Friday, November 20, 2026

ಪ್ರಾಯೋಗಿಕ ಆವೃತ್ತಿ

ಹಾಸನ| ಈಜಲು ಹೋಗಿದ್ದ ನಾಲ್ವರು ಬಾಲಕರ ದುರ್ಮರಣ

ಹಾಸನ ಜಿಲ್ಲೆಯ ಮುತ್ತಿಗೆ ಗ್ರಾಮದ ನಾಲ್ವರು ಬಾಲಕರು ಈಜಲು ಹೋಗಿ ಕೆರೆಯ ಹೂಳಿಗೆ ಸಿಲುಕಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ತಿಮ್ಮನಹಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಮುತ್ತಿಗೆ ಗ್ರಾಮದ ಜೀವನ್ (13), ಸಾತ್ವಿಕ್ (11) ವಿಶ್ವ(12), ಪೃಥ್ವಿ (12 ) ಹೂಳಿಗೆ ಸಿಲುಕಿ ಮೃತಪಟ್ಟ ಮಕ್ಕಳು.

ಶಾಲೆಗೆ ರಜೆ ಇರುವುದರಿಂದ ಮುತ್ತಿಗೆ ಗ್ರಾಮದ ಐವರು ಬಾಲಕರು ಪಕ್ಕದ ಗ್ರಾಮವಾದ ತಿಮ್ಮನಹಳ್ಳಿ ಕೆರೆಗೆ ಈಜಲು ಹೋಗಿದ್ದಾರೆ.ಈ ಸಂದರ್ಭದಲ್ಲಿ ದನಗಾಹಿಯೊಬ್ಬರು ಕೆರೆಯಲ್ಲಿ‌ ಸಾಕಷ್ಟು ಹೂಳಿದೆ. ಈಜಬೇಡಿ ಎಂದು ಗದರಿಸಿ ಕಳಿಸಿದ್ದಾರೆ. ದನಗಾಹಿ ಅತ್ತ ಹೋದ ನಂತರ ಮಕ್ಕಳು ನೀರಿಗಿಳಿದಿದ್ದಾರೆ. ನೀರಿನ ಹೂಳಿಗೆ ಸಿಲುಕಿ ನಾಲ್ವರು ಬಾಲಕರು ನೀರು ಪಾಲಾಗಿದ್ದು,ಸ್ನೇಹಿತರೆಲ್ಲ ನೀರಿನಲ್ಲಿ ಮುಳುಗಿದ್ದನ್ನು ಕಂಡ ಐದನೇ ಬಾಲಕ ಸಮೀಪದಲ್ಲಿದ್ದವರಿಗೆ ತಿಳಿಸಿದ್ದಾನೆ. ಗ್ರಾಮದ ನಿವಾಸಿಗಳು ಕೆರೆ ಬಳಿ ಬಂದು ನೋಡುವಷ್ಟರಲ್ಲಿ ನಾಲ್ವರು ಬಾಲಕರು ಕೆರೆಯಲ್ಲಿ ಮುಳುಗಿದ್ದರು.

ಕೂಲಿ ಮಾಡುವ ನಾಲ್ವರು ಬಾಲಕರ ಪೋಷಕರು ಹಾಗೂ ಗ್ರಾಮಸ್ಥರು ಸ್ಥಳಕ್ಕಾಗಮಿಸಿದ ಮೃತ ಬಾಲಕರ ಪೋಷಕರು ಆಕ್ರಂದನ ಮುಗಿಲು ಮುಟ್ಟಿತ್ತು. ಮಕ್ಕಳ ಮೃತದೇಹಕ್ಕಾಗಿ ಅಗ್ನಿಶಾಮಕದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿ,ನಾಲ್ವರು ಬಾಲಕರ ಮೃತದೇಹಗಳನ್ನು ನೀರಿನಿಂದ ಹೊರತೆಗೆದು ಆಲೂರು ತಾಲೂಕು ಆಸ್ಪತ್ರೆಗೆ ಶವ ಪರೀಕ್ಷೆ ನಡೆಸಲು ಕಳುಹಿಸಿದರು.

ಘಟನೆಯ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಶಾಸಕ ಸಿಮೆಂಟ್ ಮಂಜು, ಆಲೂರು ಪೊಲೀಸ್‌ ಅಧಿಕಾರಿಗಳು ಮೃತ ಬಾಲಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾ ಸ್ಥಳಕ್ಕೆ ಆಗಮಿಸಿ ಬಾಲಕರ ಕುಟುಂಬಸ್ಥರನ್ನು ಸಂತೈಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ