ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜಿನ ಆವರಣದಲ್ಲಿ ಆಗಸ್ಟ್ 3ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಡಾ.ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ಬೆಂಗಳೂರು ಇವರ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ವೇದಿಕೆಯ ರಾಜ್ಯ ಕಾರ್ಯದರ್ಶಿ ರಮೇಶ್ ಚಂದ್ರ ತಿಳಿಸಿದರು.
ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯೋಗ ಮೇಳದಲ್ಲಿ 50 ಕ್ಕೂ ಕಂಪನಿಗಳು ಭಾಗವಹಿಸಲಿದ್ದು 5,000 ಮಂದಿಗೆ ಉದ್ಯೋಗಾವಕಾಶಗಳಿವೆ, ಈ ಅವಕಾಶವನ್ನು ಉದ್ಯೋಗಾಕಾಂಕ್ಷಿಗಳು ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.
ಅಂದು ಬೆಳಿಗ್ಗೆ 9 ಗಂಟೆಗೆ ಮೇಳ ನಡೆಯಲಿದ್ದು ಎಸ್ ಎಸ್ ಎಲ್ ಸಿ, ಪಿ ಯು ಸಿ ,ಐ ಟಿ ಐ, ಡಿಪ್ಲೋಮಾ ,ಸ್ನಾತಕಪೂರ್ವ ಪದವಿ ,ಸ್ನಾತಕೋತ್ತರ ಪದವಿ, ಪದವಿ ,ಇಂಜಿನಿಯರಿಂಗ್ ಪದವಿ ಸೇರಿದಂತೆ ಇನ್ನಿತರ ಪದವಿದರರು ಮೇಳದಲ್ಲಿ ನೇರವಾಗಿ ಭಾಗವಹಿಸಬಹುದು, ಇಂಗ್ಲೀಷ್ ಭಾಷೆ ಬರುವುದಿಲ್ಲ ಎಂಬ ಕೀಳರಿಮೆ ಬೇಡ, ಆತ್ಮವಿಶ್ವಾಸದಿಂದ ಭಾಗವಹಿಸಿದರೆ, ಕನ್ನಡ ಬಲ್ಲವರು ಉದ್ಯೋಗ ಪಡೆಯಬಹುದಾಗಿದೆ, ಅದ್ದರಿಂದ ಎಲ್ಲರೂ ಭಾಗವಹಿಸಬೇಕೆಂದರು.
ಮೇಳ ನಡೆಯುವ ಸ್ಥಳದಲ್ಲಿಯೇ ಉದ್ಯೋಗ ಆಕಾಂಕ್ಷಿತರ ಹೆಸರನ್ನು ನೋಂದಣಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ ಅವರು, ಮ್ಯಾನು ಫ್ಯಾಕ್ಚರಿಂಗ್, ಹೆಲ್ತ್ ಕೇರ್, ಮಷೀನ್ ಆಪರೇಟರ್, ರೆಸ್ಟೋರೆಂಟ್ ,ಬ್ಯಾಂಕಿಂಗ್, ಫೈನಾನ್ಸ್ ,ಇನ್ಫಾರ್ಮೇಷನ್ ಟೆಕ್ನಾಲಜಿ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸಿಗಲಿದೆ. ಆದ ಕಾರಣ ನಿರುದ್ಯೋಗಿ ಪದವೀಧರರು ಈ ಸಮ್ಮೇಳನದ ಸದುಪಯೋಗ ಪಡೆದುಕೊಳ್ಳಬೇಕೆಂದರು. ಹೆಚ್ಚಿನ ಮಾಹಿತಿಗಾಗಿ ಮೊ.9343983674, 9740130364 ಹಾಗೂ 9611553936 ಸಂಪರ್ಕಿಬಹುದೆಂದರು.
ಗೋಷ್ಠಿಯಲ್ಲಿ ವೇದಿಕೆಯ ಪುಟ್ಟಬಸವಯ್ಯ , ಪ್ರಕಾಶ್, ರೋಷನ್, ಸೋಮಶೇಖರ್ ಉಪಸ್ಥಿತರಿದ್ದರು.




