ಮೈಷುಗರ್ ನೂತನ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ 5 ತಿಂಗಳ ಅವಧಿಯಲ್ಲಿ ಕಾರ್ಖಾನೆಯ 270.62 ಕೋಟಿ ರೂ.ಗಳ ಸಾಲದ ಪೈಕಿ, 181.84 ಕೋಟಿ ರೂ.ಗಳ ಸಾಲವನ್ನು ತೀರುವಳಿ ಮಾಡಿದೆ. ಉಳಿಕೆ 88.78 ಕೋಟಿ ರೂ.ಗಳ ಸಾಲ ತೀರುವಳಿಗೆ ಪ್ರಯತ್ನ ನಡೆಯುತ್ತಿದ್ದು, ಪ್ರಸ್ತುತ ಕಾರ್ಖಾನೆಯು ₹27.5 ಕೋಟಿ ಆರ್ಥಿಕ ಪ್ರಗತಿ ಸಾಧಿಸಿದ್ದು, ಕಂಪನಿಯು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಮಾಹಿತಿ ನೀಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಸಂಬಂಧ ಹಲವು ರೀತಿಯ ಉಹಾ-ಪೋಹಗಳು ಹರಿದಾಡುತ್ತಿರುವುದು ಕಂಪನಿಯ ಗಮನಕ್ಕೆ ಬಂದಿರುತ್ತದೆ. ಆದರೆ ವಾಸ್ತವವಾಗಿ ಆ.2ರಿಂದ ಕಾರ್ಖಾನೆಯು ಕಬ್ಬು ನುರಿಸುವ ಕೆಲಸ ಆರಂಭಿಸಿದ್ದು, ಇದುವರೆಗೆ 30.000 ಮೆ.ಟನ್ ಕಬ್ಬನ್ನು ನುರಿಸಲಾಗಿದೆ ಎಂದರು.
111 ಕೋಟಿ ರೂ. ಗಳ ನಷ್ಟ ತಪ್ಪಿದೆ
ಆದಾಯ ತೆರಿಗೆ ಇಲಾಖೆ (ಟಿ.ಡಿ.ಎಸ್), ಹೆಚ್.ಎಂ.ಟಿ.ಭವನ, ಬೆಂಗಳೂರು ಇವರು ಮೈಷುಗರ್ ಕಂಪನಿಗೆ ದಿನಾಂಕ : 31-08-2023ರಂದು ಕಾರಣ ಕೇಳಿಗೆ ನೋಟೀಸ್ ನೀಡಿ ಅದರಲ್ಲಿ ಆಸಲು, ಬಡ್ಡಿ, ದಂಡದ ಒಟ್ಟು ಮೊತ್ತ ರೂ.111,50,99,360/-ಗಳನ್ನು ಪಾವತಿಸಲು ಸೂಚಿಸಿದ್ದರು. ನಂತರ ಸವೋಚ್ಚ ನ್ಯಾಯಾಲಯವು ದಿನಾಂಕ : 08-07-2024ರಂದು ತೀರ್ಪು ನೀಡಿದ್ದು, ಈ ತೀರ್ಪು ಕಂಪನಿಯ ಪರವಾಗಿ ಬಂದಿದ್ದು ಕಂಪನಿಯ ಹಣ ಪಾವತಿಸುವ ಬಗ್ಗೆ ನೀಡಿದ್ದ ಆದೇಶ ನೋಟೀಸ್ ಮತ್ತು ಪತ್ರಗಳನ್ನು ವಜಾಗೊಳಿಸಿ ಆದೇಶ ನೀಡಿದೆ. ಇದರಿಂದ ಮೈಷುಗರ್ ಗೆ 111 ಕೋಟಿ ರೂ. ಗಳ ನಷ್ಟ ತಪ್ಪಿದೆ ಎಂದು ಗಂಗಾಧರ್ ತಿಳಿಸಿದರು.
11,019 ಕ್ವಿಂಟಾಲ್ ಸಕ್ಕರೆ ಉತ್ಪಾದನೆ
ದಿನಾಂಕ:22.08.2024 ರ ಅಂತ್ಯಕ್ಕೆ ಕಾರ್ಖಾನೆಯು 11,019 ಕ್ವಿಂಟಾಲ್ ಸಕ್ಕರೆ, 1,060 ಮೆ.ಟನ್ ಕಾಕಂಬಿಯನ್ನು ಉತ್ಪಾದಿಸಿದೆ. ಸಹ-ವಿದ್ಯುತ್ ಘಟಕದಿಂದ 22.27.000 ಯೂನಿಟ್ಸ್ ವಿದ್ಯುತ್ ಉತ್ಪಾದಿಸಿ 12,27,400 ಯೂನಿಟ್ಸ್ ವಿದ್ಯುತನ್ನು ಕಾರ್ಖಾನೆಗೆ ಬಳಕೆ ಮಾಡಿ, 9,99,600 ಯೂನಿಟ್ಸ್ ವಿದ್ಯುತ್ನ್ನು ಚೆಸ್ಕಾಂಗೆ ರಫ್ತು ಮಾಡಲಾಗಿದೆ. ಇಷ್ಟು ಪ್ರಮಾಣ ವಿದ್ಯುತ್ತನ್ನು ರಫ್ತು ಮಾಡಿರುವುದು ಕಾರ್ಖಾನೆಯ ಇತಿಹಾಸದಲ್ಲಿ ಪ್ರಥಮವಾಗಿದೆ ಎಂದು ವಿವರಿಸಿದರು.
ಕಿಡಿಗೇಡಿಗಳಿಂದ ಅಪಪ್ರಚಾರ
ಕೆಲವು ಕಿಡಿಗೇಡಿಗಳು ಖಾಸಗಿ ಸಕ್ಕರೆ ಕಾರ್ಖಾನೆಯ ಮಾಲೀಕರ ಜೊತೆ ಶಾಮೀಲಾಗಿ ಮೈಸೂರು ಸಕ್ಕರೆ ಕಾರ್ಖಾನೆಯ ಮೇಲೆ ತಪ್ಪು ಮಾಹಿತಿ ನೀಡಿರುವುದನ್ನು ಖಂಡಿಸುತ್ತೇವೆ. ಮೈಸೂರು ಸಕ್ಕರೆ ಕಾರ್ಖಾನೆಯು ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆಯಾಗಿದ್ದು, 2024-25 ನೇ ಸಾಲಿನಲ್ಲಿ ಯಶಸ್ವಿಯಾಗಿ ಕಬ್ಬು ನುರಿಸಲಾಗುತ್ತಿದ್ದು, ಕಬ್ಬು ಕಟಾವು ಮಾಡುವ ಸಂಬಂಧ ಎಲ್ಲಾ ತಂಡಗಳನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡಲಾಗಿದೆ. ಕೆಲವು ತಂಡಗಳು ಮುಂಗಡ ಹಣವನ್ನು ಪಡೆದು ಕಬ್ಬು ಕಟಾವು ಮಾಡಲು ಬಂದಿರುವುದಿಲ್ಲ, ಆದರೆ ನೀಡಿರುವ ಮುಂಗಡ ಹಣಕ್ಕೆ ಭದ್ರತೆಯನ್ನು ಪಡೆಯಲಾಗಿದೆ. ಅವರಿಂದ ಹಣವನ್ನು ವಸೂಲಿ ಮಾಡಲು ದಾವೆಯನ್ನು ಹೂಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಹಲವಾರು ಜನತೆಯ ಹೋರಾಟ ಮತ್ತು ಹಾರೈಕೆಯಿಂದ ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿಕೊಂಡು ದಕ್ಷತೆಯಿಂದ ಕೆಲಸ-ಕಾರ್ಯಗಳನ್ನು ಮಾಡುತ್ತಿದ್ದೇವೆ. ಕಬ್ಬು ಕಟಾವು ಮಾಡಲು ವಿಳಂಬವಾಗಿರುವುದು ಸತ್ಯ ಅದಕ್ಕೆ ಕಾರಣ ಸಕ್ಕರೆ ಆಯುಕ್ತರ ಆದೇಶವೇ ವಿನಃ ಕಂಪನಿ ಅಲ್ಲ ಜುಲೈ ತಿಂಗಳಲ್ಲಿ ಕಾರ್ಖಾನೆ ಪ್ರಾರಂಭಿಸಿದ್ದಾರೆ ರೈತರಿಗೆ ತೊರಿದರೆಯಾಗುತ್ತಿರಲಿಲ್ಲ ಎಂದರು.
ಕಂಪನಿಯ ಸಾಲದ ಹೊರೆ ಕಡಿಮೆ
2024-25 ನೇ ಸಾಲಿನಲ್ಲಿ 2.50.000 ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಜೊತೆಗೆ 270 ಕೋಟಿ ಸಾಲ ಇದ್ದ ಕಂಪನಿಯ ಸಾಲವನ್ನು ತೀರುವಳಿ ಮಾಡಲು ಕ್ರಮವಹಿಸಿ ಈಗಾಗಲೇ ಮೈಸೂರು ಸಕ್ಕರೆ ಕಾರ್ಖಾನೆಯ ಜೆ.ಸಿ ರಸ್ತೆ, ಬೆಂಗಳೂರು. ಇಲ್ಲಿನ ಕಟ್ಟಡವನ್ನು ಕಾರ್ಖಾನೆಯ ಸುಪರ್ಧಿಗೆ ತೆಗೆದುಕೊಳ್ಳಲು ಮುಂದಾಗಿದ್ದೇವೆ, ಬಿ.ಬಿ.ಎಂ.ಪಿಯಲ್ಲಿ ಸುಮಾರು 06 ಕೋಟಿ ಆಸ್ತಿ ತೆರಿಗೆ ಬಾಕಿಯನ್ನು 2024-25 ನೇ ಸಾಲಿನಲ್ಲಿ ಒ.ಟಿ.ಎಸ್ ಮುಖಾಂತರ ಈ ಕೆಳಕಂಡಂತೆ ಹಣವನ್ನು ಪಾವತಿ ಮಾಡಿ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮೈಷುಗರ್ ಕಂಪನಿಯು ಬಿ.ಬಿ.ಎಂ.ಪಿ ಗೆ 2003 ರಿಂದ 2023-24 ವರೆಗೆ ಒಟ್ಟು ಒಟ್ಟು ಮೊತ್ತ ರೂ.5,82 ಕೋಟಿ ರೂ,ಗಳ ಸಾಲ ಪಾವತಿ ಮಾಡಬೇಕಾಗಿತ್ತು. ಈ ಪೈಕಿ ಕಂಪನಿಯು ಒಂದು ಬಾರಿ ಪರಿಹಾರ ಯೋಜನೆ (ಓ.ಟಿ.ಎಸ್) ಅಡಿಯಲ್ಲಿ 2.01 ಕೋಟಿ ರೂ.ಗಳ ಆಸ್ತಿ ತೆರಿಗೆ ಪಾವತಿಸಿ, ಕಂಪನಿಗೆ 3.81 ಕೋಟಿ ರೂ. ಗಳನ್ನು ಉಳಿತಾಯ ಮಾಡಲಾಗಿದೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ಮೈಷುಗರ್ ಕಾರ್ಖಾನೆಯು ಆರ್ಥಿಕವಾಗಿ ಸುಸ್ಥಿತಿಯಲ್ಲಿದು, ರೈತರಿಗೆ ಹಾಗೂ ಕಾರ್ಮಿಕರಿಗೆ ಹಣವನ್ನು ನೀಡುತ್ತಿದ್ದೇವೆ. ತಪ್ಪು ಮಾಹಿತಿಗಳಿಗೆ ಕಿವಿ ಕೊಡದೆ ಪಕ್ಷಾತೀತವಾಗಿ ಎಲ್ಲರೂ ಸಹಕರಿಸ ಮೈಸೂರು ಸಕ್ಕರೆ ಕಾರ್ಖಾನೆಯ ಯಶಸ್ವಿಗೆ ಕಾರಣರಾಗಬೇಕೆಂದು ಜನತೆಯಲ್ಲಿ ಮನವಿ ಮಾಡಿದರು.
- ಮೈಷುಗರ್ ಅಭಿವೃದ್ದಿಗಾಗಿ ಕೈಗೊಂಡ ಕ್ರಮಗಳು
- 1. ಕಂಪನಿಯ ಅಸ್ತಿಗಳನ್ನು ಸಂಪೂರ್ಣವಾಗಿ ಸ್ಥಳ ಪರಿಶೀಲನೆ
- 2. ಪ್ರತಿ ಗುರುವಾರ ತಾಂತ್ರಿಕ ಪರಿಣಿತರು ಹಾಗೂ ಆರ್.ಬಿ ಟೆಕ್ರವರ ಜೊತೆ ಕಂಪನಿಯ ಯಶಸ್ಸಿಗೆ ಕಡ್ಡಾಯ ಸಭೆಗಳು
- 3. ಪ್ರತಿ ತಿಂಗಳು ನೌಕರ ವೃಂದದೊಂದಿಗೆ ಪ್ರಗತಿ ಪರಿಶೀಲನೆ ಸಭೆ
- 4. ಪ್ರತಿ ತಿಂಗಳು ಟ್ರಸ್ಟ್ನ ಶಿಕ್ಷಣ ಸಂಸ್ಥೆಗಳ ಪ್ರಗತಿ ಪರಿಶೀಲನೆ ಸಭೆ
- 5. ಪ್ರತಿ ತಿಂಗಳು ಕಂಪನಿಯ ವಕೀಲರುಗಳ ಜೊತೆ ಕಂಪನಿಯ ಆಗು-ಹೋಗುಗಳ ಬಗ್ಗೆ ಸಭೆ
- 6. ಪ್ರತಿ ತಿಂಗಳು ಕ್ಷೇತ್ರ ಸಹಾಯಕರುಗಳ ಪ್ರಗತಿ ಪರಿಶೀಲನೆ ಸಭೆ ಜೊತೆಗೆ ವಿಭಾಗವಾರು ರೈತರ ಭೇಟಿ ಮತ್ತು ಕಬ್ಬು ನುರಿಸುವಿಕೆ ಸಂಬಂಧ ಹಿರಿತನದ ಆಧಾರದ ಪಟ್ಟಿ ತಯಾರಿಸಲಾಗಿದೆ
- 7. ಸತತವಾಗಿ ಪಕ್ಷಾತೀತವಾಗಿ ರೈತ ಪ್ರತಿನಿಧಿಗಳ ಜೊತೆ ಸಭೆಗಳು (ಕಂಪನಿಯ ಅಭಿವೃದ್ಧಿ ಸಂಬಂಧ).
- 8. ಹಿರಿಯ ನಿವೃತ್ತ/ಸ್ವಯಂ ನಿವೃತ್ತ ನುರಿತ ನೌಕರರ ಸತತ ಭೇಟಿ ಮತ್ತು ಅವರ ಹಿಂದಿನ ಸಮಸ್ಯೆಗಳಿಗೆ ಪರಿಹಾರ ನೀಡುವ ಸಂಬಂಧ ಸಭೆಗಳು
- 9. ಕಂಪನಿಯ ಹಿಂದಿನ ಅಧ್ಯಕ್ಷರುಗಳ ಜೊತೆ ಸಭೆಗಳು
- 10. ನೂತನ ಸಕ್ಕರೆ ಕಾರ್ಖಾನೆ ಸ್ಥಾಪನೆ ಸಂಬಂಧ ಪಕ್ಷಾತೀತವಾಗಿ ಹಿರಿಯ ಮುಖಂಡರು, ರೈತ ಪ್ರತಿನಿಧಿಗಳು ಹಾಗೂ ಹಿಂದಿನ ಅಧ್ಯಕ್ಷರುಗಳ ಸುದೀರ್ಘ ಚರ್ಚೆ
- 11. ಕಾರ್ಖಾನೆಯ ಎಲ್ಲಾ ಹಿಂಬಾಕಿಗಳ ವ್ಯಾಪ್ತಿಗಳು ಮತ್ತು ಸಂಸ್ಥೆಗಳ ಜೊತೆ ಚರ್ಚೆ ಮತ್ತು ನ್ಯಾಯಾಲಯದ ಹೊರಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ
- 12. ಸತತವಾಗಿ ಸಾಲ ನೀಡಿರುವ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿಗಳು (ಆಹಾರ ಮತ್ತು ನಾಗರೀಕ ಸರಬರಾಜು ನಿಗಮ, ಚೆಸ್ಕಾಂ, ಕೆ.ಎಸ್.ಐ.ಐ.ಡಿ.ಸಿ ಮತ್ತು ಬಿ.ಬಿ.ಎಂ.ಬಿ) ಭೇಟಿ ಮಾಡಲಾಗುತ್ತಿದೆ ಎಂದು ಗಂಗಾಧರ್ ತಿಳಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ದೇಶಹಳ್ಳಿ ಮೋಹನ್ ಕುಮಾರ್, ಮುಖಂಡರಾದ ಅಪ್ಪಾಜಿಗೌಡ, ನಾಗರಾಜು, ದ್ಯಾವಣ್ಣ, ಸುಂಡಹಳ್ಳಿ ಮಂಜುನಾಥ್, ಮಂಗಲ ಯೋಗೀಶ್, ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.




