ಸಕ್ಕರೆ ನಾಡು ಮಂಡ್ಯದಲ್ಲಿ ಡಿಸೆಂಬರ್ 20 ರಿಂದ ಮೂರು (03) ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ನೆಲದ ಅಸ್ಮಿತೆಯಾದ ಸಾಹಿತಿ, ಚಿಂತಕ ಹಾಗೂ ಹೋರಾಟಗಾರರಾದ ದೇವನೂರು ಮಹದೇವರವರು ಅಧ್ಯಕ್ಷರಾಗುವುದು ಸೂಕ್ತ ಎಂದು ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಸದಸ್ಯ ಎಂ.ಎಲ್ ತುಳಸಿದರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ್ ಜೋಶಿಯವರನ್ನು ಒತ್ತಾಯಿಸಿದ್ದಾರೆ.
ದೇವನೂರ ಮಹದೇವ ಎಲೆ ಮರೆಯ ಕಾಯಂತಿದ್ದು ಸರಳವಾದಿ ಜೀವನ ಮತ್ತು ವ್ಯಕ್ತಿತ್ವದ ಮೂಲಕ ಕನ್ನಡದ ಮನಸ್ಸುಗಳಲ್ಲಿ ನೆಲೆಯೂರಿರುವ ದೇವನೂರು ಮಹದೇವರವರು ಬದುಕು ಮತ್ತು ಬರಹ ಸಮ್ಮಿಳಿತವಾದಂತಿದೆ. ಶೋಷಿತರ ನೊಂದವರ ದನಿಯಾಗಿ ಬಂಡಾಯದ ಕಹಳೆಯುದುತ್ತ ಸಾಮಾಜಿಕ ಸ್ವಾಸ್ಥ್ಯದ ರಕ್ಷಣೆಗೆ ಎಚ್ಚರಿಸುತ್ತಾ ಬಂದಿರುವುದು ಅವರ ವೈಶಿಷ್ಟ್ಯ ಯ ಸಾಹಿತ್ಯದ ನೆರಳಿನಲ್ಲಿದ್ದು ವಿಜೃಂಭಣೆಯ ಬದುಕನ್ನರಸುತ್ತಿರುವವರ ನಡುವೆ ಸಡಗರ – ಸಂಭ್ರಮ ವೈಭವೊಪೇತ ವೇದಿಕೆಗಳಿಂದ ಸದಾ ದೂರವಿರಬಯಸುವ ದೇವನೂರು ಮಹದೇವ ರವರು ಸರಳತೆ ಮಾದರಿಯಾದದ್ದು ಎಂದು ಅವರು ಪ್ರಟಕಣೆಯಲ್ಲಿ ತಿಳಿಸಿದ್ಧಾರ.ಎ
ಇದೆಲ್ಲ ಸಂಗತಿಗಳೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ತಿಳಿಯದ ಸಂಗತಿಯೇನಲ್ಲ, ಮಂಡ್ಯದಲ್ಲಿ ಮೂರನೇ ಬಾರಿಗೆ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ದೇವನೂರು ಮಹದೇವ ಅವರನ್ನು ಅಧ್ಯಕ್ಷರನ್ನಾಗಿಸಿ ಕನ್ನಡದ ಹಬ್ಬವನ್ನು ಯಶಸ್ವಿಯಾಗಿ ನಡೆಸಿ ಕೊಡಬೇಕೆಂದು ತಿಳಿಸಲು ಮನವಿ ಮಾಡಿದ್ದಾರೆ.




