Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಕೊಳಗೇರಿ ಮಂಡಳಿ ಅಯುಕ್ತರ ಭೇಟಿ ; ಶ್ರಮಿಕರಿಗೆ ಶೀಘ್ರ ವಸತಿ ಮಂಜೂರು

ಕರ್ನಾಟಕ ಜನಶಕ್ತಿ ಮತ್ತು ಶ್ರಮಿಕನಗರ ನಿವಾಸಿಗಳ ಒಕ್ಕೂಟ ಹಾಗೂ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಕೊಳಗೇರಿ ಮಂಡಳಿ ಅಯುಕ್ತರನ್ನು ಭೇಟಿ ಮಾಡಲಾಯಿತು.

ಮದ್ದೂರು ತಮಿಳು ಕಾಲೋನಿಗೆ ಹೊಸದಾಗಿ ನೀಡಿರುವ ಜಾಗಕ್ಕೆ ಮೂಲಭೂತ ಸೌಕರ್ಯ ಒದಗಿಸಿ ಹಂಚಿಕೆ ಮಾಡಲು 8 ಕೋಟಿ ಹಣವನ್ನು ಬಿಡುಗಡೆ ಮಾಡಿಸಲು ಸ್ಥಳಿಯ ಪುರಸಭೆಗೆ ತುರ್ತು ಪತ್ರ ಬರೆದು  ಪಾಲೋಪ್ ಮಾಡಲು ಕೊಳಚೆ ಅಭಿವೃದ್ದಿ ಮಂಡಳಿಯವರಿಗೆ ತಿಳಿಸಿದರು, ಅಲ್ಲದೇ 110 ಮನೆಗಳನ್ನು ಶೀಘ್ರದಲ್ಲೇ ಮಂಜೂರು ಮಾಡುತ್ತೇವೆಂದು ತಿಳಿಸಿದರು.

ಮಂಡ್ಯ ನಗರದ ಆರ್ ಟಿ ಓ ಬಳಿ ಇರುವ ಕಾಳಪ್ಪ ಬಡಾವಣೆಗೆ 80 ಮನೆಗಳು, ನ್ಯೂ ತಮಿಳು ಕಾಲೋನಿಗೆ  150 ಮನೆಗಳು ಮಂಜೂರು ಮಾಡಲು ಅದೇಶ ಮಾಡುತ್ತೇವೆಂದು ತಿಳಿಸಿದರು. ಒಟ್ಟು ಮೂರು ಶ್ರಮಿಕ ನಗರಗಳಿಗೆ 340 ಹೊಸ ಮನೆಗಳನ್ನು ಮಂಜೂರು ಮಾಡಿಸಲು ಮನವಿ ಪತ್ರ ನೀಡಲಾಗಿ ಅಯುಕ್ತರು ಶೀಘ್ರದಲ್ಲೇ  ಮನೆ ಮಂಜೂರು ಮಾಡುತ್ತೇವೆಂದು ತಿಳಿಸಿದರು.

ಮಂಡ್ಯ ನಗರದ ಸ್ಲಾಟರ್ ಹೌಸ್ 5 ನಿವೇಶನ ಹಂಚಿಕೆಯ ವಿಚಾರವಾಗಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಇರುವುದರಿಂದ ಅಶ್ರಯ ಕಮಿಟಿಯಲ್ಲಿಟ್ಟು ಸೂಕ್ತ ಫಲಾನುಭವಿಗಳನ್ನು ಅಯ್ಕೆ ಮಾಡಿ, ಹಂಚಿಕೆ ಮಾಡಲು ಅವರಿಗೆ ಅಧಿಕಾರವಿದೆ, ನಾನು ಸಹ ಜಿಲ್ಲಾಧಿಕಾರಿಗಳ ಬಳಿ ಮಾತಾಡುತ್ತೇನೆಂದು ಅಯುಕ್ತರು ತಿಳಿಸಿದರು.

ಹೊಸಹಳ್ಳಿ ಗುರುಮಠ ಸ್ಲಂ ಅನ್ನು ಮರು ಘೋಷಣೆ ಮಾಡಲು ಸರ್ಕಾರಿ ಕಟ್ಟೆ ಎಂದು ಇರುವುದನ್ನು ರದ್ದು ಪಡಿಸಲು, ಕಂದಾಯ ಇಲಾಖೆಗೆ ಜಿಲ್ಲಾಧಿಕಾರಿಗಳು ನೀಡಿರುವ ನಿರ್ದೇಶನವನ್ನು ಬೋರ್ಡ್ ವತಿಯಿಂದ ಪಾಲೋಪ್ ಮಾಡುತ್ತೇವೆಂದು ತಿಳಿಸಿದ್ದರು.

ಕೊಳಗೇರಿ ಅಭಿವೃದ್ದಿ ಮಂಡಳಿಯ ಅಧಿಕಾರಿಗಳು,. ಕರ್ನಾಟಕ ಜನಶಕ್ತಿಯ ಸಿದ್ದರಾಜು, ಮರಿಯಪ್ಪಣ್ಣ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಬೆಂಗಳೂರು ನ್ಯೂ ತಮಿಳು ಕಾಲೋನಿ, ಸ್ಲಾಟರ್ ಹೌಸ್,  ಮದ್ದೂರು ತಮಿಳು ಕಾಲೋನಿಯ.ಮುಖಂಡರುಗಳಾದ, ಶಿವಣ್ಣ, ನಿಂಗಮ್ಮ ವಿಜಯ್,  ರತ್ನ ರೋಹಿಣಿ, ಲತಾ, ಗಾಯಿತ್ರಿ,.ನಾಗಣ್ಣ, ಚೇಂದ್ರು, .ವೈದುನಾ, ರವಿ, ಪ್ರಕಾಶ್  ಪೊನ್ನುಸ್ವಾಮಿ  ಸಭೆಯಲ್ಲಿ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ