ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರ ಆಸೆಯಂತೆ ಕರ್ನಾಟಕ ಸಂಘದ ಜಯಪ್ರಕಾಶ್ ಗೌಡರ ಅಭಿಲಾಷೆಯಂತೆ ಆಡಳಿತ ಮಂಡಳಿಯ ನಿರೀಕ್ಷೆಯಂತೆ ಮಂಡ್ಯದ ರೈತ ಸಭಾಂಗಣವನ್ನು ಅತ್ಯಾಧುನಿಕವಾಗಿ ನವೀಕರಿಸಲು ಅಗತ್ಯ ನೆರವು ನೀಡುವುದಾಗಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಮಂಡ್ಯ ನಗರದ ಆರ್’ಎಪಿಸಿಎಂಎಸ್ ರೈತ ಸಭಾಂಗಣ ನವೀಕರಿಸುವ ಸಲುವಾಗಿ ನಗರದ ರೈತ ಸಭಾಂಗಣಕ್ಕೆ ಭೇಟಿ ಪರಿಶೀಲಿಸಿ ಮಾತನಾಡಿದ ಅವರು, ಮಂಡ್ಯ ನಿರ್ಮಿತಿ ಕೇಂದ್ರದರವರು ಸಿದ್ಧಪಡಿಸಿರುವ ಯೋಜನಾ ವರದಿಯನ್ನು ಪರಿಶೀಲಿಸಿ ಸ್ಥಳದಲ್ಲೇ ಬೇಕಾದ ಅಗತ್ಯ ಹಣಕಾಸು ನೆರವನ್ನು ನೀಡುವುದಾಗಿ ಪ್ರಕಟಿಸಿದರು.
ಮಾಜಿ ಸಚಿವ ಪುಟ್ಟರಾಜು, ಇತ್ತಿಚೇಗೆ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಕುಮಾರಸ್ವಾಮಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ರೈತಸಭಾಂಗಣ ನವೀಕರಿಸುವ ಬಗ್ಗೆ ಗಮನ ಸೆಳೆದಿದ್ದರು. ಅದರಂತೆ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಯು.ಸಿ.ಶೇಖರ್, ಉಪಾಧ್ಯಕ್ಷ ಮಹೇಶ್, ಬೇಲೂರು ಸೋಮಶೇಖರ್, ಕೆ ಸಿ ರವೀಂದ್ರ, ಪುನೀತ್, ಎಚ್ಎಸ್ ಯೋಗೇಶ್ ಕುಮಾರ್, ಉದಯ್ ಕುಮಾರ್, ಪಾಪಯ್ಯ ಹಾಗೂ ಶ್ರೀಧರ್ ಮೊದಲಾದವರು ಭಾಗವಹಿಸಿದ್ದರು.
ಸ್ಥಳೀಯ ಮುಖಂಡರಾದ ಅಮರಾವತಿ ಚಂದ್ರಶೇಖರ್, ಮಾಜಿ ಶಾಸಕ ಅಂದಾನಿ, ಆರ್ ಎ ಪಿಸಿಎಂಎಸ್ ವ್ಯವಸ್ಥಾಪಕ ನಿರ್ದೇಶಕ ನಾಗಭೂಷಣ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಜಯಪ್ರಕಾಶ್ ಪಾಲ್ಗೊಂಡಿದ್ದರು.




