Tuesday, November 24, 2026

ಪ್ರಾಯೋಗಿಕ ಆವೃತ್ತಿ

40 ಸಾವಿರ ಕ್ಯೂಸೆಕ್‌ ದಾಟಿದ ಒಳಹರಿವು| KRS ಭರ್ತಿಗೆ 9 ಅಡಿಯಷ್ಟೇ ಬಾಕಿ

ಕೊಡಗಿನಲ್ಲಿ ಇಂದೂ ಕೂಡ ಎಡೆಬಿಡದೇ ಸುರಿದ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ, ಇದರಿಂದಾಗಿ ಕೆ.ಆರ್.ಎಸ್ ಅಣೆಕಟ್ಟೆಯಲ್ಲಿ ಒಳ ಹರಿವಿನ ಪ್ರಮಾಣ 40,490 ಕ್ಯೂಸೆಕ್ ತಲುಪಿದೆ. ಅಣೆಕಟ್ಟೆಯ ನೀರಿನ ಮಟ್ಟ ಗುರುವಾರ ರಾತ್ರಿ 8 ಗಂಟೆಯ ವೇಳೆಗೆ 114.90 ಅಡಿಗೆ ತಲುಪಿದೆ.

ಇಂದು ಬೆಳಿಗ್ಗೆ 8 ಗಂಟೆಯ ವೇಳೆ ನೀರಿನ ಮಟ್ಟವು 113.40 ಅಡಿಗೆ ಮುಟ್ಟಿ, ಒಳಹರಿವು 36,772 ಕ್ಯೂಸೆಕ್ ದಾಖಲಾಗಿತ್ತು. ಆದರೆ ರಾತ್ರಿ ವೇಳೆಗೆ ಒಳಹರಿವಿನ ಪ್ರಮಾಣ 40 ಸಾವಿರ ಕ್ಯೂಸೆಕ್ ಗಿಂತ ಹೆಚ್ಚಾಗಿದ್ದು, ಅಣೆಕಟ್ಟೆಯ ನೀರಿನ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಿದೆ. ಕೆ.ಆರ್.ಎಸ್ ಅಚ್ಚುಕಟ್ಟಿನ ನಾಲೆಗಳಿಗೆ 2,560 ನೀರನ್ನು ಹೊರಕ್ಕೆ ಹರಿಸಲಾಗುತ್ತಿದೆ.

“>

 

ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಇದಲ್ಲದೇ ಅಲ್ಲಲ್ಲಿ ಗುಡ್ಡ ಕುಸಿತ ಹಾಗೂ ತೀವ್ರ ಮಳೆಯಿಂದಾಗಿ ಮನೆಗಳಿಗೆ ಹಾನಿಯಾಗಿ ಕುಸಿದು ಬಿದ್ದಿರುವ ಘಟನೆಗಳು ನಡೆದಿವೆ.

ಕೆ.ಆರ್.ಎಸ್ ಅಣೆಕಟ್ಟೆ ನೀರಿನ ಮಟ್ಟ (ಜು.18ರ ರಾತ್ರಿ 8 ಗಂಟೆ ವೇಳೆಗೆ) 

  • ಅಣೆಕಟ್ಟೆಯ ಗರಿಷ್ಠ ಮಟ್ಟ : 124.80 ಅಡಿ
  • ಇಂದಿನ ನೀರಿನ ಮಟ್ಟ: 114.90 ಅಡಿ
  • ಗರಿಷ್ಟ ಸಾಮರ್ಥ್ಯ : 49.452 ಟಿಎಂಸಿ
  • ಪ್ರಸ್ತುತ ನೀರಿನ ಸಂಗ್ರಹ: 36.943 ಟಿಎಂಸಿ 
  • ಒಳಹರಿವು: 40,490 ಕ್ಯೂಸೆಕ್
  • ಒಳ ಹರಿವು: 2,560 ಕ್ಯೂಸೆಕ್ 

ಕಬಿನಿ ಜಲಾಶಯವು ಭರ್ತಿಯಾಗಿದ್ದು, 70 ಸಾವಿರ ಕ್ಯೂಸೆಕ್ ಗಿಂತ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಹಾರಂಗಿ ಜಲಾಶಯವು ಭರ್ತಿಯಾಗಿದ್ದು, ಅದರ ಹೆಚ್ಚುವರಿ ನೀರು ಕೆ.ಆರ್.ಎಸ್ ಗೆ ಹರಿದು ಬರುತ್ತಿರುವುದರಿಂದ ಒಳಹರಿವಿನ ಪ್ರಮಾಣ ಗಣನೀಯ ಹೆಚ್ಚಳ ಕಂಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ