ಮಂಡ್ಯ ನಗರದ ಎಂ.ಸಿ.ರಸ್ತೆಯ ಸಮೀಪದ ಶ್ರೀಪಾಂಡುರಂಗ ಸ್ವಾಮಿ ದೇವಸ್ಥಾನದ 38 ನೇ ವರ್ಷದ ದಿಂಡಿ ಮಹೋತ್ಸವವು ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಬಹಳ ವಿಜೃಂಭಣೆಯಿಂದ ನಡೆಯಿತು.
ಶುಕ್ರವಾರ ಬೆಳಿಗ್ಗೆ ಪಾಂಡುರಂಗ ಸ್ವಾಮಿಗೆ ಕಾಕಡಾರತಿ, ಜ್ಞಾನೇಶ್ವರಿ ಪಾರಾಯಣ, ಪಂಡರಿ ಭಜನೆ, ಮಹಾಮಂಗಳಾರತಿ ಮಾಡಲಾಯಿತು. ದೇವರಿಗೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರ ದೇವಸ್ಥಾನಕ್ಕೆ ಆಗಮಿಸಿ ಪಾಂಡುರಂಗ ಸ್ವಾಮಿಯ ದರ್ಶನ ಪಡೆದರು. ಭಜನೆ,ಕೀರ್ತನೆಗಳನ್ನು ಹಾಡಲಾಯಿತು.ನಂತರ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಭಜನಾ ಮಂಡಳಿ ಹಾಗೂ ಸಮಾಜ ಬಾಂಧವರೆಲ್ಲಾ ಸೇರಿ ಪಾಂಡುರಂಗ ಸ್ವಾಮಿಯ ಭವ್ಯ ಮೆರವಣಿಗೆ ನಡೆಸಿದರು.ಸಾವಿರಾರು ಜನರು ಪಾಂಡುರಂಗ ಸ್ವಾಮಿಯ ದರ್ಶನ ಪಡೆದು ಪುನೀತರಾದರು.




