Friday, November 20, 2026

ಪ್ರಾಯೋಗಿಕ ಆವೃತ್ತಿ

ಸ್ಮೃತಿ ಹಿರಾನಿ‌ ವಿರುದ್ಧ ಬಿಪಿನ್ ಕುಮಾರ್ ಎಂಬ ಅಸ್ತ್ರ ಹೂಡಿದ ಕಾಂಗ್ರೆಸ್

ಸರಿಯಾಗಿ ಒಂದು ವರ್ಷದ ಹಿಂದೆ ಅಮೇಥಿಯ ದೈನಿಕ್ ಭಾಸ್ಕರ್ ಎಂಬ ಹಿಂದಿ ಪತ್ರಿಕೆಯ ಪತ್ರಕರ್ತ ಬಿಪಿನ್ ಕುಮಾರ್ ಕೇಂದ್ರ ಸಚಿವೆ ಸ್ಮೃತಿ ಹಿರಾನಿ ಅವರಿಗೆ ಟಿವಿ ಕ್ಯಾಮರಾ ಮುಂದೆ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ಬಗ್ಗೆ ಪ್ರಶ್ನೆ ಕೇಳಿತ್ತಾರೆ.

ಈ ಪ್ರಶ್ನೆಗಳಿಂದ ಸಿಟ್ಟಾದ ಸ್ಮೃತಿ ಹಿರಾನಿ ನೀವು ದೈನಿಕ್ ಭಾಸ್ಕರ್ ಪತ್ರಿಕೆಯ ವರದಿಗಾರರಲ್ಲವೇ? ನಿಮ್ಮ ಮಾಲೀಕರಿಗೆ ಪೋನ್ ಮಾಡಿ ಹೇಳುತ್ತೇನೆ ತಡೀರಿ ಎಂದು ಧಮಕಿ ಹಾಕುತ್ತಾರೆ ಅಷ್ಟೇ.ಮಾರನೇ ದಿನ ಬಿಪಿನ್ ಕುಮಾರ್ ಎಂಬ ಪರ್ತಕರ್ತ ಕೆಲಸ ಕಳೆದುಕೊಳ್ಳುತ್ತಾನೆ.

ಆದರೆ ಚುನಾವಣೆ ಸಮಯದಲ್ಲಿ ಈ ವೀಡಿಯೋ ಕ್ಲಿಪಿಂಗ್ ಮತ್ತು ಕೆಲಸ‌ ಕಳೆದುಕೊಂಡ ಪರ್ತಕರ್ತನ ವಿಚಾರ ಮುಂದೆ ಮಾಡಿಕೊಂಡು‌ ಕಾಂಗ್ರೆಸ್ ಅಮೇಥಿ ಯಲ್ಲಿ ಚುನಾವಣಾ ತಂತ್ರ ಹೆಣೆದಿದ್ದು,ಒಂದು ವೇಳೆ ಸ್ಮೃತಿ ಹಿರಾನಿ‌ ಚುನಾವಣೆಯಲ್ಲಿ ಸೋತರೆ ಬಿಪಿನ್ ಕುಮಾರ್ ಅವರನ್ನು ಕೆಲಸದಿಂದ ಕಿತ್ತು ಹಾಕಿದ ವಿಷಯವೂ ಪ್ರಮುಖ ಕಾರಣವಾಗಲಿದೆ ಎಂದು ಅಮೇಥಿ ಜನರು ಮಾತನಾಡಿ ಕೊಳ್ಳುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ