ಕೊಡಗಿನಲ್ಲಿ ಇಂದೂ ಕೂಡ ಎಡೆಬಿಡದೇ ಸುರಿದ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ, ಇದರಿಂದಾಗಿ ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ಒಳ ಹರಿವಿನ ಪ್ರಮಾಣ 40,490 ಕ್ಯೂಸೆಕ್ ತಲುಪಿದೆ. ಅಣೆಕಟ್ಟೆಯ ನೀರಿನ ಮಟ್ಟ ಗುರುವಾರ ರಾತ್ರಿ 8 ಗಂಟೆಯ ವೇಳೆಗೆ 114.90 ಅಡಿಗೆ ತಲುಪಿದೆ.
ಇಂದು ಬೆಳಿಗ್ಗೆ 8 ಗಂಟೆಯ ವೇಳೆ ನೀರಿನ ಮಟ್ಟವು 113.40 ಅಡಿಗೆ ಮುಟ್ಟಿ, ಒಳಹರಿವು 36,772 ಕ್ಯೂಸೆಕ್ ದಾಖಲಾಗಿತ್ತು. ಆದರೆ ರಾತ್ರಿ ವೇಳೆಗೆ ಒಳಹರಿವಿನ ಪ್ರಮಾಣ 40 ಸಾವಿರ ಕ್ಯೂಸೆಕ್ ಗಿಂತ ಹೆಚ್ಚಾಗಿದ್ದು, ಅಣೆಕಟ್ಟೆಯ ನೀರಿನ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಿದೆ. ಕೆ.ಆರ್.ಎಸ್ ಅಚ್ಚುಕಟ್ಟಿನ ನಾಲೆಗಳಿಗೆ 2,560 ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ.
ಶ್ರೀಮಂಗಲ ಸಮೀಪ #ಲಕ್ಷ್ಮಣತೀರ್ಥ ಉಗಮ ಸ್ಥಾನವಾದ #ಕುರ್ಚಿ ಗ್ರಾಮದ #ಇರ್ಪುವಿನಲ್ಲಿ #ಇರ್ಪು_ಜಲಧಾರೆ ಮನಮಹೋಕವಾಗಿ ಕಂಗೊಳಿಸುತ್ತಿದೆ. pic.twitter.com/NqlDAAjiP2
— Coorgthekashmirofkarnataka (@Coorgthekashmir) July 18, 2024
“>
ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇದಲ್ಲದೇ ಅಲ್ಲಲ್ಲಿ ಗುಡ್ಡ ಕುಸಿತ ಹಾಗೂ ತೀವ್ರ ಮಳೆಯಿಂದಾಗಿ ಮನೆಗಳಿಗೆ ಹಾನಿಯಾಗಿ ಕುಸಿದು ಬಿದ್ದಿರುವ ಘಟನೆಗಳು ನಡೆದಿವೆ.
ಕೆ.ಆರ್.ಎಸ್ ಅಣೆಕಟ್ಟೆ ನೀರಿನ ಮಟ್ಟ (ಜು.18ರ ರಾತ್ರಿ 8 ಗಂಟೆ ವೇಳೆಗೆ)
- ಅಣೆಕಟ್ಟೆಯ ಗರಿಷ್ಠ ಮಟ್ಟ : 124.80 ಅಡಿ
- ಇಂದಿನ ನೀರಿನ ಮಟ್ಟ: 114.90 ಅಡಿ
- ಗರಿಷ್ಟ ಸಾಮರ್ಥ್ಯ : 49.452 ಟಿಎಂಸಿ
- ಪ್ರಸ್ತುತ ನೀರಿನ ಸಂಗ್ರಹ: 36.943 ಟಿಎಂಸಿ
- ಒಳಹರಿವು: 40,490 ಕ್ಯೂಸೆಕ್
- ಒಳ ಹರಿವು: 2,560 ಕ್ಯೂಸೆಕ್
ಕಬಿನಿ ಜಲಾಶಯವು ಭರ್ತಿಯಾಗಿದ್ದು, 70 ಸಾವಿರ ಕ್ಯೂಸೆಕ್ ಗಿಂತ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಹಾರಂಗಿ ಜಲಾಶಯವು ಭರ್ತಿಯಾಗಿದ್ದು, ಅದರ ಹೆಚ್ಚುವರಿ ನೀರು ಕೆ.ಆರ್.ಎಸ್ ಗೆ ಹರಿದು ಬರುತ್ತಿರುವುದರಿಂದ ಒಳಹರಿವಿನ ಪ್ರಮಾಣ ಗಣನೀಯ ಹೆಚ್ಚಳ ಕಂಡಿದೆ.




