Monday, November 23, 2026

ಪ್ರಾಯೋಗಿಕ ಆವೃತ್ತಿ

ಮುಂಬೈ ಸಟ್ಟಾ ಬಜಾರ್ ಪ್ರಕಾರ ಕರ್ನಾಟಕದಲ್ಲಿ ಕಾಂಗ್ರೆಸ್-20- ಬಿಜೆಪಿ-08 !

ಲೋಕಸಭಾ ಚುನಾವಣಾ ಸಮೀಕ್ಷೆಗಳನ್ನು ಆಧರಿಸಿ ಮುಂಬೈ ಸಟ್ಟಾ ಬಜಾರ್ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 20 ಸ್ಥಾನಗಳನ್ನು ಗೆಲ್ಲಲಿದ್ದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕೇವಲ 8 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳಿದೆ. ಒಂದು ವೇಳೆ ಮುಂಬೈ ಸಟ್ಟಾ ಬಜಾರ್ ಹೇಳಿರುವ ರೀತಿಯಲ್ಲಿ ಫಲಿತಾಂಶ ಬಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಬಂಪರ್ ಬೆಳೆ ತೆಗೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಚುನಾವಣೆಗಳ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಯಾವುದೇ ಸಂಸ್ಥೆಗಳು ಸಮೀಕ್ಷೆ ಮಾಡಿದರೂ ಸಹ ಅವುಗಳಿಗೆ ಒಂದು ಇತಿ ಮಿತಿ ಇರುತ್ತೆ.ಆ ಸಮೀಕ್ಷೆಯ ಹಿಂದೆ ರಾಜಕೀಯ ಹಿತಾಸಕ್ತಿ ಅಡಕವಾಗಿರುವ ಸಾಧ್ಯತೆಗಳಿರುತ್ತೆ. ಬಹುತೇಕ ಚುನಾವಣಾ ಸಮೀಕ್ಷೆಗಳು ಹೀಗೆ ಆಗಿರುತ್ತದೆ ಎನ್ನುವುದಕ್ಕೆ ಈ ಹಿಂದಿನ ಹಲವು ಚುನಾವಣಾ ಸಮೀಕ್ಷೆಗಳ ಫಲಿತಾಂಶವೇ ಸಾಕ್ಷಿಯಾಗಿದೆ. ಇದಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದರೆಡು ಮಾಧ್ಯಮಗಳನ್ನು ಬಿಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಗಳಿಸುತ್ತದೆ ಎಂದು ಯಾವ ಮಾಧ್ಯಮಗಳ ಸಮೀಕ್ಷೆಗಳೂ ಹೇಳಿರಲಿಲ್ಲ. ಆದರೆ ಎಲ್ಲಾ ಸಮೀಕ್ಷೆಗಳನ್ನು ಧೂಳೀಪಟ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅದೇ ರೀತಿ ಈಗ ಲೋಕಸಭಾ ಚುನಾವಣೆ ಫಲಿತಾಂಶದಲ್ಲೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳುತ್ತಿದೆ.

ಆದರೆ ಸಟ್ಟಾ ಆಡುವವರ ಸಮೀಕ್ಷೆಗಳು ಪಕ್ಕಾ ಇರುತ್ತೆ ಅನ್ನುವ ಮಾತು ದೇಶದಾದ್ಯಂತ ಚಾಲ್ತಿಯಲ್ಲಿದೆ. ಏಕೆಂದರೆ ಸಟ್ಟಾ ಆಡುವವರು ಅಥವಾ ಬಾಜಿ ಕಟ್ಟುವವರು ಕೋಟ್ಯಾಂತರ ಹಣ ಬಂಡವಾಳ ಹೂಡಿದ್ದು ಇಲ್ಲಿ ಲಾಭ-ನಷ್ಟ ಮುಖ್ಯವಾಗಿದ್ದು ಯಾವುದೇ ರಾಜಕೀಯ ಸಿದ್ಧಾಂತ, ಸ್ವಇಚ್ಚೆ ಮುಖ್ಯವಾಗಿರುವುದಿಲ್ಲ. ಆ‌‌ ಪ್ರಕಾರವಾಗಿ ಭಾರತದ ಅತ್ಯಂತ ದೊಡ್ಡ ಸಟ್ಟಾ ಜೂಜು ಮಾರುಕಟ್ಟೆಯಾಗಿರುವ ಮುಂಬೈ ಮಾರುಕಟ್ಟೆಯಲ್ಲಿ ಈಗ ಜೂಜಾಡುವವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 20 ಸ್ಥಾನ‌ ಮತ್ತು ಬಿಜೆಪಿ- ಜೆಡಿಎಸ್ ಮೈತ್ರಿ 08 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಸೋಡಿ ಕಟ್ಟುತ್ತಿದ್ದು, ಮುಂಬೈ ಸಟ್ಟಾ ಬಜಾರ್ ದಲ್ಲಾಳಿಗಳ ಪ್ರಕಾರವೇ ಮತದಾರರು ಓಟು ಚಲಾಯಿಸಿದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ‌ಬಂಪರ್ ಬೆಳೆ ತೆಗೆಯುವುದು ನಿಶ್ಚಿತ.

ಬಿಜೆಪಿಗೆ ಆರು ಸ್ಥಾನ

ಆರ್ ಎಸ್ ಎಸ್ ನಡೆಸಿರುವ ಅಂತರಿಕ ಸರ್ವೆಯಲ್ಲಿ ಬಿಜೆಪಿಗೆ ಕೇವಲ 6 ಸ್ಥಾನ ಮಾತ್ರ ಬರಲಿದೆ ಎಂದು ಹೇಳಿದೆ. ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಈ ಫಲಿತಾಂಶ ಕಂಡು ಬಿಜೆಪಿಗರಿಗೆ ಶಾಕ್ ಆಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಲಿದೆ ಎಂದು ಹೇಳುತ್ತಿವೆ. ಖುದ್ದು, ಪ್ರಧಾನಿ ಮೋದಿ ಕೂಡಾ ಚಾರ್ ಸೋ ಪಾರ್ ಅನ್ನುತ್ತಿದ್ದಾರೆ. ಆದರೆ, ಬಿಜೆಪಿಯ ಮಾತೃ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ನಡೆಸಿದೆ ಎನ್ನಲಾದ ಆಂತರಿಕ ಸಮೀಕ್ಷೆಯಲ್ಲಿ ಬೇರೆ ಫಲಿತಾಂಶವಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ