Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಮುದಾಯ ಭವನಗಳು ಐಕ್ಯತೆಯ ಸಂಕೇತ: ಡಾಲು ರವಿ

ಸಮುದಾಯ ಭವನಗಳು ಸಮುದಾಯಗಳ ಒಗ್ಗಟ್ಟಿನ ಐಕ್ಯತೆಯ ಸಂಕೇತವಾಗಿವೆ, ಹಾಗಾಗಿ ಇವುಗಳ  ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕೆಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಹೇಳಿದರು.

ಕೆ.ಆರ್.ಪೇಟೆ ಪಟ್ಟಣದಲ್ಲಿ ಅಖಿಲ ನಾಮಧಾರಿಗೌಡರ ಸಂಘದ ವತಿಯಿಂದ ನಿರ್ಮಾಣಗೊಳುತ್ತಿರುವ ಸಮುದಾಯ ಭವನ ನಿರ್ಮಾಣಕ್ಕೆ  25 ಸಾವಿರ ರೂ. ಹಣವನ್ನು ದೇಣಿಗೆಯಾಗಿ ನೀಡಿ ಮಾತನಾಡಿದರು.

ತಾಲ್ಲೂಕಿನಲ್ಲಿ ಈಗಾಗಲೇ ಹಲವಾರು ಸಮಾಜದ, ಸಮುದಾಯ ಭವನಗಳು, ಪಟ್ಟಣ ಮತ್ತು ಗ್ರಾಮಗಳಲ್ಲಿ ತಲೆಯೆತ್ತಿವೆ. ಆದರೆ ಬಹುತೇಕ ಸಮುದಾಯಗಳು ಪೂರ್ಣಗೊಂಡಿಲ್ಲ, ಸಮರ್ಪಕ ನಿರ್ವಹಣೆ ಕೊರತೆಯಿಂದ ಕೆಲ ಕಟ್ಟಡಗಳು ಶಿಥಿಲಾವಸ್ತೆ ತಲುಪುತ್ತಿವೆ,  ಆದ್ದರಿಂದಾಗಿ ಸಮುದಾಯ ಭವನಗಳನ್ನು ಶುಭ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಅಖಿಲ ನಾಮಧಾರಿ ಸಂಘದ ಅಧ್ಯಕ್ಷ ದೊಡ್ಡತಮ್ಮಣ್ಣಿಗೌಡ, ಕಾರ್ಯದರ್ಶಿ ಮಂಜು, ಸದಸ್ಯರಾದ ಸಿದ್ದೇಗೌಡ.  ಅಣ್ಣಯ್ಯ, ಕಾಂತರಾಜು, ಭೀಮರಾಜು, ರಾಜಕುಮಾರ್, ಕೃಷ್ಣೆಗೌಡ, ಸ್ವಾಮಿಗೌಡ ಹಾಗೂ  ಸಿದ್ದೇಗೌಡ ಸೇರಿದಂತೆ ಮತ್ತಿತರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ