Sunday, October 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಅಧ್ಯಾಪನ ವಿಜ್ಞಾನೋತ್ಸವ ವಿಜೇತ ಮಕ್ಕಳಿಂದ ಇಸ್ರೋ ಮ್ಯೂಸಿಯಂ ಭೇಟಿ

ಅಧ್ಯಾಪನ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಅಧ್ಯಾಪನ ವಿಜ್ಞಾನೋತ್ಸವ-2024ರ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳನ್ನು ಇಸ್ರೋ ಮ್ಯೂಸಿಯಂ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಅಕ್ಟೋಬರ್ 4,6 ಮತ್ತು 10ರಂದು ಭೇಟಿ ನೀಡಲು ಕರೆದುಕೊಂಡು ಹೋಗಲಾಗುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷೆ ದಿವ್ಯಶ್ರೀ ಎಂ.ಜಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ವಿಭಾಗ ಮಟ್ಟದಲ್ಲಿ 292 ಮಕ್ಕಳು ವಿಜೇತರಾಗಿದ್ದು, 146 ಬಹುಮಾನ, ಜಿಲ್ಲಾ ಮಟ್ಟದಲ್ಲಿ 12 ಮಕ್ಕಳಿಗೆ 6 ಬಹುಮಾನ ಹಾಗೂ ಹ್ಯಾಕಥಾನ್ ಸ್ಪರ್ಧೆಯಲ್ಲಿ 14 ತಂಡಗಳ ಪೈಕಿ 108 ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ ಎಂದು ಹೇಳಿದರು.

ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣ ವಿಭಾಗದ 42 ಮಕ್ಕಳಿಗೆ 21 ಬಹುಮಾನ, ನಾಗಮಂಗಲದ 46 ಮಕ್ಕಳಿಗೆ 23 ಬಹುಮಾನ, ಮಳವಳ್ಳಿಯ 40 ಮಕ್ಕಳಿಗೆ 20 ಬಹುಮಾನ, ಮದ್ದೂರಿನ 42 ಮಕ್ಕಳಿಗೆ 21 ಬಹುಮಾನ, ಪಾಂಡವಪುರದ 30 ಮಕ್ಕಳಿಗೆ 15 ಬಹುಮಾನ, ಮಂಡ್ಯ ದಕ್ಷಿಣ ವಲಯದ 50 ಮಕ್ಕಳಿಗೆ 25 ಬಹುಮಾನ, ಮಂಡ್ಯ ಉತ್ತರ ವಲಯದ 6 ಮಕ್ಕಳಿಗೆ 3 ಬಹುಮಾನ, ಕೆ.ಆರ್.ಪೇಟೆಗೆ 36 ಮಕ್ಕಳಿಗೆ 18 ಬಹುಮಾನ ದೊರೆತಿವೆ ಎಂದು ವಿವರಿಸಿದರು.

ಅ.4 ಮತ್ತು 10 ರಂದು 7ನೇ ತರಗತಿ ಮೇಲ್ಪಟ್ಟದ ಮಕ್ಕಳನ್ನು ಇಸ್ರೋ ಮ್ಯೂಸಿಯಂಗೆ ಕರೆದೊಯ್ಯಲಾಗುತ್ತಿದ್ದು, ಅ.6ರಂದು 5 ಮತ್ತು 6ನೇ ತರಗತಿಯ 100 ಮಕ್ಕಳನ್ನು ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದ ಅವರು, ಇಸ್ರೋದಲ್ಲಿ 7ನೇ ತರಗತಿ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಪ್ರವೇಶ ನೀಡುವುದಾಗಿ ಬದಲಾವಣೆಗಳನ್ನು ಮಾಡಿದ್ದರಿಂದಾಗಿ 5 ಮತ್ತು 6ನೇ ತರಗತಿಯ ಮಕ್ಕಳಿಗೆ ಇಸ್ರೋ ವತಿಯಿಂದಲೇ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ ಭೇಟಿಯ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ಟ್ರಸ್ಟ್ ಸಹ ಸಂಚಾಲಕರಾದ ಪ್ರೇಮ್‌ಕುಮಾರ್, ಪೃಥ್ವಿ, ಪ್ರಿಯಾಂಕ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!