Saturday, November 21, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಬ್ಯಾಂಕುಗಳಿಗೆ ನಿಗದಿಪಡಿಸಿದ್ದ ಗುರಿ ಸಾಧನೆ: ಶೇಖ್ ತನ್ವೀರ್ ಆಸಿಫ್

ಮಂಡ್ಯ ಜಿಲ್ಲೆಯ ಬ್ಯಾಂಕುಗಳ ಆರ್ಥಿಕ ಚಟವಟಿಕೆಯಲ್ಲಿ ಮೊದಲನೇ ತ್ರೈಮಾಸಿಕದ ಅವಧಿಯಲ್ಲಿ ಗುರಿ 2380.05 ಕೋಟಿ ರೂ ಇದ್ದು, ಇದರಲ್ಲಿ ಪ್ರತಿಶತ ಶೇಕಡ 117 ರಷ್ಟು ಸಾಧನೆ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾ ಪಂಚಾಯತ್ತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.

ಮಂಡ್ಯ ನಗರದ ಕೆ.ಎಚ್.ಬಿ ಬಡಾವಣೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಲೀಡ್ ಬ್ಯಾಂಕ್ ಕಾರ್ಯಾಲಯದ ವತಿಯಿಂದ ಆರ್‌ಸಿಟಿ ಸಭಾಂಗಣದಲ್ಲಿ ನಡೆದ 2024-25 ನೇ ಸಾಲಿನ ಮೊದಲನೆಯ ತ್ರೈಮಾಸಿಕ ಅಂತ್ಯ ಜೂನ್ 2024ರ ಪ್ರಗತಿ ಪರಿಶೀಲನಾ ಸಮಿತಿ ಸಭೆ ಹಾಗೂ ಸಲಹಾ ಸಮಿತಿಯ ಸಭೆಯ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆದ್ಯತಾ ರಂಗಕ್ಕೆ 2790.51 ಕೋಟಿ ರೂ ಸಾಲ ನೀಡಿ ಶೇಕಡ 117 ರಷ್ಟು ಗುರಿಯನ್ನು ಸಾಧಿಸಲಾಗಿದೆ. ಕೃಷಿ ರಂಗಕ್ಕೆ 1987.89 ಕೋಟಿ ರೂ ಸಾಲ ನೀಡಿ, ಶೇಕಡ 110ರಷ್ಟು ಗುರಿ ಸಾಧಿಸಿದ್ದು, ಕೈಗಾರಿಕಾ ರಂಗಕ್ಕೆ 571.21 ಕೋಟಿ ರೂ ಸಾಲ ನೀಡಿ ಶೇಕಡ 206ರಷ್ಟು ಮತ್ತು ಇತರೆ ಆದ್ಯತಾ ರಂಗಕ್ಕೆ 231.41 ಕೋಟಿ ರೂ ಸಾಲ ನೀಡಿ ಶೇಕಡ 78 ರಷ್ಟು ಗುರಿ ಸಾಧಿಸಲಾಗಿದೆ ಎಂದು ವಿವರಿಸಿದರು.

ಮಂಡ್ಯ ಜಿಲ್ಲೆಯಲ್ಲಿ ದುರ್ಬಲ ವರ್ಗದವರಿಗೆ ಇಲ್ಲಿಯವರೆಗೆ ಒಟ್ಟು ರೂ 8523.07 ಕೋಟಿ ಸಾಲ ವಿತರಣೆ ಆಗಿರುತ್ತದೆ. ಅಲ್ಪಸಂಖ್ಯಾತರಿಗೆ 364.06 ಕೋಟಿ ಮತ್ತು ಮಹಿಳಾ ಖಾತೆದಾರರಿಗೆ 4850.74 ಕೋಟಿ ರೂ ವಿತರಣೆಯಾಗಿರುತ್ತದೆ ಎಂದರು.

ಸರ್ಕಾರದ ಇತರೆ ಬಡತನ ನಿರ್ಮೂಲನಾ ಯೋಜನೆಗಳಾದ ಉದ್ಯೋಗಿನಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಗಳಾದ ಸ್ವ-ಉದ್ಯೋಗ ಯೋಜನೆ ಮತ್ತು ಇ.ಡಿ.ಪಿ ಯೋಜನೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಯೋಜನೆಗಳು, ದೇವರಾಜ ಅರಸು ಅಭಿವೃದ್ಧಿ ನಿಗಮದ ಯೋಜನೆಗಳು ಮತ್ತು ಪಶು ಸಂಗೋಪನೆ ಇಲಾಖೆಗಳ ವಿವಿಧ ಯೋಜನೆಗಳ ಅಡಿಯಲ್ಲಿನ ಅರ್ಜಿಗಳನ್ನು ಬ್ಯಾಂಕಿಗೆ ಕಳುಹಿಸಲಾಗಿದ್ದು ಸಾಲ ಮಂಜೂರಾತಿಗೆ ಕ್ರಮ ವಹಿಸಲಾಗುತ್ತಿದೆ ಎಂದರು.

ಪಿ.ಎಂ.ಇ.ಜಿ.ಪಿ ಹಾಗೂ ಡೇ ನಲ್ಮ್ ಕೆಲವು ಅರ್ಜಿಗಳು ಈಗಾಗಲೇ ಬ್ಯಾಂಕುಗಳಿಗೆ ಕಳುಹಿಸಿದ್ದು ಸಾಲ ವಿತರಣೆಗೆ ಕ್ರಮವಹಿಸಲಾಗಿದೆ. 2023-24 ನೇ ಸಾಲಿನಲ್ಲಿ ಬಾಕಿ ಉಳಿದಿರುವ ಅರ್ಜಿಗಳನ್ನು ಕೂಡಲೇ ಸಾಲ ಮಂಜೂರು ಮಾಡಿ ಹಣ ಬಿಡುಗಡೆ ಮಾಡಲು ಎಲ್ಲಾ ಬ್ಯಾಂಕ್ ಮುಖ್ಯಸ್ಥರು ಕ್ರಮ ವಹಿಸಲು ತಿಳಿಸಲಾಗಿದೆ ಎಂದರು

ಪ್ರಧಾನ ಮಂತ್ರಿ ಯೋಜನೆಯಲ್ಲಿಯೂ ಸಹ ಇನ್ನು ಹೆಚ್ಚಿನ ಫಲಾನುಭವಿಗಳನ್ನು ಗುರುತಿಸಿ ಸಾಲ ಮಂಜೂರಾತಿ ಮಾಡಬೇಕೆಂದು ಕೋರಿರುವುದರ ಜೊತೆಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಮಹಿಳೆಯರಿಗಾಗಿ ಜಾರಿ ಮಾಡಲಾಗಿರುವ ಸ್ಟ್ಯಾಂಡ್ ಆಫ್ ಇಂಡಿಯಾ ಯೋಜನೆಯಲ್ಲಿ ಪ್ರಗತಿ ಸಮಾಧಾನವಾಗಿರದೇ ಅರ್ಹ ಫಲಾನುಭವಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರಿವು ಮೂಡಿಸುವುದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಕೊನೆಯದಾಗಿ 2024-25 ನೇ ಸಾಲಿನ ಮಂಡ್ಯ ಜಿಲ್ಲಾ ಸಾಲ ಯೋಜನೆ ಮತ್ತು ಸರ್ಕಾರದ ಇತರ ಬಡತನ ನಿರ್ಮೂಲನಾ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಮಂಡ್ಯದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಬ್ಯಾಂಕುಗಳು ಹಾಗೂ ಸ್ವಯಂ ಸೇವಾ ಸಂಘಗಳ ಸಹಕಾರವನ್ನು ಕೋರಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಾರ್ಗದರ್ಶಿ ಲೀಡ್ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ಅರುಣ್ ಕುಮಾರ್ ರವರು 2024-25 ನೇ ಸಾಲಿನ ಆರ್ಥಿಕ ಪ್ರಗತಿಯನ್ನು ಮಂಡಿಸಿದರು.

ಈ ವೇಳೆ ವೇದಿಕೆಯಲ್ಲಿ ಬೆಂಗಳೂರಿನ ಆರ್.ಬಿ.ಐ ನ ಶಾಖಾ ಕಚೇರಿಯ ಜಿಲ್ಲಾ ವ್ಯವಸ್ಥಾಪಕರಾದ ವಿಜಯಶ್ರೀ ಹಾಗೂ ಮಂಡ್ಯ ಜಿಲ್ಲಾ ನಬಾರ್ಡ್ ನ ಅಭಿವೃದ್ಧಿ ಅಧಿಕಾರಿ ಹರ್ಷಿತಾ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ