Saturday, May 18, 2024

ಪ್ರಾಯೋಗಿಕ ಆವೃತ್ತಿ

ಪ್ರತಿಭಾಂಜಲಿ ಡೇವಿಡ್ ರವರಿಗೆ ಕನ್ನಡ ನಿತ್ಯೋತ್ಸವ ಪ್ರಶಸ್ತಿ

ಸುಗಮಸಂಗೀತ ಕ್ಷೇತ್ರದಲ್ಲಿ 25 ವರ್ಷಗಳಿಂದ ತನ್ನ ವಿನೂತನ ರೀತಿಯ ಕಾರ್ಯಕ್ರಮಗಳಿಂದ ಮನೆಮಾತಾಗಿರುವ ಬೆಂಗಳೂರಿನ ಆದರ್ಶ ಸುಗಮಸಂಗೀತ ಅಕಾಡೆಮಿ ವತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ಕೂಡಾ ಕನ್ನಡ ನಿತ್ಯೋತ್ಸವ ಪ್ರಶಸ್ತಿ ಹಾಗೂ ಡಾ.ಸಿ ಅಶ್ವಥ್ ಹಾಗೂ ರಾಷ್ಟ್ರಕವಿ ಕುವೆಂಪುರವರ ಜನ್ಮ‌ ದಿನಾಚರಣೆಯನ್ನು ಬೆಂಗಳೂರಿನ, ಗವಿಪುರಂ ಬಳಿ ಇರುವ ಉದಯಭಾನು ಕಲಾಸಂಘದಲ್ಲಿ  ಅತ್ಯಂತ ವಿಜೃಂಭಣೆಯಿಂದ ನಡೆಸಲಾಯಿತು.

ಕರ್ನಾಟಕ ಸುಗಮಸಂಗೀತ ಪರಿಷತ್ತಿನ ಅಧ್ಯಕ್ಷ ಶ್ರೀ ವೈಕೆ ಮುದ್ದುಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಕಾಡೆಮಿಯ ಕೆಲಸ ಕಾರ್ಯ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕುವೆಂಪು ಅವರ ಗೀತೆಯಯೊಂದನ್ನು ಹಾಡಿ ರಂಜಿಸಿದರು ಇದಕ್ಕಿಂತ ಮೊದಲು ಮಂಡ್ಯದ ಪ್ರತಿಷ್ಠಿತ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯ ಅಧ್ಯಕ್ಷರಾದ ಹಾಗೂ ಗಾಯಕ ಸಂಗೀತ ನಿರ್ದೇಶಕರಾದ ಶ್ರೀಯುತ ಪ್ರತಿಭಾಂಜಲಿ ದೇವಿಡ್ ರನ್ನು ಸುಮಾರು ೨೨ ವರ್ಷಗಳಿಂದ ನಿರಂತರವಾಗಿ ಸುಗಮ ಸಂಗೀತ ಕಾರ್ಯಕ್ರಮಗಳನ್ನ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ನೀಡಿ ರಾಜ್ಯದ್ಯಂತ ಹೆಸರುವಾಸಿಯಾಗಿದ್ದಾರೆ.

ಇವರರು ಜನಮಾನ್ಯತೆ ಗಳಿಸಿ ಸಾಧನೆ ಮಾಡಿದ್ದಾರೆ. ಇವರಿಗೆ ಇನ್ನು ಹೆಚ್ಚು ಕಾರ್ಯಕ್ರಮಗಳನ್ನ ನೀಡಿ ಸುಗಮ ಸಂಗೀತ ಕ್ಷೇತ್ರದ ಬೆಳವಣಿಗೆ ಸಹಕಾರಿಯಾಗಲೆಂದು ಹೇಳಿ ಕನ್ನಡ ನಿತ್ಯೋತ್ಸವ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತಾನಾಡಿದ ಪ್ರತಿಭಾಂಜಲಿ ಡೇವಿಡ್ ರವರು ಆದರ್ಶ ಸುಗಮಸಂಗೀತ ಅಕಾಡೆಮಿಯ ಕಿಕ್ಕೇರಿ ಕೃಷ್ಣಮೂರ್ತಿರವರ ಪ್ರೇರಣೆಯಿಂದಲೇ ಸುಗಮಸಂಗೀತದಲ್ಲಿ ಹಿಂದುಳಿದ ಮಂಡ್ಯನಗರದಲ್ಲಿಯೂ ಕೂಡ ಸಂಗೀತ ಶಾಲೆಯನ್ನ ತೆರೆಯಲು ಸಾಧ್ಯವಾಯಿತು, ಪ್ರತಿಂಭಾಂಜಲಿ 22 ವರ್ಷಗಳ ಕಾಲ ನಿರಂತರ ಸಂಗೀತ ಸೇವೆ ಮಾಡಲು, ಸಿ ಅಶ್ವತ್ ರವರ ಮನುಜಮತ ವಿಶ್ವಪಥ‌ ಎನ್ನುವ ಗಾಯನ ಕಾರ್ಯಕ್ರಮ, ಕರ್ನಾಟಕ ಸುಗಮಸಂಗೀತ ಪರಿಷತ್ತಿನ ಅಧ್ಯಕ್ಷರಾದ ಡಾ ವೈ.ಕೆ ಮುದ್ದುಕೃಷ್ಣ, ಪ್ರತಿಭಾಂಜಲಿಯ ಮಾಜಿ ಗೌರವಾಧ್ಯಕ್ಷರಾದ ದಿವಂಗತ ಕೆ,ಎಸ್, ಸಚ್ಚಿದಾನಂದ ಪ್ರಸ್ತುತ ಗೌರವಾಧ್ಯಕ್ಷರಾದ ಡಾ ಟಿ,ಎಸ್ ಸತ್ರನಾರಾಯಣರಾವ್ ರವರ ಮಾರ್ಗದರ್ಶನದಲ್ಲಿ ಹಾಗೂ ನಮ್ಮ ಸಂಸ್ಥೆಯ ನೆಚ್ಚಿನ ಸದಸ್ಯರು ಹಾಗೂ ಪ್ರತಿಭಾಂಜಲಿಯ ವಿದ್ಯಾರ್ಥಿಗಳು ಮತ್ತು ಪೋಷಕರ ಸಹಕಾರದಿಂದ ಪ್ರತಿಭಾಂಜಲಿ ವಿನೂತನ ಕಾರ್ಯಕ್ರಮಗಳ ಮೂಲಕ ಮನೆಮಾತಾಗಲು ಕಾರಣವಾಯಿತು.

ಮನೆ ಮನೆಯಲ್ಲಿ ಸುಗಮ ಸಂಗೀತ, ಶಾಲೆಗೊಂದು ಸುಗಮಸಂಗೀತ, ಮನೆ ಮನೆಯಲ್ಲಿ ವಚನಧಾರೆ, ಕೂಡಲ ಸಂಗಮ, ಪ್ರಥಮ ರಾಜ್ಯ ಮಟ್ಟದ ಸುಗಮಸಂಗೀತ ಸಮ್ಮೇಳನ ಹಾಗೂ ಮಂಡ್ಯ ಜಿಲ್ಲಾ ಸುಗಮಸಂಗೀತ ಸಮ್ಮೇಳನ, ಅಷ್ಟಕವಿ ಗೀತೋತ್ಸವ, ಸಂತ ಶಿಶುನಾಳ ಶರೀಫ, ಗೀತಧಾರೆ, ಸಂಧ್ಯರಾಗ, ಆಡೋಣ ಬನ್ನಿ ಮಕ್ಕಳ ಬೇಸಿಗೆ ಶಿಬಿರ, ಸುಗಮಸಂಗೀತ ಕಾರ್ಯಗಾರ, ಕೀ ಬೋರ್ಡ್, ಗೀಟಾರ್, ಶಾಸ್ತ್ರೀಯ ಸಂಗೀತ, ಸುಗಮಸಂಗೀತ ತರಗತಿಗಳನ್ನು ಆಕಾಡೆಮಿ ಮೂಲಕ ನಡೆಸುತ್ತ ಬಂದಿದ್ದು ಎಲ್ಲಾ ಸಹಕಾರ ಹಾಗೂ ಆಶೀರ್ವಾದದಿಂದ ಎಂದು ನೆನೆದರು.

ಇದೇ ಸಂದರ್ಭದಲ್ಲಿ ಸಂಜೆ ಸಮಯ ಪತ್ರಿಕೆ ಸಂಪಾದಕರಾದ ಶ್ರೀ ಅನಿಲ್ ಕುಮಾರ್ ಅವರು ಮಾತನಾಡಿ ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳನ್ನೂ ನಾನು ಹತ್ತಿರದಿಂದ ನೋಡಿದ್ದೇನೆ, ರಾಜ್ಯಾದ್ಯಂತ ಅಕಾಡೆಮಿ ತರಬೇತಿ ನೀಡಿರುವುದು ಶ್ಲಾಘನೀಯ ಎಂದರು.ಗಾಯಕ ಅಪ್ಪಗೆರೆ ತಿಮ್ಮರಾಜು,ನಗರ ಶ್ರೀನಿವಾಸ ಉಡುಪ ಅವರೂ ಕುವೆಂಪು ಗೀತೆಗಳನ್ನು ಹಾಡಿದರು,ಅಕಾಡೆಮಿಯ ಕಿರಿಯ,ಹಿರಿಯ ವಿದ್ಯಾರ್ಥಿಗಳು ಹಾಗೂ ಪೋಷಕರ ತಂಡವೂ ವಿಶೇಷ ಗಾಯನಮಾಡಿ ಜನಮನಗೆದ್ದರು,ಪಿ ಶಿವಶಂಕರ್, ಪಿ ಎನ್ ಜಯರಾಂ, ಅಕಾಡೆಮಿ ಅಧ್ಯಕ್ಷ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರುಗಳೂ ಗಾಯನದಲ್ಲಿ ಸಹಕರಿಸಿದರು,ಅಭಿಷೇಕ್, ರಾಮಪ್ರಸಾದ್,ಶಿವಶಂಕರ್, ಕಾರ್ತಿಕ್, ಜಯಕುಮಾರ್ ಅವರ ವಾದ್ಯಸಂಗೀತ ವೈಭವ ಅದ್ಬುತ ವಾಗಿ ಮೂಡಿಬಂತು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!