ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣಾ ಫಲಿತಾಂಶ ನಾಳೆ (ಮೇ 13) ಪ್ರಕಟವಾಗಲಿದೆ, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಜೊತೆಗೆ ಇನ್ನೂ ಹಲವಾರು ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಆದ್ದರಿಂದ ಈ ಫಲಿತಾಂಶ ಪ್ರಕಟವಾದ ನಂತರ ವಿವಿಧ ರಾಜಕೀಯ ಪಕ್ಷಗಳ ನಾಯಕರು ನೀಡಬಹುದಾದ ಹಲವು ಹೇಳಿಕೆಗಳನ್ನು ಪಟ್ಟಿ ಮಾಡಲಾಗಿದೆ, ಇವುಗಳನ್ನು ಒಮ್ಮೆ ಓದಿ… ನಾಳೆ ಅವರು ನೀಡುವ ಹೇಳಿಕೆಗಳನ್ನು ಗಮನಿಸಿ….
- ಕೇಂದ್ರ ಇಲ್ಲದಿದ್ದರೆ ಏನಂತೆ ರಾಜ್ಯದಲ್ಲಾದರೂ ಬಂತಲ್ಲ, ಅಷ್ಟೇ ಸಾಕು
- ರಾಜ್ಯದಲ್ಲಿ ಇಲ್ಲದಿದ್ದರೆ ಏನಂತೆ ಕೇಂದ್ರದಲ್ಲಿ ನಮ್ಮದೇ, ಅಷ್ಟೇ ಸಾಕು
- ಕೇಂದ್ರದಲ್ಲೂ ನಮ್ಮದೇ, ರಾಜ್ಯದಲ್ಲೂ ನಮ್ಮದೇ
- ಸರ್ಕಾರ ಯಾವುದಾದರೂ ಏನಂತೆ MLA ಬಂತಲ್ಲ ಅಷ್ಟು ಸಾಕು
- MLA ಹೋದರೆ ಏನಂತೆ ಸರ್ಕಾರ ಬಂತಲ್ಲ
- ಸೋತಿದ್ದೇವೆ, ಸತ್ತಿಲ್ಲ
- ಧೂಳಿನಿಂದ ಮತ್ತೇ ಎದ್ದು ಬರುತ್ತೇವೆ ಅನ್ನೋ ವಿಶ್ವಾಸವಿದೆ
- ಹಣ ಹೆಂಡದ ಆಮಿಷದಿಂದ ಗೆದ್ದಿದ್ದಾರೆ
- ಜನರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ
- ನಮ್ಮೊಳಗೆ ಹೊಂದಾಣಿಕೆ ಇಲ್ಲದಿರುವುದೇ ನಮ್ಮ ಸೋಲಿಗೆ ಕಾರಣ
- ಈ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ
- ಈ ಗೆಲುವು ಆರೂವರೆ ಕೋಟಿ ಜನರ ಗೆಲುವು
- ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇವೆ
- ಭ್ರಷ್ಟರಿಗೆ ಜನ ಸರಿಯಾಗೇ ಬುದ್ದಿ ಕಲಿಸಿದ್ದಾರೆ
- ನಮ್ಮ ಏರಿಯಾದಲ್ಲಿ ನಾನಲ್ಲದಿದ್ದರೆ ಕಷ್ಟವಿತ್ತು
- ಕೊನೆಗೆ ನಾವು ಫೀಲ್ಡ್ ಗೆ ಇಳಿಯದೆ ಇದ್ದಿದ್ದರೆ ಕಷ್ಟವಿತ್ತು
- ಜಾತಿ ರಾಜಕಾರಣ ಮಾಡಿ ಗೆದ್ದಿದ್ದಾರೆ
- ರಾಜ್ಯ ಲೂಟಿ ಮಾಡಿದ ಹಣದ ಪ್ರಭಾವದಿಂದ ಗೆದ್ದಿದ್ದಾರೆ, ಇದು ನಿಜವಾದ ಗೆಲುವಲ್ಲ
- ಯಾರು ಬಂದ್ರೂ ನಮ್ಮ ಜನ ದಡ್ಡರಲ್ಲ, ನಮ್ಮ ಕೈ ಬಿಟ್ಟಿಲ್ಲ
- ಮೋದಿ ನೋಡಿ ಮತ ಹಾಕಿದ್ದಾರೆ, ಮೋದಿ ಅಭಿವೃದ್ಧಿಯನ್ನು ಜನ ಮೆಚ್ಚಿದ್ದಾರೆ
- ಮೋದಿಯೂ ಇಲ್ಲ, ಯಾರೂ ಇಲ್ಲ, ಜನ ದಡ್ಡರಲ್ಲ
- ಕೇಂದ್ರ ನಾಯಕರು ರಾಜ್ಯದಲ್ಲಿ ಬೀಡು ಬಿಟ್ಟು, ಬಿಟ್ಟಿ ಆಮಿಷ ತೋರಿಸಿ ಗೆದ್ದಿದ್ದಾರೆ
- ಯಾವ ಬಿಟ್ಟಿಗೂ ಜನ ಮರುಳಾಗಿಲ್ಲ
- ಕೊನೆಯದಾಗಿ ಅವರ ಪಕ್ಷದ ಒಂದಷ್ಟು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ




