2018ರಿಂದ ಈವರೆಗೂ 30 ಕಂತುಗಳಲ್ಲಿಒಟ್ಟು 16,518 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಎಸ್‌ಬಿಐ ವಿತರಿಸಿದೆ. ಕೇಂದ್ರ ಸರಕಾರ ಜಾರಿಗೆ ತಂದಿದ್ದ ಈ ಚುನಾವಣಾ ಬಾಂಡ್ ಯೋಜನೆಯನ್ನು ಫೆ.15ರಂದು ಸುಪ್ರೀಂಕೋರ್ಟ್ ರದ್ದುಪಡಿಸಿ ಮಹತ್ವದ ತೀರ್ಪು ನೀಡಿತ್ತು. ಇದು ‘ಅಸಾಂವಿಧಾನಿಕ’ ಎಂದಿದ್ದ ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಖರೀದಿಸಿದವರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಒದಗಿಸಬೇಕು ಎಂದು ಎಸ್‌ಬಿಐಗೆ ನಿರ್ದೇಶನ ನೀಡಿತ್ತು.
ಅತಿ ಹೆಚ್ಚು ದೇಣಿಗೆ ಪಡೆದ ಪಕ್ಷಗಳು
ಬಿಜೆಪಿ : 6,060.50 ಕೋಟಿ ರೂ., ಶೇ. 47.46
ತೃಣಮೂಲ ಕಾಂಗ್ರೆಸ್: 1,609.50 ಕೋಟಿ ರೂ., ಶೇ.12.60
ಕಾಂಗ್ರೆಸ್: 1,421.90 ಕೋಟಿ ರೂ., ಶೇ. 11.14
ಭಾರತ್ ರಾಷ್ಟ್ರ ಸಮಿತಿ: 1,214.70 ಕೋಟಿ ರೂ., ಶೇ. 9.51
ಬಿಜು ಜನತಾ ದಳ:775.50 ಕೋಟಿ ರೂ., ಶೇ. 6.07
ಡಿಎಂಕೆ: 639.00 ಕೋಟಿ ರೂ., ಶೇ. 5.0
ವೈಎಸ್ ಆರ್ ಕಾಂಗ್ರೆಸ್ ಪಾರ್ಟಿ:337.00 ಕೋಟಿ ರೂ., ಶೇ. 2.64
ತೆಲುಗು ದೇಶಂ ಪಾರ್ಟಿ: 218.90 ಕೋಟಿ ರೂ., ಶೇ. 1.71
ಶಿವಸೇನಾ: 159.40 ಕೋಟಿ ರೂ., ಶೇ. 1.24
ರಾಷ್ಟ್ರೀಯ ಜನತಾ ದಳ: 72.50 ಕೋಟಿ ರೂ., ಶೇ. 0.57
ಆಮ್ ಆದ್ಮಿ ಪಾರ್ಟಿ: 65.50 ಕೋಟಿ ರೂ., ಶೇ. 0.51
ಜೆಡಿಎಸ್: 43.50 ಕೋಟಿ ರೂ., ಶೇ. 0.34
ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ: 36.50 ಕೋಟಿ ರೂ., ಶೇ. 0.29
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ: 30.50 ಕೋಟಿ ರೂ., ಶೇ. 0.24
ಜನಸೇನಾ ಪಾರ್ಟಿ: 21.00 ಕೋಟಿ ರೂ., ಶೇ. 0.16
ಸಮಾಜವಾದಿ ಪಾರ್ಟಿ: 14.10 ಕೋಟಿ ರೂ., ಶೇ. 0.11
ಜೆಡಿಯು: 14.00 ಕೋಟಿ ರೂ., ಶೇ. 0.11
ಶಿರೋಮಣಿ ಅಕಾಲಿದಳ: 7.30 ಕೋಟಿ ರೂ., ಶೇ. 0.06
ಎಐಎಡಿಎಂಕೆ: 6.10 ಕೋಟಿ ರೂ., ಶೇ. 0.05
ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್: 5.50 ಕೋಟಿ ರೂ., ಶೇ. 0.04
ರಾಷ್ಟ್ರೀಯ ಜನತಾ ದಳ: 1.00 ಕೋಟಿ ರೂ., ಶೇ. 0.01
ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ: 0.60 ಲಕ್ಷ ರೂ., ಶೇ. 0.01
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್: 0.50 ಲಕ್ಷ ರೂ.,
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮಹಾರಾಷ್ಟ್ರ ಪ್ರದೇಶ: 0.50 ಲಕ್ಷ ರೂ.,
ಗೋವಾ ಫಾರ್ವರ್ಡ್ ಪಾರ್ಟಿ: 0.40 ಲಕ್ಷ ರೂ.,




