Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ರಾಜ್ಯದಲ್ಲಿ ಹಿಂದಿ ಹೇರಿಕೆ ಕೈಬಿಡಲು ಕರವೇ ಆಗ್ರಹ

ರಾಜ್ಯದ ಮಕ್ಕಳ ಶಿಕ್ಷಣ ಪಠ್ಯಕ್ರಮದಲ್ಲಿ ದ್ವಿಭಾಷಾ ನೀತಿ ಬೇಕು-ತ್ರಿಭಾಷಾ ನೀತಿ ಸಾಕು, ಅನಾವಶ್ಯಕ ಹಿಂದಿ ಪಠ್ಯದ ಹೇರಿಕೆಯಿಂದಾಗಿ ನಾಡಿನ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಕಾರಣ, ರಾಜ್ಯ ಪಠ್ಯಕ್ರಮದಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಕಾರ್ಯಕರ್ತರ ಎಡಿಸಿ ಡಾ.ಹೆಚ್.ಎಲ್.ನಾಗರಾಜು ಅವರಿಗೆ ಮನವಿ ಮಾಡಿದರು.

ಕರವೇ ಮಂಡ್ಯ ಜಿಲ್ಲಾಧ್ಯಕ್ಷ ಹೆಚ್.ಡಿ.ಜಯರಾಂ ನೇತೃತ್ವದಲ್ಲಿ ಜಿಲ್ಲಾಡಳಿತ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮನವಿ ಸಲ್ಲಿಸಿದ ಕಾರ್ಯಕರ್ತರು, ಇಡೀ ದೇಶದಲ್ಲಿ ಹಿಂದಿ ಹೇರಿಕೆಯನ್ನು ಅನಗತ್ಯ ಹಾಗೂ ಅನಾವಶ್ಯಕವಾಗಿ ಮಾಡಿಕೊಂಡು ಬರಲಾಗಿದೆ.  ಕರ್ನಾಟಕ ಹಿಂದಿ ಹೇರಿಕೆಯ ಪ್ರಯೋಗಶಾಲೆಯಾಗಿ ಮಾಮಾರ್ಪಟ್ಟಿದೆಯೇ?! ಅನುಮಾನ ಉಂಟಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮಕ್ಕಳಿಗೆ ಪ್ರಾದೇಶಿಕ ಭಾಷೆಯಾಗಿ ಕನ್ನಡವನ್ನು ಹಾಗೂ ವಿಶ್ವವ್ಯಾಪಿ ಸಂವಹನಕ್ಕೆ ದ್ವೀತಿಯ ಭಾಷೆಯಾಗಿ ಆಂಗ್ಲಭಾಷೆಯನ್ನು ಕಲಿಯುತ್ತಿದ್ದಾರೆ, ಅದಲ್ಲದೇ ಅನೌಪಚಾರಿಕವಾಗಿದ್ದ ಹಿಂದಿ ಭಾಷೆಯನ್ನೂ 100 ಅಂಕಗಳ ಪಠ್ಯವಾಗಿ ಮಾರ್ಪಡಿಸಿ ಮಕ್ಕಳ ಮೇಲೆ ಹೇರಲಾಗಿದೆ. ಈ ಕಾರಣದಿಂದ ಮಕ್ಕಳು ಗಣಿತ, ವಿಜ್ಞಾನ ಪಠ್ಯಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿಲ್ಲ.ಅನಾವಶ್ಯಕ ಹಿಂದಿ ಪಠ್ಯದ ಹೇರಿಕೆಯಿಂದ ಮಕ್ಕಳ ಶಿಕ್ಷಣ ಹಾಗೂ ಮುಂದಿನ ಭವಿಷ್ಯದ ಜೀವನವು ಮಾರಕವಾಗಿದೆ. ಈ ಕಾರಣದಿಂದ ಕರ್ನಾಟಕ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಸರ್ಕಾರಿ ಶಾಲೆಗಳು ಹಾಗೂ ರಾಜ್ಯ ಪಠ್ಯಕ್ರಮದಲ್ಲಿ ಶಾಲೆ ನಡೆಸುತ್ತಿರುವ ರಾಜ್ಯದ ಖಾಸಗಿ, ಅರೆಖಾಸಗಿ ಹಾಗೂ ಅನುದಾನಿತ ಶಾಲೆಗಳು ಸೇರಿದಂತೆ ಮಠಮಾನ್ಯಗಳ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ವಿಭಾಗಗಳಲ್ಲಿ ದ್ವಿಭಾಷಾ ನೀತಿಯನ್ನಷ್ಟೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುದ್ದೇಗೌಡ, ಪ್ರಜ್ವಲ್, ಸರ್ವೇಶ್ ಹಾಗೂ ಮನೋಹರ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ