420 ನಂಬರ್ ಇರೋರು ಮಾತ್ರ 400 ಪ್ಲಸ್ ಬಗ್ಗೆ ಮಾತನಾಡ್ತಾರೆ. ಯಾವುದೇ ಪಕ್ಷವಾಗಲಿ, ನಮ್ಮ ಒಂದು ಪಕ್ಷವೇ ಇಷ್ಟು ಸೀಟು ಗೆಲ್ಲುತ್ತದೆ ಎಂದು ಅಹಂಕಾರದಿಂದ ಹೇಳಿಕೊಳ್ಳಬಾರದು, ನಾನು ತೆಗೆದುಕೊಳ್ತಿನಿ ಅನ್ನೋ ಅಹಂಕಾರ ಸರ್ವಾಧಿಕಾರವನ್ನು ಸೂಚಿಸುತ್ತದೆ ಎಂದು ನಟ ಪ್ರಕಾಶ್ ರೈ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ಪಕ್ಷಕ್ಕೆ 400ರಷ್ಟು ದೊಡ್ಡ ಬಹುಮತ ಸಿಗಲು ಸಾಧ್ಯವಿಲ್ಲ, ಅದಕ್ಕೆ ಸಣ್ಣ ಪಕ್ಷಗಳನ್ನ ಒಡೆದು ಕೊಂಡುಕೊಳ್ಳುತ್ತಿದ್ದಾರೆ. ಆ ಮಾತಿನ ಅಹಂಕಾರ, ಅತೃಪ್ತತೆ ಜನರಿಗೆ ಕಾಣುತ್ತಿದೆ. ಒಂದೇ ಪಕ್ಷಕ್ಕೆ ಅಷ್ಟು ದೊಡ್ಡ ಬಹುಮತ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಆಗಿರಬಹುದು ಅಥವಾ ಬೇರೆ ಯಾವುದೇ ಪಕ್ಷ ಆಗಿರಲಿ, ನಾನು ಇಷ್ಟು ಸ್ಥಾನಗಳನ್ನು ತೆಗೆದುಕೊಳ್ಳುತ್ತೇನೆ ಎನ್ನುವ ಅಹಂಕಾರ ಕಾಣಿಸುತ್ತದೆ. ಜನರು ತೀರ್ಮಾನಿಸಿ ಕೊಟ್ಟರೆ ತೆಗೆದುಕೊಳ್ಳಲಿ ಬೇಡ ಅನ್ನಲ್ಲ, ಆದರೆ ನಾನು ಇಷ್ಟು ತೆಗೆದುಕೊಂಡೆ ತೆಗೆದುಕೊಳ್ಳುತ್ತೇನೆ ಎನ್ನುವುದರಲ್ಲಿ ಅಹಂಕಾರ ಎದ್ದು ಕಾಣಿಸುತ್ತೆ, ಹಾಗಾಗಿ ಪ್ರಾದೇಶಿಕ ಪಕ್ಷಗಳನ್ನು ಒಡೆದು ಕೊಂಡುಕೊಳ್ಳಲಾಗುತ್ತಿದೆ ಎಂದರು.




