Saturday, November 21, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ಜೆಡಿಎಸ್ ಮುಖಂಡ ಅಪ್ಪುಗೌಡ ಕೊಲೆಗೆ ಸ್ನೇಹಿತನಿಂದಲೇ ಸುಪಾರಿ

ಮದ್ದೂರಿನ ಜೆಡಿಎಸ್ ಮುಖಂಡ ಅಪ್ಪು ಗೌಡನ ಕೊಲೆಗೆ ಆತನ ಸ್ನೇಹಿತ ಹಾಗೂ ವ್ಯವಹಾರಿಕ ಪಾಲುದಾರ ಮಧು ಎಂಬಾತನೇ ಬೆಂಗಳೂರಿನ ಕುಖ್ಯಾತ ರೌಡಿಯೊಬ್ಬನಿಗೆ ಸುಪಾರಿ ನೀಡಿದ್ದ ವಿಷಯ ಮದ್ದೂರು ಪೋಲಿಸರ ತನಿಖೆಯಿಂದ ಬಹಿರಂಗವಾಗಿದೆ‌.

ಅಪ್ಪುಗೌಡ

ಅಪ್ಪು ಪಿ.ಗೌಡ ಹಾಗೂ ಮಧು ಇಬ್ಬರೂ ಸ್ನೇಹಿತರಾಗಿದ್ದು,ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.ಇವರಿಬ್ಬರ ನಡುವೆ ಮನಸ್ತಾಪವಾಗಿತ್ತು. ಇತ್ತೀಚೆಗಷ್ಟೆ ಮಧು ವಿರುದ್ದ ಅಪ್ಪು ಗೌಡ ಚೆಕ್ ಬೌನ್ಸ್ ಕೇಸ್ ಹಾಕಿದ್ದ. ಈ ಎಲ್ಲ ಬೆಳವಣಿಗಯಿಂದ ಅಪ್ಪುಗೌಡನ‌ ಕೊಲೆಗೆ ಮಧು ನಿರ್ಧಾರ ಮಾಡಿದ್ದ.

ಅದರಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರೌಡಿ ಜಗದೀಶ್ ಗೆ ಅಪ್ಪುಗೌಡನ ಮುಗಿಸಲು ಸುಪಾರಿ ಕೊಟ್ಟಿದ್ದ. ಜೈಲಿನಲ್ಲೇ ಕುಳಿತು ಅಪ್ಪುಗೌಡನ ಕೊಲೆಗೆ ಸ್ಕೆಚ್ ಹಾಕಿದ್ದ ಜಗದೀಶ್. ಅದರಂತೆ ಇಂದು ಜಗದೀಶನ ಆರು ಮಂದಿ ಸಹಚರರು ಅಪ್ಪುಗೌಡ ಮೇಲೆ ಸ್ಕೆಚ್ ಹಾಕಿ ಮುಗಿಸಲು ಸಂಚು ಹೂಡಿದ್ದರು.

ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅಪ್ಪುಗೌಡ ಬರುವ ಮಾಹಿತಿ ತಿಳಿದ ರೌಡಿ ಜಗದೀಶನ ಸಹಚರರು, ಲಾಂಗು ಮಚ್ಚಿನಿಂದ ಅಪ್ಪುಗೌಡನ ಮೇಲೆ ಅಟ್ಯಾಕ್ ಮಾಡಿದರು. ಆದರೆ ಅಪ್ಪುಗೌಡ ರೌಡಿ ಜಗದೀಶನ ಸಹಚರರಿಂದ ಮಾರಣಾಂತಿಕವಾಗಿ ಗಾಯಗೊಂಡರೂ ಕೂಡ ಹಿಂದಿರುಗಿ ಬಿದ್ದಿದ್ದ. ಜನರು ಕೂಡ ಕಿರುಚಾಡಿದ್ದರಿಂದ ಹೆದರಿದ ರೌಡಿ ಜಗದೀಶನ ಸಹಚರರು ಲಾಂಗುಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.

ಜಾಹೀರಾತು

ಪೋಲಿಸರು ಕೂಡಲೇ ಅಲರ್ಟ್ ಆಗಿ ನಾಕಾಬಂಧಿ ಮಾಡಿ, ಮಳವಳ್ಳಿಯ ಹಲಗೂರು ಬಳಿ ಆರು ಮಂದಿ ಬೆಂಗಳೂರಿನ ರೌಡಿಗಳ ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ. ಅಲ್ಲದೆ ಅಪ್ಪುಗೌಡನ ಕೊಲೆಗೆ ಸುಪಾರಿ ನೀಡಿದ್ದ ಆತನ ಸ್ನೇಹಿತ ಮಧು ಸೇರಿದಂತೆ ಏಳು ಮಂದಿ ದುಷ್ಕರ್ಮಿಗಳನ್ನು ಮದ್ದೂರು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ