Thursday, November 19, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಬರ; ಪ್ರಗತಿಪರ ಸಂಘಟನೆಗಳ ಒಕ್ಕೂಟದ ಚಿಂತನಾ ಸಭೆ

ಮದ್ದೂರು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬರಗಾಲದಲ್ಲಿ ಸಕಾಲಿಕ ಕ್ರಮಕ್ಕೆ ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಚಿಂತನಾ ಸಭೆಯನ್ನು ಮೇ.4ರಂದು ಬೆಳಿಗ್ಗೆ 10.30ಗಂಟೆಗೆ ಮದ್ದೂರು ಪಟ್ಟಣದ ಪಿ ಕಾರ್ಡ್ ಬ್ಯಾಂಕಿನ ಕುವೆಂಪು ಸಭಾಂಗಣ ಕರೆಯಲಾಗಿದೆ.

ಭೀಕರ ಬರಗಾಲ ದಿಂದಾಗಿ ಕಬ್ಬು, ಭತ್ತ, ರಾಗಿ, ಬಾಳೆ ಬೆಳೆ ಒಣಗಿ ನಷ್ಠವಾಗಿರುವುದಲ್ಲದೇ, ದೀರ್ಘವಧಿ ಬೆಳೆಗಳಾದ ತೆಂಗು ಅಡಿಕೆ ಬೆಳೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಒಣಗಿ ಹೋಗಿವೆ. ಇದರಿಂದ ರೈತರ ಜೀವನದ ಮೇಲೆ ಆಘಾತಕಾರಿ ಪರಿಣಾಮ ಉಂಟಾಗಿದೆ, ಇದಲ್ಲದೆ ಹೈನುರಾಸುಗಳಿಗೆ ಮೇವು ಹಾಗು ನೀರಿನ ಕೊರತೆ ಉಂಟಾಗಿದ್ದು ರೈತರ ನಿಯಮಿತ ವರಮಾನಕ್ಕೆ ನಷ್ಠ ಉಂಟಾಗುತ್ತಿದ್ದು, ಕೂಡಲೆ ಸರ್ಕಾರ ರೈತರ ನೆರವಿಗೆ ಧಾವಿಸಬೇಕು, ಬರ ಪರಿಹಾರಗಳು ಭರದಿಂದ ಸಾಗಬೇಕು ಸಭೆಯಲ್ಲಿ ಚರ್ಚಿಸಲಾಗುವುದು.

ಈ ಸಭೆಗೆ ಎಲ್ಲಾ ಪ್ರಗತಿಪರ ಸಂಘಟನೆಗಳ ಮುಖಂಡರು ಆಗಮಿಸುವಂತೆ ಒಕ್ಕೂಟದ ಪ್ರಧಾನ ಸಂಚಾಲಕ ವಿ.ಸಿ.ಉಮಾಶಂಕರ್, ಕರ್ನಾಟಕ ರಾಜ್ಯ ರೈತಸಂಘದ ಸೊ ಶಿ‌ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ