ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದಲ್ಲಿ ಒಟ್ಟು 4.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ವಿವಿಧ ಅಭಿವೃದ್ದಿ ಕಾಮಗಾರಿಗೆ ಶಾಸಕ ರವಿಕುಮಾರ್‌ಗೌಡ ಗಣಿಗ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮದಲ್ಲಿರುವ ಕೆರೆಗೆ ಹೊಸದಾಗಿ ಕೋಡಿ ನಿರ್ಮಾಣ, ಚಿಕ್ಕಬಳ್ಳಿಯಿಂದ ಮಾಯಪ್ಪನಹಳ್ಳಿಗೆ ಸೇರಿಯವ ರಸ್ತೆ ಅಭಿವೃದ್ದಿ, ಅನಸೋಸಲು ಹತ್ತಿರದ ಪಿಕ್‌ಅಪ್ ನಾಲೆ ಅಭಿವೃದ್ದಿಗೆ ಚಾಲನೆ ನೀಡಿದ್ದೇವೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ದಿ ಮಾಡಲಾಗುವುದು ಎಂದು ನುಡಿದರು.
ನಿಮ್ಮೂರ ಅಭಿವೃದ್ದಿಗೆ ನಾನು ಶಾಸಕನಾದ ಮೇಲೆ ಕೋಟ್ಯಾಂತರ ರೂ. ಅನುದಾನ ನೀಡಿದ್ದೇವೆ, ದೇವಾಲಯ ನಿರ್ಮಾಣವಾಗಿದೆ, ರಸ್ತೆç ನಿರ್ಮಾಣವಾಗಿದೆ, ಈಗ ಸಮುದಾಯಭವನ ಕೇಳಿದ್ದೀರಿ, ಮಾಡುತ್ತೇನೆ ನಮ್ಮೊಂದಿಗೆ ಇರಿ, ರಾಜಕೀಯವಾಗಿ ಶಕ್ತಿ ತುಂಬಿ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಹಕಾರ ನೀಡಿ ಎಂದು ಕೋರಿದರು.
ಮುಂದಿನ ದಿನಗಳಲ್ಲಿ ಒಂದು ಕೋಟಿ ರೂ.ಗಳಲ್ಲಿ ರಸ್ತೆ ಅವೃದ್ದಿಯಾಗಲಿದೆ, ಟೆಂಡರ್ ಹಂತದಲ್ಲಿದೆ, ಬರೀ ಒಂದು 2-5 ಲಕ್ಷ ರೂ.ಗಳ ಕಾಮಗಾರಿ ಮಾಡಲ್ಲ, ಏನಿದ್ದರೂ ಕೋಟಿ ರೂ.ಗಳಲ್ಲಿಯೇ ಅಭಿವೃದ್ದಿ ಮಾಡುತ್ತೇವೆ ಎಂದು ಕಿವಿಮಾತೇಳಿದರು.
ಕೆರೆ ಅಭಿವೃದ್ದಿಗೆ 3 ಕೋಟಿ ರೂ.ಹಾಕಿದ್ದೇವೆ, ಹಂತ ಹಂತವಾಗಿ ಅಭಿವೃದ್ದಿಗೆ ಆಗುತ್ತದೆ. ಮ್ಯಾಜಿಕ್ ಮಾಡಲು ಸಾಧ್ಯವಿಲ್ಲ, ಸಬ್‌ಡಿವಿಜನ್ ನಾಲೆಗೆ 40 ಕೋಟಿ ರೂ. ಯೋಜನೆ ಸಿದ್ದವಾಗಿದೆ, ನಿಮ್ಮಿಲ್ಲ ರೈತರ ನಾಲೆಗಳ ಅಭಿವೃದ್ದಿ ಆಗಲಿದೆ, ಮುಖ್ಯಮಂತ್ರಿಗಳು ಬಸರಾಳು ವ್ಯಾಪ್ತಿಯ ಅಭಿವೃದ್ದಿಗೆ 1 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ, ಶ್ರೀರಂಗಪಟ್ಟಣದಿಂದ ನದಿನೀರು ತಂದು ಬರನಾಡಿಗೆ ನೀರು ಒದಗಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರಾದ ಪುಟ್ಟಸ್ವಾಮಿ, ಪಾಪಣ್ಣ, ಅಶೋಕ್, ಸಿ.ಎಂ.ದ್ಯಾವಪ್ಪ, ಎಂ.ಕೃಷ್ಣ, ತ್ಯಾಗರಾಜು, ಟಿ.ದೇವರಾಜು, ಉಮೇಶ್, ಕುಮಾರ್ ಮತ್ತಿತರರಿದ್ದರು.




