ಕನ್ನಡ ನಾಡು ನುಡಿ ನೆಲ ಜಲ ಕನ್ನಡಿಗರ ಸಂರಕ್ಷಣೆ ಉದ್ಯೋಗಕ್ಕಾಗಿ ಸದಾಕಾಲವೂ ಹೋರಾಟ ಮಾಡುತ್ತಿರುವ ವಾಟಾಳ್ ನಾಗರಾಜ್ ರವರನ್ನು ಮಂಡ್ಯ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಕದಂಬ ಸೈನ್ಯ, ಕನ್ನಡ ಪರಸಂಘಟನೆಗಳ ವತಿಯಿಂದ ಮಂಡ್ಯದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕದಂಬ ಸೇನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ, ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಜಾರಿಗೆ ತರಲು ಮುಂದಾಗಬೇಕು, ಕದಂಬ ಚಕ್ರವರ್ತಿ ಮಯೂರ ವರ್ಮ, ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ ಪುತ್ಥಳಿ ಸ್ಥಾಪಿಸಲು ಹೋರಾಟಕ್ಕೆ ತಾವು ಮುಂಚೂಣಿಯಲ್ಲಿ ಇರಬೇಕು ಎಂದು ಮನವಿ ಮಾಡಿದರು.
ಕ.ದ.ಸಂ. ಸ, ಸ್ವಾಭಿಮಾನಿ ಕೃಷ್ಟಪ್ಪ ಬಣದ ಮೈಸೂರು ವಿಭಾಗ ಸಂಚಾಲಕ ಬಸವರಾಜು ತಗ್ಗಹಳ್ಳಿ, ನಿರಂಜನ್ ಭೌದ್ಧ, ರಾಷ್ಟ್ರೀಯ ಯುವಜನ ಪ್ರಶಸ್ತಿ ಪುರಸ್ಕೃತೆ ಅನುಪಮಾ, ಕದಂಬ ಸೈನ್ಯ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ರಾಜ್ಯ ಸಮಿತಿ ಸದಸ್ಯ ಥಾಮಸ್ ಬೆಂಜಮಿನ್ ಕಿಟ್ಟಿ, ಮುಖಂಡರದಾ ಭಗವಾನ್, ಜೋಸೆಫ್, ರಾಮು ಕೀಲಾರ, ರಾಮು ಚಿಕ್ಕೇಗೌಡನದೊಡ್ಡಿ, ಆಟೋ ಕುಮಾರ್ ಉಪಸ್ಥಿತರಿದ್ದರು.




