ಪಶುಸಂಗೋಪನೆ ಇಲಾಖೆಯಿಂದ ಸಿಗುವಂತ ಸೌಲಭ್ಯಗಳನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಪಶುಸಂಗೋಪನೆ ಇಲಾಖೆಯ ಜಿಲ್ಲಾಉಪ ನಿರ್ದೇಶಕ ಡಾ.ಸುರೇಶ್ ತಿಳಿಸಿದರು.
ಮದ್ದೂರು ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಆಯೋಜಿಸಿದ್ದ ವೈಜ್ಞಾನಿಕ ಪಶುಸಂಗೋಪನೆ ಕುರಿತು ನಡೆದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಶುಸಂಗೋಪನೆ ಇಲಾಖೆಯಿಂದ ಚಿಕ್ಕರಸಿನಕೆರೆ ಹಾಗೂ ಕಸಬಾಹೋಬಳಿ ರೈತರಿಗೆ 2 ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಲು ಮುಂದಾಗಬೇಕೆಂದು ತಿಳಿಸಿದರು.
ಹಾಲು ಉತ್ಪಾದಕರು ಪಶುಸಂಗೋಪನೆಯಲ್ಲಿ ಉತ್ತಮ ಲಾಭಾಂಶವನ್ನು ಕಾಣಬಹುದು. ಪಶುಗಳಿಗೆ ಸಕಾಲಕ್ಕೆ ಚುಚ್ಚುಮದ್ದುಗಳನ್ನು ಹಾಕಿಸುವ ಮೂಲಕ ಪೋಷಣೆ ಮಾಡಬೇಕು. ಕಡಿಮೆ ವೆಚ್ಚದಲ್ಲಿ ಪಶುಗಳನ್ನು ಸಾಕಿ ಹೆಚ್ಚುಲಾಭಗಳಿಸಲು ಮುಂದಾಗಬೇಕು. ಶುದ್ದ ಹಾಲು ನೀಡಲು ಹಾಲು ಉತ್ಪಾದಕರು ಮುಂದಾದಾಗ ಹಾಲಿಗೆ ಬೇಡಿಕೆ ಹೆಚ್ಚಾಗಿ ಉತ್ತಮ ಲಾಭಬಂದು ರೈತರಿಗೂ ಹೆಚ್ಚುದರ ನೀಡಲು ಸಾಧ್ಯವಾಗುತ್ತದೆ ಎಂದರು.
ಹೈನುಗಾರಿಕೆಯು ಒಂದು ಉಪಕಸುಭಾಗಿದೆ. ಹೈನುಗಾರಿಕೆಯಿಂದ ಉತ್ತಮ ಲಾಭಾಂಶವನ್ನು ಕಾಣಬಹುದು. ಆದ್ದರಿಂದ ರೈತರು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಬೇಕು. ಪ್ರತೀಲೀಟರ್ ಹಾಲಿನ ಉತ್ಪಾದನೆಗೆ ಸರ್ಕಾರವು ಸಹ 6 ರೂ ಸಹಾಯಧನ ನೀಡುತ್ತಿದೆ. ಇದನ್ನು ಸದ್ಬಳಕೆಮಾಡಿಕೊಳ್ಳಬೇಕೆಂದು ಕರೆನೀಡಿದರು.
ಇದೇ ವೇಳೆ ತಾಲ್ಲೂಕು ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ. ಪ್ರವೀಣ್ ಕುಮಾರ್, ಪಶುವೈದ್ಯಾಧಿಕಾರಿಗಳಾದ ಡಾ ಉದಯ್ ಶಂಕರ್, ಡಾ. ಶಿವಶಂಕರ್, ಗೋವಿಂದ, ಡಾ.ಶೃತಿ, ಪಶುವೈದ್ಯಕೀಯ ಸೇವಾ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.