Monday, November 23, 2026

ಪ್ರಾಯೋಗಿಕ ಆವೃತ್ತಿ

ಕಲೆಯು ಮಕ್ಕಳಲ್ಲಿ ಏಕಾಗ್ರತೆ- ಆಸಕ್ತಿ ಹೆಚ್ಚಿಸುತ್ತದೆ: ಡಾ.ಹೆಚ್.ಎಲ್ ನಾಗರಾಜು

ಕಲೆಯಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ, ಏಕಾಗ್ರತೆ ಹಾಗೂ ಆಸಕ್ತಿ ಹೆಚ್ಚುತ್ತದೆ, ಜೊತೆಗೆ ಭಾಷಾ ಪ್ರೌಢಿಮೆ ಬೆಳೆಯುತ್ತದೆ. ಪದ ಪ್ರಯೋಗಗಳ ಬಳಕೆಯು ಕೂಡ ಹೆಚ್ಚಾಗುತ್ತದೆ. ಅಭಿವ್ಯಕ್ತಿ ಸಾಮರ್ಥ್ಯ ಬೆಳೆಯುತ್ತದೆ ಅಪರ ಜಿಲ್ಲಾಧಿಕಾರಿ ಡಾ.ಎಚ್. ಎಲ್ ನಾಗರಾಜ್ ತಿಳಿಸಿದರು.

ಪಾಂಡವಪುರದ ದೊಡ್ಡಬ್ಯಾಡರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ರಂಗ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳ ಸರ್ವಾಂಗಣ ಬೆಳವಣಿಗೆಗೆ ಇಂತಹ ಶಿಬಿರಗಳು ಸಹಕಾರಿಯಾಗುತ್ತದೆ. ಜೊತೆಗೆ ಭವಿಷ್ಯದಲ್ಲಿ ಇಂತಹ ಮಕ್ಕಳಿಗೆ ರಂಗಕಲೆಯಲ್ಲಿ ಉನ್ನತ ಸ್ಥಾನದಲ್ಲಿ ಗುರ್ತಿಸಿಕೊಳ್ಳುವಂತಹ ಶಕ್ತಿ ಬೆಳೆಯುತ್ತದೆ ಎಂದರು.

ಮೂಡಲಪಾಯ ಯಕ್ಷಗಾನ ನಾಟಕ ಇದೊಂದು ಅದ್ಭುತ, ಅಭೂತ ಪೂರ್ವವಾದ ಕಲೆ, ಇದರಿಂದ ಮಕ್ಕಳ ವ್ಯಕ್ತಿತ್ವ ಬೆಳೆಯುತ್ತಾ ಹೋಗುತ್ತದೆ. ಸಾಂಸ್ಕೃತಿಕ ಕಲೆಗಳಲ್ಲಿ ತೊಡಗಿಸಿಕೊಂಡಂತಹ ಮಕ್ಕಳ ಕಲಿಕೆಯನ್ನು ನೋಡಿದಾಗ ಕಲಿಕೆಯಲ್ಲೂ ಕೂಡ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿರುವುದನ್ನ ನಾವು ಕಂಡಿದ್ದೇವೆ.
ಹಾಗಾಗಿ ಪೋಷಕರು ಮಕ್ಕಳ ಮಾನಸಿಕ ಮಟ್ಟ ವಿಕಾಸಗೊಳ್ಳಲು ಇಂತಹ ಶಿಬಿರಗಳಿಗೆ ಹೆಚ್ಚು ಹೆಚ್ಚು ಸೇರಿಸುವಂತಹ ಕೆಲಸಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್ ಮಾತನಾಡಿ, ಈ ಶಾಲೆಯ ಮಕ್ಕಳು ಯಾವುದೇ ವಿಷಯವನ್ನು ಕೊಟ್ಟರೂ ನಿರರ್ಗಳವಾಗಿ ಮಾತನಾಡುವಂತಹ ಕಲೆಯನ್ನು ಬೆಳೆಸಿಕೊಂಡಿದ್ದಾರೆ. ಪ್ರತಿಯೊಬ್ಬ ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ ಅದನ್ನು ಹೊರ ತರುವಂತಹ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ವಹಿಸಿ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಯಕ್ಷಗಾನ ನಾಟಕಗಳು ಹೊಸ ಹೊಸ ಹೊಸ ಆವಿಷ್ಕಾರಗಳೊಂದಿಗೆ ದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಆದರೆ ನಮ್ಮ ಮಂಡ್ಯದ ಭಾಗದಲ್ಲಿ ಮೂಡಲಪಾಯ ಯಕ್ಷಗಾನ ನಾಟಕ ಪ್ರೋತ್ಸಾಹವಿಲ್ಲದೆ ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕ ಸಂಘ ವಿವಿಧ ಶಾಲೆಗಳಲ್ಲಿ ಅದರಲ್ಲೂ ಮಕ್ಕಳಿಗೆ ಈ ಯಕ್ಷಗಾನ ನಾಟಕಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಪ್ರಗತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಡಾ.ನಾಗೇಶ್ ರಾಗಿಮುದ್ದನಹಳ್ಳಿ, ಶಿಕ್ಷಣ ಚಿಂತಕರಾದ ಉಮಾಕ್ಯಾತಿಯಿನಿ, ಶ್ರೀರಾಮನಾಥ್, ಮಂಡ್ಯ ಸ್ಕೌಟ್ ಅಂಡ್ ಗೈಡ್ಸ್ ಅಧಿಕಾರಿ ಅನಿಲ್ ಕುಮಾರ್, ಭಕ್ತ ವತ್ಸಲಂ, ರಘು, ರಂಗಭೂಮಿ ನಿರ್ದೇಶಕರಾದ ಮಂಜುನಾಥ ಬಡಿಗೇರ ತಲಕಾಡು ರವೀಂದ್ರ ,
ಕೃಷ್ಣ, ಚೈತನ್ಯ, ಪ.ಮ. ನಂಜುಂಡಸ್ವಾಮಿ, ಸಂಪನ್ಮೂಲ ವ್ಯಕ್ತಿ ರಾಜೇಗೌಡ, ಉಪನ್ಯಾಸಕರಾದ ಧನಂಜಯ ಬ್ಯಾಡರಹಳ್ಳಿ, ಕರ್ನಾಟಕದ ಸಂಘದ ಸೋಮಣ್ಣ ,ಗುರುಮೂರ್ತಿ, ಅರ್ಪಿತ ಎಸ್‌.ಡಿ.ಎಂ.ಸಿ. ಅಧ್ಯಕ್ಷೆ ಲಾವಣ್ಯ, ಸದಸ್ಯರಾದ ಲಿಂಗರಾಜು ಕೃಷ್ಣ, ಕುಮಾರ್ ಭಾಗವಹಿಸಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ