Saturday, May 18, 2024

ಪ್ರಾಯೋಗಿಕ ಆವೃತ್ತಿ

ಕುಮಾರಸ್ವಾಮಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು : ಸಿ.ಎಸ್. ಪುಟ್ಟರಾಜು

ರೈತರು ಹಾಗೂ ಬಡವರ ಧ್ವನಿಯಾಗಿ ಕಾರ್ಯನಿರ್ವಹಿಸುವ ಕುಮಾರಸ್ವಾಮಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಕುಮಾರಸ್ವಾಮಿ ಸಂಪುಟದಲ್ಲಿ ಕ್ಷೇತ್ರದ ಜನಪ್ರತಿನಿಧಿಯಾಗಿ ನಾನು ಸಚಿವನಾಗಿ ಕಾರ‍್ಯನಿರ್ವಹಿಸಬೇಕು ಶಾಸಕ ಸಿ.ಎಸ್. ಪುಟ್ಟರಾಜು ಮನದಾಸೆಯನ್ನ ವ್ಯಕ್ತಪಡಿಸಿದರು.

ಮೇಲುಕೋಟೆ ಕ್ಷೇತ್ರ ವ್ಯಾಪ್ತಿಯ ಮಂಡ್ಯ ತಾಲ್ಲೂಕು ದುದ್ದ ಹೋಬಳಿಯ ಆನಕೊಪ್ಪ ಗ್ರಾಮದಲ್ಲಿ ಆಯೋಜನೆಗೊಂಡಿದ್ದ ಜಾ.ದಳ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರೈತರ ಧ್ವನಿಯಾಗಿರುವ ಜಾ.ದಳ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ಕ್ಷೇತ್ರದ ಜನತೆ ಆಶೀರ್ವದಿಸಬೇಕು, ಇದಕ್ಕಾಗಿ ದುದ್ದ ಹೋಬಳಿಯ ಪ್ರಜ್ಞಾವಂತ ಮತದಾರರು ಜಾ.ದಳ ಬೆಂಬಲಿಸಬೇಕೆಂದು ಕೋರಿದರು.

ಜಾ.ದಳ ಅಧಿಕಾರಕ್ಕೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ಮೀರಿ ಜಾ.ದಳ ಅಧಿಕಾರಕ್ಕೆ ಬರಲಿದ್ದು, ಸೂರ್ಯ-ಚಂದ್ರರು ಉದಯಿಸಿದಷ್ಟೇ ಖಚಿತವಾಗಿ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಕುಮಾರಸ್ವಾಮಿ ಅಧಿಕಾರ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರ ದೇವತೆ ಪಟ್ಟಲದಮ್ಮ (ಆನಕುಪ್ಪಮ್ಮ) ಈ ಭಾಗದ ಶಕ್ತಿ ದೇವತೆಯಾಗಿದ್ದು, 2018ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕರ‍್ಯಕರ್ತರು ಪೂಜೆ ಸಲ್ಲಿಸಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕೆAದು ಹರಕೆ ಕಟ್ಟಿಕೊಂಡಿದ್ದರು. ಅದರಂತೆ ಮುಂಬರುವ ಚುನಾವಣೆಯಲ್ಲೂ ದೇವಿಯ ಹಾರೈಕೆ ಪಕ್ಷದ ಮೇಲಿರಲಿ ಎಂದು ಪ್ರಾರ್ಥಿಸಿದರು.

ಸಮಗ್ರ ಅಭಿವೃದ್ಧಿಗೆ ಆದ್ಯತೆ

ನಾನು ಶಾಸಕನಾಗಿ ಕಾರ‍್ಯನಿರ್ವಹಿಸುವ ವೇಳೆ ದುದ್ದ ಹೋಬಳಿ ವ್ಯಾಪ್ತಿಯ 11 ಗ್ರಾಮ ಪಂಚಾಯಿತಿಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ. ಏತನೀರಾವರಿ ಮೂಲಕ 54 ಕೆರೆಗಳಿಗೆ ನೀರು ತುಂಬಿಸುವ ಜತೆಗೆ ಹೆಚ್ಚುವರಿಯಾಗಿ 18 ಕೆರೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಮಳೆಯಾಶ್ರಿತ ಪ್ರದೇಶಗಳಿಗೆ ನೀರೊದಗಿಸುವ ಕರ‍್ಯದಲ್ಲಿ ಎದುರಾದ ತೊಡಕುಗಳನ್ನು ನಿವಾರಿಸಿ ಯಶಸ್ವಿಯಾಗಿದ್ದೇನೆ ಎಂದು ತಿಳಿಸಿದರು.

ಕ್ಷೇತ್ರದ ಜನರು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ ಋಣ ತೀರಿಸಲು ವರ್ಷದ 365 ದಿನವೂ ಜನರ ಸಂಕಷ್ಟಕ್ಕೆ ಧನಿಯಾಗಿದ್ದೇನೆ. ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳು ನನ್ನ ಅವಧಿಯಲ್ಲಿ ಪೂರ್ಣಗೊಂಡಿದ್ದು, ಕಳೆದ ಚುನಾವಣೆಯಲ್ಲಿ ಪರಾಭವಗೊಂಡವರು ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಕ್ಷೇತ್ರದಿಂದ ದೂರವಿದ್ದು, ಈಗ ಜನರ ಬಳಿ ಬಂದು ಅನುಕಂಪದ ಮಾತನಾಡುವುದು ಸರಿಯಲ್ಲ. ಇಂತಹವರಿಂದ ಜಿಲ್ಲೆಯ ರಾಜಕಾರಣದ ವ್ಯವಸ್ಥೆ ಹದಗೆಡಲಿದೆ ಎಂದು ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಬಿ.ಆರ್. ರಾಮಚಂದ್ರು ಮಾತನಾಡಿ, ಸಿ.ಎಸ್. ಪುಟ್ಟರಾಜು ಅವರು ನಮ್ಮ ಶಾಸಕರಾಗಿರುವ ನಮ್ಮೆಲ್ಲರ ಪುಣ್ಯ. ಈ ಭಾಗದ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ನೀರಾವರಿ ಯೋಜನೆ ಸಾಕಾರ, ರಸ್ತೆ ಅಭಿವೃದ್ಧಿ, ದೇವಾಲಯ ನಿರ್ಮಾಣಕ್ಕೆ ಲಕ್ಷಾಂತರ ರೂ. ಹಣವನ್ನು ತಮ್ಮ ಗಳಿಕೆಯಲ್ಲಿ ವ್ಯಯಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ‍್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಬಿ. ಶಿವಕುಮಾರ್, ಮುಖಂಡರಾದ ಬದ್ರಿನಾರಾಯಣ್, ಶಂಕರೇಗೌಡ, ಸಿ.ಮಾದಪ್ಪ, ಅಶೋಕ್ ಬಾಲರಾಜು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!