ಉಡುಪಿ ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೇ 18 ರಂದೇ ಘಟನೆ ನಡೆದಿದೆ ಎನ್ನಲಾಗಿದೆ. ಅಂದಿನ ರಾತ್ರಿ ಎರಡು ತಂಡಗಳ ನಡುವೆ ನಡು ರಸ್ತೆಯಲ್ಲೇ ಹೊಡೆದಾಟ ನಡೆದಿದೆ. ಅಡ್ಡಾದಿಡ್ಡಿ ಕಾರು ಚಲಾಯಿಸಿ ಎರಡೂ ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಬಳಿಕ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ.
ನಡುರಸ್ತೆಯಲ್ಲೇ ತಂಡವೊಂದು ತಲವಾರು ಹಿಡಿದು ಹೊಡೆದಾಟ ನಡೆಸಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದಲ್ಲಿ ಸಿನಿಮಾ ಸ್ಟೈಲ್ ಗ್ಯಾಂಗ್ ವಾರ್!
ಉಡುಪಿ ಕುಂಜಿಬೆಟ್ಟು ರಸ್ತೆಯಲ್ಲಿ ಮೇ 18ರ ರಾತ್ರಿ ನಡೆದ ಯುವಕರ ಗ್ಯಾಂಗ್ ವಾರ್ ಇದು. ರಸ್ತೆಯಲ್ಲಿ ಕಾರ್ ಗುದ್ದಿದ ರಭಸಕ್ಕೆ ಬಿದ್ದ ಯುವಕನ ಪರಿಸ್ಥಿತಿ ಗಂಭೀರವಾಗಿದೆ. #karnataka #udupi #gangwar pic.twitter.com/nIDr6ppB4B
— Sharmitha Shetty | ಶರ್ಮಿತಾ ಶೆಟ್ಟಿ (@Sharmithashetty) May 25, 2024
“>
ಪ್ರಕರಣದಲ್ಲಿ ಇಸಾಕ್ ಮತ್ತು ಮತ್ತೊಬ್ಬನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸುತ್ತಿದೆ. ಆರೋಪಿಗಳು ಕಾರಿನಲ್ಲಿ ಅಕ್ರಮವಾಗಿ ತಲವಾರ್ನ್ನು ಇಟ್ಟುಕೊಂಡು ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದರು ಎಂದೂ ಹೇಳಲಾಗಿದೆ.