Thursday, June 13, 2024

ಪ್ರಾಯೋಗಿಕ ಆವೃತ್ತಿ

ದುಬೈ| ಮಳೆ ಸಂತ್ರಸ್ಥರಿಗೆ ”ದುಬೈ ಕನ್ನಡ ಸಂಘದಿಂದ ಸಹಾಯಾಸ್ತ”

ದುಬೈನ ಶಾರ್ಜಾ ಅಜ್ಮಾನ್ ಭಾಗದಲ್ಲಿ ಮಳೆ ಪ್ರವಾಹ ಉಂಟಾಗಿ ಕಳೆದ ಎಂಟು ದಿನಗಳಿಂದ ಮನೆಯಿಂದ ಹೊರಬರಲಾಗದೆ ಸಂಕಷ್ಟದಲ್ಲಿದ್ದ ಭಾರತೀಯರು ಮತ್ತು ಇತರ ವಿದೇಶಿಯರಿಗೆ ಆಹಾರ ಪದಾರ್ಥ, ನೀರು ಮತ್ತು ಇನ್ನಿತರ ಅವಶ್ಯಕ ವಸ್ತುಗಳನ್ನು ದುಬೈ ಕನ್ನಡ ಸಂಘದ ವತಿಯಿಂದ ವಿತರಿಸಿ ಸಹಾಯಾಸ್ತ ನೀಡಲಾಯಿತು.

ರಫೀಕಲಿ ಕೊಡಗು, ಹಾದಿಯ ಮಂಡ್ಯ, ಪ್ರತಾಪ್ ಮಡಿಕೇರಿ, ಸಂತೋಷ್ ಶಿವಮೊಗ್ಗ, ಅರ್ಪಿತಾ ಬೆಂಗಳೂರು, ಅಯ್ಯುಬ್ ಶಿವಮೊಗ್ಗ, ನಝೀರ ಮಂಡ್ಯ ಮತ್ತು ಅಬ್ರಾರ್ ಅವರ ತಂಡದ ಸದಸ್ಯರು ಸೇರಿ, ವಾಹನಗಳು ಸಂಚಾರ ಮಾಡಲು ಆಗದ ಸ್ಥಳಗಳಿಗೆ ದೋಣಿ ಬಳಸಿಕೊಂಡು ಪರಿಹಾರ ಸಾಮಾಗ್ರಿಗಳನ್ನು ಒದಗಿಸಲಾಯಿತು.

ಸಂತ್ರಸ್ಥರಿಗೆ ಆಹಾರದ ಪದಾರ್ಥಗಳು ಮತ್ತು ಜೀವನ ಅವಶ್ಯಕ ವಸ್ತುಗಳನ್ನು ಬೆಳಿಗ್ಗೆಯಿಂದ ರಾತ್ರಿಯವರೆಗೆ ನೂರಾರು ಸಂತ್ರಸ್ಥ ಜನರಿಗೆ ತಲುಪಿಸಲಾಯಿತು. ಅಲ್ಲದೇ ದುಬೈಯಲ್ಲಿರುವ ಎಂಬಿಎಂ ಕ್ಲಿನಿಕ್ ಜೊತೆ ಸೇರಿ ಉಚಿತ ಅರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಔಷಧಿಯನ್ನು ತಲುಪಿಸುವಲ್ಲಿ ತಂಡವು ಯಶಸ್ವಿಯಾಗಿ ಮಾನವೀಯತೆ ಮೆರೆದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!