Tuesday, May 14, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಚಿಕ್ಕರಸಿನಕೆರೆ ಗ್ರಾ.ಪಂ. ಅಧ್ಯಕ್ಷರಾಗಿ ಕಮಲಮ್ಮ ಬೋರೇಗೌಡ ಆಯ್ಕೆ

ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಚಿಕ್ಕರಸಿನಕೆರೆ ಗ್ರಾ.ಪಂ ಅಧ್ಯಕ್ಷರಾಗಿ ಕಮಲಮ್ಮ ಬೋರೇಗೌಡ, ಉಪಾಧ್ಯಕ್ಷರಾಗಿ ಸವಿತ ಚಿಕ್ಕಬೋರಯ್ಯ ಆಯ್ಕೆಯಾಗಿದ್ದಾರೆ.

ಮುಂದಿನ 30 ತಿಂಗಳ ಅವಧಿಗೆ ನಿಗಧಿಯಾಗಿದ್ದ ಚುನಾವಣೆ ವೇಳೆ ಒಟ್ಟು 14 ಸದಸ್ಯರ ಬಲದೊಂದಿಗೆ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಸಿಎಂ(ಬಿ) ವರ್ಗದಿಂದ ಸಿದ್ದರಾಜು, ಕಮಲಮ್ಮ ಬೋರೇಗೌಡ ಅವರು ನಾಮಪತ್ರ ಸಲ್ಲಿಸಿದ್ದರು.

ಕಮಲಮ್ಮ ಬೋರೇಗೌಡ ಅವರು 9 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಸಿದ್ದರಾಜು ಅವರು 5 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸವಿತಚಿಕ್ಕಬೋರಯ್ಯ ಅವರು ಅವಿರೋಧವಾಗಿ ಆಯ್ಕೆಗೊಂಡರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಗ್ರಾಮಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಪಂಚಾಯಿತಿಯ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಸಲಹೆ ನೀಡಿದರು.

ತಾ.ಪಂ ಮಾಜಿ ಸದಸ್ಯ ಭರತೇಶ್ ಮಾತನಾಡಿ, ಚಿಕ್ಕರಸಿನಕೆರೆ ಗ್ರಾಮ ಪಂಚಾಯಿತಿ ಈ ಹಿಂದಿನಿಂದಲೂ ಕಾಂಗ್ರೆಸ್ ಬೆಂಬಲಿತರ ತೆಕ್ಕೆಯಲ್ಲಿದೆ. ಗ್ರಾಮ ಪಂಚಾಯಿತಿ ಅಭಿವೃದ್ದಿಗೆ ಎಲ್ಲರೂ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ಭರತೇಶ್, ಮುಖಂಡರಾದ ಪುಟ್ಟೇಗೌಡ, ಸ್ವಾಮಿಗೌಡ, ಕುಮಾರ್, ಸಿದ್ದೇಗೌಡ, ಜಯರಾಮು, ಸದಸ್ಯರಾದ ಕೆ.ಸಿ.ನಂದಿನಿ ಭರತೇಶ್, ಗೌರಮ್ಮ ರಾಜು, ಕೆ.ರಮೇಶ್, ಸುಂದರ್, ಮಣಿ ವೆಂಕಸ್ವಾಮಿ, ಸವಿತ ಪ್ರಭುಸ್ವಾಮಿ, ಕುಮಾರ್, ಶಿವಲಿಂಗಯ್ಯ ಸೇರಿದಂತೆ ಮತ್ತಿತರರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಗೌರವಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!