Thursday, November 19, 2026

ಪ್ರಾಯೋಗಿಕ ಆವೃತ್ತಿ

ಬಿಹಾರ| ಜನ ಅಧಿಕಾರ ಪಕ್ಷ ಕಾಂಗ್ರೆಸ್ ನಲ್ಲಿ ವಿಲೀನ: ಕಾಂಗ್ರೆಸ್ ಸೇರಿದ ಪಪ್ಪು ಯಾದವ್

ಪಪ್ಪು ಯಾದವ್ ಅವರು ಇತ್ತೀಚೆಗೆ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರನ್ನು ಭೇಟಿ ಮಾಡಿದ ನಂತರ ಪಕ್ಷ ವಿಲೀನದ ಊಹಾಪೋಹಗಳು ಹಬ್ಬಿದ್ದವು. ಈ ನಡುವೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಆಶೀರ್ವಾದದಿಂದ ಕಾಂಗ್ರೆಸ್ ಜೊತೆ ಪಕ್ಷವನ್ನು ವಿಲೀನಗೊಳಿಸಿರುವುದಾಗಿ ಜನ ಅಧಿಕಾರ ಪಕ್ಷದ  ಪಪ್ಪು ಯಾದವ್ ಹೇಳಿದ್ದಾರೆ.

2015ರ ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ, ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅವರ ಮೈತ್ರಿ ವಿರುದ್ಧ ಜನ ಅಧಿಕಾರ ಪಕ್ಷವನ್ನು ಪಪ್ಪು ಯಾದವ್ ಸ್ಥಾಪಿಸಿದ್ದರು.

ರಾಹುಲ್ ಗಾಂಧಿಯನ್ನು ಹೊಗಳಿದ ಪಪ್ಪು ಯಾದವ್, ದೇಶದಲ್ಲಿನ ಸರ್ವಾಧಿಕಾರ ಹಾಗೂ ಪ್ರಜಾಪ್ರಭುತ್ವ ರಕ್ಷಣೆಗೆ ಈಗ ರಾಹುಲ್ ಗಾಂಧಿಗಿಂತ ಪರ್ಯಾಯ ಯಾರೂ ಇಲ್ಲ ಎಂದಿದ್ದಾರೆ. ಲಾಲೂ ಪ್ರಸಾದ್ ಯಾದವ್ ಮತ್ತು ಕಾಂಗ್ರೆಸ್ ಜೊತೆಯಲ್ಲಿ ನಾವು 2024 ಮತ್ತು 2025 ರ ಚುನಾವಣೆಗಳಲ್ಲಿ ಗೆಲುವು ದಾಖಲಿಸುತ್ತೇವೆ ಎಂದಿದ್ದಾರೆ.

“>

ಪಪ್ಪು ಯಾದವ್ ತಮ್ಮ ಜನ ಅಧಿಕಾರ ಪಕ್ಷವನ್ನು ಪ್ರಾರಂಭಿಸುವ ಮೊದಲು ಆರ್‌ಜೆಡಿ, ಸಮಾಜವಾದಿ ಮತ್ತು ಲೋಕ ಜನಶಕ್ತಿ ಪಕ್ಷಗಳಲ್ಲಿ ಇದ್ದರು. ಪಕ್ಷ ವಿರೋಧಿ ಚಟುವಟಿಕೆಗಳಿಂದಾಗಿ ಪಪ್ಪು ಯಾದವ್ ಅವರನ್ನು ಆರ್‌ಜೆಡಿಯಿಂದ ಹೊರಹಾಕಿದ ನಂತರ ಜನ ಅಧಿಕಾರ ಪಕ್ಷವನ್ನು ಸ್ಥಾಪಿಸಿದ್ದರು.

ಪ್ರಸ್ತುತ ಲಾಲು ಪ್ರಸಾದ್ ಯಾದವ್ ಅವರ ಜೊತೆ ಯಾವುದೇ ಮನಸ್ತಾಪ ಇಲ್ಲ ಎಂದು ಪಪ್ಪು ಹೇಳಿದ್ದಾರೆ. ಮಂಗಳವಾರ ಲಾಲು ಯಾದವ್ ಮತ್ತು ತೇಜಸ್ವಿ ಯಾವದ್ ಅವರನ್ನು ಭೇಟಿಯಾದ ನಂತರ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಪಪ್ಪು ಯಾದವ್ ಅವರ ಪತ್ನಿ ರಂಜೀನ್ ಕಾಂಗ್ರೆಸ್ ನಾಯಕಿಯಾಗಿದ್ದಾರೆ. ಅವರ ಮಗ ಸಾರ್ಥಕ್ ರಂಜನ್ ಕ್ರಿಕೆಟಿಗ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ