ಬಿಸಿಲಿನ ಬೇಗೆಗೆ ಒಣಗಿದ ಬೆಂಗಾಡಾಗಿದ್ದ ಕಾವೇರಿ ನದಿಯು ಇತ್ತೀಚೆಗೆ ಬಿದ್ದ ಮಳೆಯಿಂದ ಜೀವತಳೆಯುವಂತಾಗಿದೆ. ಕಾವೇರಿ ಉಗಮ ಸ್ಥಾನವಾದ ಕೊಡಗು ಜಿಲ್ಲೆಯಲ್ಲಿಯೇ ಒಣಗಿ ಹೋಗಿದ್ದ ಕಾವೇರಿ ನದಿ ಈಗ ಚೇತರಿಕೆ ಪಡೆದಿದ್ದು, ಅಲ್ಪ ಪ್ರಮಾಣದಲ್ಲಿ ನೀರಿನ ಹರಿವು ಕಾಣಿಸಿಕೊಂಡಿದೆ.
ಈ ವರ್ಷ ತೀವ್ರ ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದರು, ಆದರೆ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ಕೊಳ್ಳ ಸೇರಿದಂತೆ ರಾಜ್ಯದಾದ್ಯಂತ ಬಿಸಿಲಿನ ಬೇಗೆ ತಗ್ಗಿದ್ದು, ಜನ – ಜಾನುವಾರುಗಳು ನಿಟ್ಟುಸಿರು ಬಿಡುವಂತಾಗಿದೆ.
ಕನ್ನಡನಾಡಿನ ಜೀವನದಿ ಕಾವೇರಿಯಲ್ಲಿ ಹರಿವು ಆರಂಭ🙏🙏 pic.twitter.com/qQ8pkoSnr9
— Coorgthekashmirofkarnataka (@Coorgthekashmir) May 16, 2024
“>
ಈ ನಡುವೆ ಕಾವೇರಿ ಕಣಿವೆಯಲ್ಲಿ ಮತ್ತೇ ನೀರಿನ ಸೆಲೆ ಹೊಸರಿದ್ದು, ಹಸಿರು ಮರುಕಳಿಸುವ ಮುನ್ಸೂಚನೆ ನೀಡಿದೆ, ಹಳೇ ಮೈಸೂರು ಭಾಗದ ಜನರ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಯ ಒಳ ಹರಿವಿನ ಪ್ರಮಾಣವು 1771 ಕ್ಯೂಸೆಕ್ ಗೆ ಏರಿಕೆಯಾಗಿದ್ದು, ಹೊರಹರಿವು 153 ಕ್ಯೂಸೆಕ್ ಇದೆ, ಪ್ರಸ್ತುತ ನೀರಿನ ಮಟ್ಟ 80 ಅಡಿಗೆ ತಲುಪಿದೆ. ಇತ್ತಿಚೇಗೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿದ್ಧಾರೆ.




