Friday, September 27, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಗಣಪತಿ ವಿಸರ್ಜನೆಗೆ ಮುನ್ನ ಹಿಂದೂ- ಮುಸ್ಲಿಂ ಬಾಂಧವರ ಶಾಂತಿಸಭೆ

ಕೆ.ಆರ್.ಪೇಟೆ ಪಟ್ಟಣದ ಧರ್ಮ ಧ್ವಜ ಸೇವಾ ಸಮಿತಿಯ ವತಿಯಿಂದ ಪ್ರತಿಷ್ಟಾಪಿಸಿರುವ ಗಣಪತಿಯ ವಿಸರ್ಜನೆಯು ಇದೇ ಸೆ.28ರ ಶನಿವಾರ ಕೃಷ್ಣರಾಜಪೇಟೆ ಪಟ್ಟಣದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಟೌನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಮಾರಾಣಿ ಅವರ ಅಧ್ಯಕ್ಷತೆಯಲ್ಲಿ ಹಿಂದೂ ಮುಸ್ಲಿಂ ಭಾಂದವರ ಶಾಂತಿ ಸಮಿತಿ ಸಭೆಯು ನಡೆಯಿತು.

ಕೆ.ಆರ್.ಪೇಟೆ ಪಟ್ಟಣವು ಕೋಮು ಸೌಹಾರ್ಧತೆಗೆ ಹಾಗೂ ಹಿಂದೂ-ಮುಸ್ಲಿಂ ಭಾಂದವ್ಯಕ್ಕೆ ರಾಜ್ಯದಲ್ಲಿಯೇ ಹೆಸರು ವಾಸಿಯಾಗಿದ್ದು ಈ ಭಾಂದವ್ಯವು ಇದೇ ರೀತಿ ಮುಂದುವರೆಯಬೇಕು ರಾಜ್ಯಕ್ಕೆ ಸೌಹಾರ್ಧತೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಶನಿವಾರ ನಡೆಯಲಿರುವ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮೆರವಣಿಗೆ ಹಾಗೂ ಪೂಜಾ ಸಂಭ್ರಮದಲ್ಲಿ ಭಾಗವಹಿಸೋಣ ಎಂದು ಸುಮಾರಾಣಿ ಮನವಿ ಮಾಡಿದರು.

ಕೃಷ್ಣರಾಜಪೇಟೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬರುವ ಹಿಂದೂ ಮಹಾ ಗಣಪತಿಯ ಮೆರವಣಿಗೆಯನ್ನು ಮುಸ್ಲಿಂ ಭಾಂದವರು ಸ್ವಾಗತಿಸಿ ಪೂಜೆ ಮಾಡಿ ಪ್ರಸಾದ ಹಾಗೂ ಮಜ್ಜಿಗೆ ಪಾನಕ ವಿತರಿಸಿ ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ಸಾರೋಣ ಎಂದು ಮನವಿ ಮಾಡಿದ ಪುರಸಭೆ ಮಾಜಿ ಅಧ್ಯಕ್ಷ ನಟರಾಜ್ ಕೆ. ಆರ್.ಪೇಟೆ ಪಟ್ಟಣದ ಇತಿಹಾಸದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಇದುವರೆಗೂ ಯಾವುದೇ ಸಂಘರ್ಷ ನಡೆದಿಲ್ಲ, ಮುಂದೆಯೂ ನಡೆಯುವುದಿಲ್ಲ. ಮುಸ್ಲಿಂ ಹಾಗೂ ಹಿಂದೂ ಗಳಾದ ನಾವೆಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಅಣ್ಣ ತಮ್ಮಂದಿರಂತೆ ಒಂದಾಗಿ ಜೀವನ ನಡೆಸುತ್ತಿದ್ದೇವೆ ಅಂತೆಯೇ ಮುಂದೆಯೂ ನಾಡಿಗೆ ನಾವೆಲ್ಲರೂ ಒಂದಾಗಿ ಭಾವೈಕ್ಯತೆಯ ಸಂದೇಶ ನೀಡೋಣ ಎಂದು ನಟರಾಜ್ ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಕೆ. ಗೌಸ್ ಖಾನ್, ಮುಖಂಡರಾದ ಸೌಧಿ ಫಯಾಜ್, ನದೀಮ್, ನಯಾಜ್ ಪಾಷ, ದಲಿತ ಮುಖಂಡ ಊಚನಹಳ್ಳಿ ನಟರಾಜ್, ಆರ್ ಎಸ್ ಎಸ್ ಮಂಜುನಾಥ್, ರೆಹಮಾನ್, ಸೈಯದ್ ಕಲೀಲ್, ಸೈಯ್ಯದ್ ಮನಾವರ್, ರಿಯಾಜ್ ಖಾನ್, ನಲ್ಲಿ ರಿಯಾಜ್, ಚಂದ್ ಬೈಯ್ಯ, ಕಾರ್ಖಾನೆ ಬಶೀರ್ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!