Tuesday, November 24, 2026

ಪ್ರಾಯೋಗಿಕ ಆವೃತ್ತಿ

ಉತ್ತರ ಪ್ರದೇಶದಲ್ಲಿ ಮೋದಿ ವಿರುದ್ದ ಅಖಿಲೇಶ್ ಪಿಡಿಎ ಅಸ್ತ್ರ !

ಉತ್ತರ ಪ್ರದೇಶದಲ್ಲಿ ಯಾರು ಗೆಲ್ಲುತ್ತಾರೋ ಅವರು ದೆಹಲಿಯ ಗದ್ದುಗೆ ಹಿಡಿಯುತ್ತಾರೆ ಎಂಬ ಮಾತು ಅಕ್ಷರಶಃ ಸತ್ಯ ಸಂಗತಿ. 80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶ ದೇಶದ ರಾಜಕಾರಣದಲ್ಲಿ ಅತ್ಯಂತ ಪ್ರಮುಖವಾದ ರಾಜ್ಯವಾಗಿದೆ.

ಹಾಗಾಗಿ ನರೇಂದ್ರ ಮೋದಿಯವರು ಚುನಾವಣೆಗೂ ಮುಂಚಿತವಾಗಿ,ಇನ್ನೂ ಪೂರ್ಣವಾಗದಿರುವ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೇರವೇರಿಸಿ ಉತ್ತರ ಪ್ರದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಮಹಾದಾಸೆ ಹೊಂದಿದ್ದರು. ಅದರಂತೆ ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿ ಅವರನ್ನು ಆಹ್ವಾನಿಸದೆ ತಾವೇ ಮುಂದೆ ನಿಂತು ಅದ್ಧೂರಿಯಾಗಿ ಬಾಲರಾಮನ ಪ್ರಾಣ ಪ್ರತಿಷ್ಟಾಪನೆ ಮಾಡಿದ್ದರು.

ಅದಕ್ಕೆ ತಕ್ಕಂತೆ ಜನರು ಸಹ ರಾಮಮಂದಿರ ಉದ್ಘಾಟನೆಯಿಂದ ಖುಷಿಯಾಗಿದ್ದರು.ರಾಮಮಂದಿರ ಉದ್ಘಾಟನೆಯಿಂದ ಉತ್ತರ ಪ್ರದೇಶದಲ್ಲಿ ಸಾಕಷ್ಟು ಸೀಟುಗಳನ್ನು ಬಾಚಿಕೊಳ್ಳಬಹುದೆಂದು ಅಂದಾಜಿಸಿದ್ದರು.ಇದರ ಮಧ್ಯೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮೋದಿಜೀ ಅವರಿಗೆ ಹುಳ ಬಿಟ್ಟಂತೆ ಪಿಡಿಎ (ಪಿಚಡೆ, ದಲಿತ್, ಅಲ್ಪಸಂಖ್ಯಾತ್ ) ಹಿಂದುಳಿತ, ದಲಿತ, ಅಲ್ಪಸಂಖ್ಯಾತ ಎನ್ನುವ ಸೋಷಿಯಲ್ ಇಂಜಿನಿಯರಿಂಗ್ ಹರಿಯಬಿಟ್ಟರು. ಇದೀಗ ಉತ್ತರ ಪ್ರದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ.ಜಾತಿ ಸಮೀಕರಣವನ್ನು ಸಮತೋಲನ ಮಾಡಿ ಟಿಕೆಟ್ ನೀಡಿರುವ ಅಖಿಲೇಶ್ ಯಾದವ್ ಕಾಂಗ್ರೆಸ್ ಜೊತೆ ಸೇರಿ ಬಿಜೆಪಿಗೆ ಸರಿ ಸಮಾನವಾಗಿ ಟಕ್ಕರ್ ಕೊಡುತ್ತಿದ್ದಾರೆ.

ಬಿಜೆಪಿಯ ಅಬ್ ಕೀ ಬಾರ್ ಚಾರ್ ಸೋ ಪಾರ್ ಎನ್ನುವ ಸ್ಲೋಗನ್ ಅನ್ನು ತಿರುಗಿಸಿ ಬಿಜೆಪಿಗೆ ಬ್ಯಾಕ್ ಫೈರ್ ಮಾಡುವಲ್ಲಿ ಯಶಸ್ವಿಯಾಗಿರುವ ಅಖಿಲೇಶ್ ಯಾದವ್, ಬಿಜೆಪಿ ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ 400 ಸೀಟುಗಳು ಬೇಕೆಂದು ಕೇಳುತ್ತಿದೆ. ಒಂದು ವೇಳೆ ಬಿಜೆಪಿ ಸಂವಿಧಾನ ಬದಲಾವಣೆ ಮಾಡಿದರೆ ಹಿಂದುಳಿದ, ದಲಿತ,ಅಲ್ಪಸಂಖ್ಯಾತ ಸಮುದಾಯಗಳ ಗತಿ ಏನು ಎನ್ನುವ ನರೇಟಿವ್ ಅನ್ನು ಜನರ ಮನಸ್ಸಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಖಿಲೇಶ್ ಅವರ ಪಿಡಿಎ ಅಸ್ತ್ರ ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲ.ಕಳೆದ ಚುನಾವಣೆಯಲ್ಲಿ 80 ಸ್ಥಾನಗಳ ಪೈಕಿ 62 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 50 ರೊಳಗೆ ಇರಲಿದೆ ಎಂಬ ಮಾತುಗಳು‌ ಕೇಳಿಬರುತ್ತಿದ್ದು,ಸಾಕಷ್ಟು ಕುತೂಹಲ ಕೆರಳಿಸಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ