Thursday, November 19, 2026

ಪ್ರಾಯೋಗಿಕ ಆವೃತ್ತಿ

ಈ ಚುನಾವಣೆ ಬಿಜೆಪಿ ಮತ್ತು ಭಾರತದ ನಡುವಿನ ಹೋರಾಟ| ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಪತಿ ಹೇಳಿದ್ದೇನು ?

ಚುನಾವಣಾ ಬಾಂಡ್ ಹಗರಣವು ಕೇವಲ ಭಾರತದಲ್ಲಿನ ಅತಿದೊಡ್ಡ ಹಗರಣವಲ್ಲ, ಇದು ವಿಶ್ವದ ಅತಿದೊಡ್ಡ ಹಗರಣವಾಗಿದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ್ ಹೇಳಿದ್ದಾರೆ. ಈ ಮೂಲಕ ನರೇಂದ್ರ ಮೋದಿ ನೇತೃತ್ವದ ದುರಾಡಳಿತವನ್ನು ಅವರು ದೇಶದ ಜನರ ಮುಂದಿಟ್ಟಿದ್ದಾರೆ.

ಈ ಚುನಾವಣೆಯು ವಿರೋಧ ಪಕ್ಷಗಳು ಹಾಗೂ ಬಿಜೆಪಿ ನಡುವಿನ ಚುನಾವಣೆಯಲ್ಲ, ಇದು ಬಿಜೆಪಿ ಮತ್ತು ಭಾರತದ ನಡುವಿನ ಹೋರಾಟವಾಗಿದೆ ಎಂದು ಅವರ ಪತಿ ಪರಕಲ ಪ್ರಭಾಕರ್ ಅವರ ಈ ಹೇಳಿಕೆಯನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣವಾದ ‘ಎಕ್ಸ್’ ನಲ್ಲಿ ಬರೆದುಕೊಂಡಿದೆ.

“>

ಬಿಜೆಪಿಯ ದುಷ್ಟ ದುರಾಡಳಿತವನ್ನು ಚುನಾವಣಾ ಬಾಂಡ್ ಹಗರಣ ಬೆತ್ತಲು ಮಾಡಿದೆ. ಬಿಜೆಪಿ ಭಾರತದ ವಿರುದ್ಧವಿದೆ, ದೇಶದ ಪರಂಪರೆಯ ವಿರುದ್ಧವಿದೆ, ಏಕತೆಯ ವಿರುದ್ಧವಿದೆ, ಸಂವಿಧಾನದ ವಿರುದ್ಧವಿದೆ ಎನ್ನುವುದನ್ನು ಜನತೆ ಅರ್ಥ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ