Thursday, October 24, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಸಚಿವ ರಾಜಣ್ಣ ಹೇಳಿಕೆ ಖಂಡಿಸಿ ಪ್ರತಿಭಟನೆ; ಕ್ಷಮೆಯಾಚನೆಗೆ ಆಗ್ರಹ

ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರನಾಥ ಸ್ವಾಮಿಜೀ ಅವರ ಕುರಿತು ನೀಡಿರುವ ಹೇಳಿಕೆ ಖಂಡಿಸಿ ಮದ್ದೂರಿನಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ತಾಲ್ಲೂಕು ಘಟಕ ಶನಿವಾರ ಪ್ರತಿಭಟನೆ ನಡೆಯಿತು.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸಂಘಟನೆ ಮುಖಂಡರು, ಕಾರ್ಯಕರ್ತರು, ಸಚಿವ ರಾಜಣ್ಣ ವಿರುದ್ದ ಘೋಷಣೆ ಮೊಳಗಿಸಿದರು.

ಈ ಸಂದರ್ಭದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ ಸಿ ಉಮಾಶಂಕರ್ ಮಾತನಾಡಿ,
ಸ್ವಾಮಿಜೀಯವರು ನಾಡಪ್ರಭು ಕೆಂಪೇಗೌಡ ಜಯಂತಿ ವೇಳೆ ಮುಖ್ಯಮಂತ್ರಿ ಸ್ಥಾನವನ್ಮು ಡಿ ಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡುವ ಕುರಿತು ನೀಡಿದ ಸಲಹೆಗೆ, ರಾಜಣ್ಣ ಉದ್ದಟತನದಿಂದ ಪ್ರತಿಕ್ರಿಯೆ ನೀಡಿ ಪೀಠ ಬಿಟ್ಟು ಕೊಡುವ ಕುರಿತು ಮಾತನಾಡಿರುವ ಕ್ರಮ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು

ಮಠ ಹಾಗೂ ಸ್ವಾಮಿಜೀಗಳ ಕುರಿತ ಅವರ ಹೇಳಿಕೆ ಮಠದ ಭಕ್ತರ ಹಾಗು ಒಕ್ಮಲಿಗ ಸಮುದಾಯದವರಲ್ಲಿ ನೊವುಂಟು ಮಾಡಿದ್ದು, ಈ ಕೂಡಲೆ ಮಠಾದೀಶರಲ್ಲಿ ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಮಂಡ್ಯ ಜಿಲ್ಲಾ ಪ್ರವೇಶ ಮಾಡಲು ಬಿಡದೇ ತಡೆ ಒಡ್ಡುವುದಾಗಿ ಎಚ್ಚರಿಕೆ ನೀಡಿದರು

ಸಂಘದ ತಾಲ್ಲೂಕು ಅಧ್ಯಕ್ಷ ಚಂದೂಪುರ ಶಿವಲಿಂಗೇಗೌಡ ಮಾತನಾಡಿ, ಸಹಕಾರ ಸಚಿವ ರಾಜಣ್ಣ ಅವರು ಒಕ್ಕಲಿಗ ಮಠ ಹಾಗು ಒಕ್ಕಲಿಗ ನಾಯಕರ ಬಗ್ಗೆ ಲಘುವಾಗಿ ಮಾತಾಡುವುದನ್ನ ನಿಲ್ಲಿಸದಿದ್ದಲ್ಲಿ ರಾಜ್ಯಾದ್ಯಂತ ಒಕ್ಕಲಿಗರ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು

ಕರ್ನಾಟಕ ರಕ್ಷಣಾ ವೇದಿಕೆಯ ಆಶೊಕ್ ಮಾತನಾಡಿ, ಮುಖ್ಯಮಂತ್ರಿಗಳು ತಮ್ಮ ಸಚಿವ ಸಂಪುಟದ ಸದಸ್ಯರಿಗೆ ಸೂಕ್ತ ತಿಳುವಳಿಕೆ ನೀಡುವಂತೆ ಸೂಚಿಸಬೇಕು, ಇಲ್ಲವಾದಲ್ಲಿ ಒಕ್ಕಲಿಗ ಸಮುದಾಯ ಜಾಗೃತವಾಗಿದ್ದು ತಕ್ಕ ಉತ್ತರ ನೀಡಲಿದೆ ಎಂದರು.

ಪ್ರತಿಭಟನೆಯಲ್ಲಿ ಅಖಿಲಕರ್ನಾಟಕ ಒಕ್ಕಲಿಗರ ಸಂಘದ ನಾರಾಯಣ್, ಕಾರ್ಯದರ್ಶಿ ಹಾಗಲಹಳ್ಳಿ ಬಸವರಾಜು, ನಿವೃತ್ತ ಶಿಕ್ಷಕರಾದ ಚನ್ನಪ್ಪ, ಕುದುರಗುಂಡಿ ನಾರಾಯಣ, ಮಹಿಳಾ ಘಟಕದ ಅಧ್ಯಕ್ಷೆ ವಸಂತ. ಕರಡಕೆರೆ ಮಂಜುಳಾ, ನಾಡಪ್ರಭು ಕೆಂಪೇಗೌಡ ಸಂಘದ ತಾಲ್ಲೂಕು ಅಧ್ಯಕ್ಷ ದೇಶಹಳ್ಳಿ ಶಿವಪ್ಪ,
ಸಂಗೊಳ್ಳಿ ರಾಯಣ್ಣ ಸಂಘಟನೆಯ ಮ ನ ಪ್ರಸನ್ನಕುಮಾರ್, ಮಲ್ಲನಕುಪ್ಪೆ ಗ್ರಾ ಪಂ ಸದಸ್ಯ ತಿಮ್ಮಯ್ಯ, ತಗ್ಗಹಳ್ಳಿ ಗೋಪಾಲ್, ತೂಬಿನಕೆರೆ ರಾಜು, ಕಸ್ತೂರಿ ಕರ್ನಾಟಕ ವೇದಿಕೆಯ ತಾಲ್ಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಸಕ್ಕರೆ ನಾಗರಾಜು, ಅನಿಲ್ ಪ್ರಕಾಶ್, ತೊರೆಶೆಟ್ಟಹಳ್ಳಿ ಸಿ ಅನಿಲ್, ಪರಶುರಾಮ್, ದೊಡ್ಡರಸಿನಕೆರೆ ಶಿವು, ವಿ ಎಮ್ ರಮೇಶ್, ಗುಂಡ ಹಾಗೂ ಮಹೇಶ್ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!