ಕೇವಲ 2,3 ಕ್ಷೇತ್ರಕ್ಕಾಗಿ ಬಿಜೆಪಿ ಎದುರು ಗೋಗರೆದು ನಿಲ್ಲುವ ಸ್ಥಿತಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬರಬಾರದಿತ್ತು! ಇಂತಹ ಗುಲಾಮಗಿರಿಯ ಮೈತ್ರಿಯ ಬದಲು ರಾಜಕೀಯ ನಿವೃತ್ತಿಯೇ ಹೆಚ್ಚು ಗೌರವಯುತವಾದುದು ಎಂದು ಕುಮಾರಸ್ವಾಮಿಯವರಿಗೆ ಸದ್ಯದಲ್ಲೇ ಜ್ಞಾನೋದಯವಾಗಲಿದೆ! ಎಂದು ಕಾಂಗ್ರೆಸ್ ಪಕ್ಷವು ವ್ಯಂಗ್ಯವಾಡಿದೆ.
ಬಿಜೆಪಿ ಜೆಡಿಎಸ್ ಮೈತ್ರಿ ಎನ್ನುವುದು ಒಲ್ಲದ ಸಂಸಾರದಲ್ಲಿ ಸಾಮರಸ್ಯದ ನಾಟಕದಂತಿದೆ! ಬಿಜೆಪಿ ಮೊದಲ ಪಟ್ಟಿಯ ಟಿಕೆಟ್ ಘೋಷಣೆಯಲ್ಲಿ ಜೆಡಿಎಸ್ ನಾಯಕರಲ್ಲಿ ಕನಿಷ್ಠ ಸಲಹೆಯನ್ನೂ ಪಡೆಯಲಿಲ್ಲ ಎಂದು ಕಾಂಗ್ರೆಸ್ ಬೊಟ್ಟು ಮಾಡಿದೆ.
“ನಾವೇನು 5,6 ಸೀಟು ಕೇಳುತ್ತಿದ್ದೇವಾ, 3 ಕ್ಷೇತ್ರ ಕೇಳುತ್ತಿದ್ದೇವೆ ಅಷ್ಟೇ, 2 ಕ್ಷೇತ್ರ ಪಡೆಯುವುದಕ್ಕೆ ಬಿಜೆಪಿಯವರ ಹತ್ತಿರ ಬರಬೇಕಿತ್ತಾ“ ಎಂದು ಕುಮಾರಸ್ವಾಮಿಯವರು ಗೋಳಾಡುತ್ತಿದ್ದಾರೆ. ತಮ್ಮ ಕುಟುಂಬ ಸದಸ್ಯರಿಗೆ ಮಾತ್ರ ಕ್ಷೇತ್ರ ಭದ್ರಪಡಿಸಿಕೊಳ್ಳಲು ಹೋರಾಡುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಇತರ ನಾಯಕರ ಕುರಿತು ಯೋಚಿಸುವುದುಂಟೇ! ಎಂದು ಪ್ರಶ್ನಿಸಿದೆ.
ಬಿಜೆಪಿ ಜೆಡಿಎಸ್ ಮೈತ್ರಿ ಎನ್ನುವುದು ಒಲ್ಲದ ಸಂಸಾರದಲ್ಲಿ ಸಾಮರಸ್ಯದ ನಾಟಕದಂತಿದೆ!
ಬಿಜೆಪಿ ಮೊದಲ ಪಟ್ಟಿಯ ಟಿಕೆಟ್ ಘೋಷಣೆಯಲ್ಲಿ ಜೆಡಿಎಸ್ ನಾಯಕರಲ್ಲಿ ಕನಿಷ್ಠ ಸಲಹೆಯನ್ನೂ ಪಡೆಯಲಿಲ್ಲ,
ಕೇವಲ 2,3 ಕ್ಷೇತ್ರಕ್ಕಾಗಿ ಬಿಜೆಪಿ ಎದುರು ಗೋಗರೆದು ನಿಲ್ಲುವ ಸ್ಥಿತಿ @hd_kumaraswamy ಅವರಿಗೆ ಬರಬಾರದಿತ್ತು!
ಇಂತಹ ಗುಲಾಮಗಿರಿಯ ಮೈತ್ರಿಯ ಬದಲು…
— Karnataka Congress (@INCKarnataka) March 20, 2024
“>
ಇವರು ಕೇಳುತ್ತಿರುವ 3 ಕ್ಷೇತ್ರ ತಮ್ಮ ಫ್ಯಾಮಿಲಿಗೆ ಮಾತ್ರ, ಕಾರ್ಯಕರ್ತರು, ಇತರ ನಾಯಕರು ರಾಜಕೀಯ ಸನ್ಯಾಸ ಸ್ವೀಕರಿಸುವುದೇ ಉತ್ತಮ. ಜೆಡಿಎಸ್ ನಂಬಿಕೊಂಡಿರುವ ಕಾರ್ಯಕರ್ತರಿಗೆ ಯಾವುದೇ ರಾಜಕೀಯ ಭವಿಷ್ಯವಿಲ್ಲ ಎನ್ನುವುದು ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಷ್ಟೇ ಸತ್ಯ ಎಂದು ಕಾಂಗ್ರೆಸ್ ಹೇಳಿದೆ.




