Saturday, October 19, 2024

ಪ್ರಾಯೋಗಿಕ ಆವೃತ್ತಿ

ದಕ್ಷಿಣ ಹಾಗೂ ಉತ್ತರ ಒಳನಾಡಿನ 20 ಜಿಲ್ಲೆಗಳಲ್ಲಿ ಮಳೆ: ಯೆಲ್ಲೋ ಅಲರ್ಟ್ ಘೋಷಣೆ

ಕರ್ನಾಟಕದಲ್ಲಿ ಮತ್ತೆ ಮಳೆ ಶುರುವಾಗಿದೆ, ಕರ್ನಾಟಕದ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದ್ದು, ಕರಾವಳಿಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೊಪ್ಪಳ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ ಮೈಸೂರು, ರಾಮನಗರ, ಶಿವಮೊಗ್ಗ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಅ.03 ರಂದು ಗುಬ್ಬಿ ರಾಮನಗರ, ಮಧುಗಿರಿ, ಕೊಳ್ಳೇಗಾಲ, ಬಸವನಬಾಗೇವಾಡಿ, ಇಂಡಿ, ಕುಕನೂರು, ಕೃಷ್ಣರಾಜಸಾಗರ, ಗೌರಿಬಿದನೂರು, ಕೋಲಾರ, ಬೈಲಹೊಂಗಲ, ಮುದಗಲ್, ನೆಲೋಗಿ, ಚಾಮರಾಜನಗರ, ರಾಯಲ್ಪಾಡು, ಎಂಎಂ ಹಿಲ್ಸ್, ಖಜೂರಿ, ಶಹಾಪುರ, ಸಿಂದಗಿ, ಕೆಂಭಾವಿ, ಸಿರಾ, ಮದ್ದೂರು, ವೈಎನ್ ಹೊಸಕೋಟೆ, ನಂಜನಗೂಡಿನಲ್ಲಿ ಮಳೆಯಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!