಾಂಡ್‌ಗಳ ಮುಖಬೆಲೆಯನ್ನು ತೋರಿಸುತ್ತದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ