Thursday, November 19, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಹಾಲು ಖರೀದಿಯಲ್ಲಿ ನೂತನ ತಂತ್ರಾಂಶ ಬಳಕೆ ಸ್ವಾಗತಾರ್ಹ: ತಮ್ಮಯ್ಯ

ಕೆಎಂಎಫ್ ನ ನಂದಿನಿ ಬ್ರಾಂಡ್ ಎತ್ತರಕ್ಕೆ ಬೆಳೆದಿದ್ದು, ನೂತನ ಪದ್ದತಿ ಕಾಮನ್ ಸಾಪ್ಟ್ ವೇರ್ ಬಳಕೆ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಮನ್ ಮುಲ್ ನ ಮಾಜಿ ನಿರ್ದೆಶಕ ಚಿಕ್ಕೊನಹಳ್ಳಿ ತಮ್ಮಯ್ಯ ಅಭಿಪ್ರಾಯಪಟ್ಟರು

ಮದ್ದೂರು ತಾಲ್ಲೂಕಿನ ಕೊಪ್ಪ ದ ಯಾಂಬರ್ಜಿಯರ್ ಮಠದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ಮತ್ತು ಹಾಲು ಉತ್ಪಾದಕರುಗಳಿಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಏರ್ಪಡಿಸಿದ್ದ ಕಾಮನ್ ಸಾಪ್ಟ್ ವೇರ್ ಉಪಯುಕ್ತತೆ ಕುರಿತ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಎಂಎಫ್ ಮತ್ತದರ ಘಟಕಗಳು ಪ್ರಾರಂಭದ ದಿನದಿಂದ ಇಲ್ಲಿಯವರೆಗೂ ಹಾಲು ಸಂಗ್ರಹದಲ್ಲಿ ಹಾಲು ಉತ್ಪಾದನೆಯಲ್ಲಿ‌ ವೈಜ್ನಾನಿಕ ಅಂಶಗಳನ್ನು ಅನುಸರಿಸಿಕೊಂಡು ಬಂದಿದ್ದು, ಅದರ ಮುಂದುವರಿದ ಭಾಗವೇ ನೂತನ ತಂತ್ರಾಂಶ ಕಾಮನ್ ಸಾಪ್ಟ್ ವೇರ್ ಬಳಕೆ ಮತ್ತು ಇಂಟರ್ ಪೇಸ್ ಅಳವಡಿಕೆ,ಆನ್ ಲೈನ್ ವ್ಯವಸ್ಥೆಯಡಿ ಹಾಲು ಸಂಗ್ರಹ, ಆಡಳಿತದಲ್ಲಿ ಪಾರದರ್ಶಕತೆ ತರುವುದಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನ.ಲಿ.ಕೃಷ್ಣ ಮಾತನಾಡಿ, ಖಾಸಗಿ ಕಂಪನಿಗಳ ಹೊಡೆತದಿಂದ ಹಾಲು ಉತ್ಪಾದಕರನ್ನು ರಕ್ಷಿಸಲು, ಪ್ರೊತ್ಸಾಹ ಧನ, ಸುಸ್ಥಿರತೆ ಸಾಧಿಸುವ ನಿಟ್ಟಿನಲ್ಲಿ‌ ನೂತನ ತಂತ್ರಜ್ಞಾನ ಬಳಕೆ ಮಾಡಿ ಗುಣಮಟ್ಟದ ಹಾಲು ಉತ್ಪಾದನೆಗೆ ಒತ್ತು ನೀಡುವುದು ಅನೀವಾರ್ಯ ಎಂದರು.

ಎನ್ ಡಿ ಡಿ ಬಿ ಅಭಿವೃದ್ಧಿ ಪಡಿಸಿದ ಆಟೊಮ್ಯಾಟಿಕ್ ಮಿಲ್ಕ್ ಕಲೆಕ್ಷನ್ ಸಿಸ್ಟಮ್ ಇದರ ನಿರ್ವಹಣೆಗೆ ಬಂದಿರುವ ಕಾಮನ್ ಸಾಪ್ಟ್ವೇರ್ ಹಾಲು ಉತ್ಪಾದಕರ ಸ್ನೇಹಿಯಾಗಿದ್ದು, ಕಾಮನ್ ಸಾಪ್ಟ್ ವೇರ್ ಬಳಕೆಗೆ ಹಾಲು ಉತ್ಪಾದಕರ ಸಂಘಗಳು ನೆರವಾಗಬೇಕು ಎಂದು ಮನವಿ ಮಾಡಿದರು.

ಡಾ.ನೂತನ್ ಗೌಡ ಮಾತನಾಡಿ, ಹಾಲಿನ ಜಿಡ್ಡಿನಾಂಶ ಹಾಗೂ ಘನೇತರ ಜಿಡ್ಡಿನಾಂಶದ ಗುಣಮಟ್ಟ ಹೆಚ್ಚಿಸುವಲ್ಲಿ ರಾಸುಗಳ ವೈಜ್ಞಾನಿಕ ಪಾಲನೆ ಅಗತ್ಯ. ಕಾಮನ್ ಸಾಪ್ಟ ವೇರ್ ಬಳಕೆಯಿಂದ ಉಂಟಾಗಬಹುದಾದ ತಾಂತ್ರಿಕ ಅಡಚಣೆಗಳನ್ನು ಪರಿಹರಿಸಿ ಮಾರ್ಗದರ್ಶನ ಮಾಡಲು ಮನ್ ಮುಲ್ ನ ಪಶು ವೈದ್ಯಕೀಯ ವಿಭಾಗ ನಿಮ್ಮೊಟ್ಟಿಗೆ ಇರಲಿದೆ ಎಂದರು.

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ ಕ್ರಾಂತಿಸಿಂಹ ಮಾತನಾಡಿ, ಹಾಲು ಉತ್ಪಾದಕರು ನೂತನ ತಂತ್ರಜ್ಞಾನ ಬಳಕೆಗೆ ಸದಾ ಮುಂದಾಗುವ ಮೂಲಕ ಅಭಿವೃದ್ಧಿ ಪರತೆ ಬೆಳೆಸಿಕ್ಕೊಳ್ಳಬೇಕು. ಈಗಾಗಲೇ ಕಾಮನ್ ಸಾಪ್ಟ್ ವೇರ್ ಬಳಕೆ ಮಾಡುತಿರುವ ಕೊಪ್ಪ ಹೋಬಳಿಯ ಡೇರಿಗಳ ಯಶೋಗಾಥೆಯನ್ನು ವೀಕ್ಷಿಸಿ ತಾವು ನೂತನ ತಂತ್ರಾಂಶ ಬಳಕೆಗೆ ಮುಂದಾಗಬೇಕೆಂದು ಉತ್ಪಾದಕರಿಗೆ ಸಲಹೆ ನೀಡಿದರು

ವಿಸ್ತರಣಾಧಿಕಾರಿಗಳಾದ ರತ್ನಮ್ಮ, ದಿಲ್ವರ್ ಸಾಬ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ